ಸುರಪುರ: ಕೆ.ಹೆಚ್.ಪಿ.ಟಿ ಮತ್ತು ಆಶ್ರಯ ಹಸ್ತ ಟ್ರಸ್ಟ್ ಬೆಂಗಳೂರು ಇವರಿಂದ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹುಣಸಗಿ ಮತ್ತು ಸುರಪುರ ತಾಲೂಕುಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಸ್ಫೂರ್ತಿ-ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣ ಕಾರ್ಯಕ್ರಮದ ಉದ್ಘಾಟ ಕಾರ್ಯಕ್ರಮ ನಡೆಸಲಾಯಿತು.
ಇದನ್ನೂ ಓದಿ: ಕಲಬುರಗಿ-ಸಂಸದರ ಸಹೋದರ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ : ರಾಜೀನಾಮೆಗೆ ಪಟ್ಟು
ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸುರಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳಾದ ಚಂದ್ರಶೇಖರ್ ಪವಾರ್, ಯಾದಗಿರಿ ಜಿಲ್ಲೆಗೆ ಸ್ಫೂರ್ತಿ ಯೋಜನೆಯು ಅತಿ ಪ್ರಮುಖ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಪ್ರದೇಶದ ಹದಿಹರೆಯದ ಹೆಣ್ಣುಮಕ್ಕಳ ಬದುಕಲ್ಲಿ ಸಕರಾತ್ಮಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಲಿಯೆಂದು ಆಶಿಸಿದರು. ಜೊತೆಗೆ ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಸರ್ಕಾರಿ ಇಲಾಖೆಗಳ ಬೆಂಬಲ ಸದಾ ಇದೆಯೆಂದು ತಿಳಿಸಿದರು.
ಇದನ್ನೂ ಓದಿ: ಜೇವರ್ಗಿ: ಶೈಕ್ಷಣಿಕ ಪ್ರಗತಿಗೆ ಧರಂಸಿಂಗ್ ಫೌಂಡೇಷನ್ ಕಟಿಬದ್ಧ- ಶಾಸಕ ಡಾ. ಅಜಯ್ ಸಿಂಗ್
ಕಾರ್ಯಕ್ರಮದಲದಲ್ಲಿ ಉಪಸ್ಥಿತರಿದ್ದ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ರಾಜಾ ವೆಂಕಪ್ಪ ನಾಯಕ ಮಾತನಾಡುತ್ತ, ಹದಿಹರೆಯದ ವಯಸ್ಸು ವ್ಯಕ್ತಿಯೊಬ್ಬನ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆ ಕಾರಣಕ್ಕೆ ಈ ಹಂತದಲ್ಲಿ ದೈಹಿಕ, ಮಾನಸಿಕ ಮತ್ತು ಸಮೃದ್ಧಿ ಪ್ರತಿಯೊಂದು ಹೆಣ್ಣುಮಕ್ಕಳಲ್ಲಿ ರೋಡಿಸಿಕೊಳ್ ಬೇಕು ಎಂದು ಕಾರ್ಯಕ್ರಮ ಕುರಿತು ಮಾತನಾಡಿದರು.
ಡಾ. ಸತ್ಯನಾರಾಯಣ ಹದಿಹರೆಯದ ಅರೋಗ್ಯ ವಿಭಾಗದ ಮಖ್ಯಸ್ಥರು ಬೆಂಗಳೂರು, ಇವರು ಕಾರ್ಯಕ್ರಮದ ಕುರಿತು ಸುರಪುರ ಮತ್ತು ಹುಣಸಗಿ ಭಾಗದ ಎಲ್ಲಾ ಗ್ರಾಮ ಗಳಲ್ಲಿ ಹೆಣ್ಣುಮಕ್ಕಳು ಮಕ್ಕಳ ಸಬಲೀಕರಣ ಹಾಗೂ ಅವರ ಶಿಕ್ಷಣ ಅರೋಗ್ಯ ಪೌಷ್ಟಿಕ ಮಟ್ಟ ಮತ್ತು ಬಾಲ್ಯ ವಿವಾಹ ಕಡಿಮೆ ಮಾಡುವುದು ತುಂಬಾ ಅತ್ಯಗತ್ಯ ವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಲಬುರಗಿಯಲ್ಲಿ ಮೌನ ಸತ್ಯಾಗ್ರಹ
ಶ್ರೀಮಾರುತಿ ಆಶ್ರಯ ಅಸ್ತ ಟ್ರಸ್ಟ್ ಬೆಂಗಳೂರು ಸ್ಫೂರ್ತಿ ಯೋಜನೆ ಏಊPಖಿ ಸಂಸ್ಥೆ ವತಿಯಿಂದ ಆರ್ಥಿಕವಾಗಿ ನೆರವು ಒದಗಿಸಿದ್ದು. ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣ ಕಾರ್ಯಕ್ರಮ ಹೆಣ್ಣುಮಕ್ಕಳು ಶಿಕ್ಷಣ ದಿಂದ ಯಾರು ಕೂಡ ವಂಚಿತವಗಬಾರದು ಎಲ್ಲಾ ರಂಗದಲ್ಲಿ ಹೆಣ್ಣು ಮಕ್ಕಳು ಬೆಳವಣಿಗೆ ಸಾಧಿಸಬೇಕು ಪ್ರತಿಯೊಂದು ಹೆಣ್ಣು ಮಗು ತನ್ನ ಮುಂದಿನ ಜೀವನ ಗುರಿಯನ್ನು ತಲುಪಬೇಕು ಯಾರು ಕೂಡ ಅವಕಾಶ ವಂಚಿತ ವಾಗಬಾರದು ಮುಂದಿನ ಭವಿಷ್ಯ ಉತ್ತಮವಾಗಿ ರುಪಿಸಿಕೊಳ್ಳಬೇಕು ಎಂದು ಸಭೆ ಕುರಿತು ಹೇಳಿದರು
ಸಾವಿತ್ರಿ ಅಂಗನವಾಡಿ ಮೇಲ್ವಿಚಾರಕಿ ಕಾರ್ಯಕ್ರಮ ಕುರಿತು ಮಾತಾನಾಡಿ, ಹೆಣ್ಣುಮಕ್ಕಳು ಎಲ್ಲಾ ರಂಗದಲ್ಲಿ ಬೆಳವಣಿಗೆ ಸಾಧಿಸಬೇಕು ಹಾಗೂ ಏಊPಖಿ ಸಂಸ್ಥೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ: ಕಳ್ಳಭಟ್ಟಿ ಸರಾಯಿ- ಕಲಬೆರಕಿ ಸೇಂದಿ ವಶಪಡಿಸಿಕೊಂಡ ಅಬಕಾರಿ ಪೊಲೀಸರು
ಚಿಂತನ್ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಸ್ಫೂರ್ತಿ ಯೋಜನೆ ಏಊPಖಿ ಯಾದಗಿರಿ ಕಾರ್ಯಕ್ರಮ ಬಗ್ಗೆ ಕಾರ್ಯಕ್ರಮ ಮುಂದಿನ ಮೂರು ವರ್ಷಗಳಲ್ಲಿ ಪ್ರತಿಯೊಂದು ಹೆಣ್ಣುಮಕ್ಕಳಗೆ ತಲುಪುವಾಗೆ ಮಾಡಬೇಕು ಎಂದು ತಿಳಿಸಿದರು
ಕಾರ್ಯಕ್ರಮ ದ ನಿರೋಪಣೆ ಯನ್ನು ಶೀಲಾ ಸಂಯೋಜಕರು ನೆರವೇರಿಸಿದರು, ಜೆಲ್ಲಾ ಸಂಯೋಜಕ ಚಿಂತನ ಸ್ವಾಗತ ನೆರವೇರಿಸಿದರು. ವಂದನೆ ಯನ್ನು ತಾಲೂಕು ಸಂಯೋಜಕ ಶಿವರಾಜ ನಾಯಕ ನೆರವೇರವೇರಿಸಿದರು.ಕಾರ್ಯಕ್ರಮದಲ್ಲಿ ತಾಲೂಕಿನ ಏಊPಖಿ ಸಂಯೋಜಕರು ಹಾಗೂ ಸಿಬ್ಬಂದಿ ವರ್ಗ ಸೇರಿ ಅನೇಕ ಜನ ಮಹಿಳೆಯರು ಹಾಗು ಕಿಶೋರಿಯರು ಭಾಗವಹಿಸಿದ್ದರು.
ಇದನ್ನೂ ಓದಿ: ಕಲಬುರಗಿ-ಸಂಸದರ ಸಹೋದರ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ : ರಾಜೀನಾಮೆಗೆ ಪಟ್ಟು