ಪೊಲೀಸ್‌ರಿಗೆ ಪ್ರತ್ಯೇಕ ಕೋವಿಡ್ ಸೆಂಟರ್ ತೆರೆಯುವಂತೆ ಮನವಿ

0
17

ಕಲಬುರಗಿ: ಪೋಲಿಸ್‌ರಿಗೆ ಮಂಗಳೂರು ಮಾದರಿ ಯುನಾನಿ ಆಸ್ಪತ್ರೆಯಲ್ಲಿ ಅಥವಾ ಬೇರೆ ಸೂಕ್ತ ಸ್ಥಳದಲ್ಲಿ ಆಕ್ಸಿಜನ್, ವೆಂಟಿಲೇಟರ್, ಹಾಗೂ ಸುಸ್ಸಜ್ಜಿತವಾದ ಐಸಿಯು ಬೆಡ್ ಹೊಂದಿರುವ ಪ್ರತ್ಯೇಕವಾಗಿ ಕೋವಿಡ್ ಸೆಂಟರ್ ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೋಲಿಸ್ ಫ್ಯಾನ್ಸ್ ಆಸೋಶಿಯೇಶನ್, ಕಲಬುರಗಿಯ ಅಧ್ಯಕ್ಷರಾದ ಸಂತೋಷ ಶಕಾಪೂರೆ ಅವರು ಕಲಬುರಗಿಯ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದರು.

ಮಹಾಮಾರಿ ಕರೋನಾ ಕಳೆದ ವರ್ಷದಿಂದಲೂ ದೇಶದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಂದರ್ಭದಲ್ಲೂ ಕೋವಿಡ್ ಸೊಂಕನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳೂ ಹಾಗೂ ಸಿಬ್ಬಂದಿಯವರು ಕರೋನಾ ಫ್ರಂಟ್ ಲೈನ್ ಸಂಧರ್ಭ ಹಾಗೂ ಇನ್ನಿತರ ಕಷ್ಠದ ವೇಳೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಕೋವಿಡ್ ದೃಢಪಟ್ಟಿದೆ. ಕೆಲವರು ಸೊಂಕಿನಿಂದ ಮೃತಪಟ್ಟಿರುವುದು ಕಂಡು ಬಂದಿದ್ದು ದುರ್ದೈವದ ಸಂಗತಿ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈ ನಿಟ್ಟಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಪೊಲೀಸ್‌ರು ಸೇವೆ ಅಗತ್ಯವೆಷ್ಟಿದೆಯೋ ಅಷ್ಟೇ ಅವರ ಆರೋಗ್ಯವು ಕೂಡಾ ಬಹಳ ಮಹತ್ವದಾಗಿದೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಅವರಿಗಾಗಿಯೇ ನಗರದಲ್ಲಿ ಮಂಗಳೂರು ನಗರದ ಮಾದರಿಯಲ್ಲಿ ಆಕ್ಸಿಜನ್, ವೆಂಟಿಲೇಟರ್, ಹಾಗೂ ಐಸಿಯು ಬೆಡ್ ಸೇರಿದಂತೆ ಸುಸ್ಸಜ್ಜಿತವಾಗಿ ಪ್ರತ್ಯೇಕವಾಗಿ ಕೋವಿಡ್ ಸೆಂಟರ್ ಪ್ರಾರಂಬಿಸಿದರೆ ಅವರಿಗೆ ಬಹಳಷ್ಟು ಅನುಕೂಲ ಮಾಡಿದಂತಾಗುತ್ತದೆ. ಅಲ್ಲದೇ ಈಗಾಗಲೇ ಪೊಲೀಸ್‌ರಿಗಾಗಿ ನಗರದಲ್ಲಿ ಪ್ರಾರಂಬಿಸಿರುವ ಯುನಾನಿ ಆಸ್ಪತ್ರೆಯಲ್ಲಿ ಕೆವಲ ಸಾಮಾನ್ಯ ಬೆಡ್‌ಗಳು ಹೊಂದಿವೆ. ಇ

ಲ್ಲಿ ಯಾವುದೇ ರೀತಿಯ ಹೆಚ್ಚಿನ ಚಿಕಿತ್ಸೆ ಪಡೆಯಲು ಆಗುವುದಿಲ್ಲ ತುರ್ತಾಗಿ ಇಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯಗಳನ್ನು ನೀಡಿ ಕೋವಿಡ್ ಸೊಂಕಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಆರೋಗ್ಯವನ್ನು ರಕ್ಷಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಸವರಾಜ, ಜಾಕಿರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here