ವಿವಿಧ ಪಕ್ಷದ ಯುವಕರು-ಮಹಿಳೆಯರು ಬಿಜೆಪಿಗೆ ಸೇರ್ಪಡೆ

0
35

ಶಹಾಬಾದ : ನಗರದ ಬಿಜೆಪಿಮಂಡಲ ಕಾರ್ಯಾಲಯದಲ್ಲಿ ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಅವರ ಸಮ್ಮುಖದಲ್ಲಿ ಮಹಿಳಾ ಮೋರ್ಚಾ ವತಿಯಿಂದ ಇನ್ನೂರಕ್ಕು ಹೆಚ್ಚು ಮಹಿಳೆಯರು ಮತ್ತು ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.ಮಹಿಳೆಯರನ್ನು ಹಾಗೂ ಯುವಕರಿಗೆ ಬಿಜೆಪಿ ಪಕ್ಷದ ಶಾಲನ್ನು ಹೊದಿಸುವ ಮುಖಾಂತರ ಅವರಿಗೆ ಪಕ್ಷಕ್ಕೆ ಬರಮಾಡಿಕೊಂಡರು.

ಜಯಶ್ರೀ ಮತ್ತಿಮಡು ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಪಡೆಯುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ವಿಶ್ವಾಸ ವ್ಯಕ್ತಪಡಿಸಿದರು.ನಮ್ಮ ಶಾಸಕರಿಗೆ ಸಿಕ್ಕ ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಜನರಿಗೆ ಉತ್ತಮ ಸ್ಪಂದನೆ ನೀಡಿದ್ದಾರೆ.

Contact Your\'s Advertisement; 9902492681

ಕಷ್ಟದಿಂದ ಬಂದವರಿಗೆ ಸಹಾಯ ಮಾಡಿದ್ದೆವೆ. ನಿಮ್ಮ ಗ್ರಾಮಗಳಿಗೆ ಬಂದಾಗ ಗ್ರಾಮದ ಜನÀರಿಂದಲೂ ಉತ್ತಮ ಸ್ಪಂದನೆ ಹಾಗೂ ಪ್ರೀತಿ ನಮಗೆ ಲಭಿಸಿದೆ. ಐದು ವರ್ಷಗಳ ಅವಧಿಯಲ್ಲಿ ಜನರಿಗೋಸ್ಕರ ಫುಲ್ ಟೈಮ್ ಜನಸೇವಕನಾಗಿ ಜನಪರವಾದ ಕೆಲಸ ಮಾಡಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ.ಅವರ ಹೆಗಲಿಗೆ ಹೆಗಲಾಗಿ ನಾನು ಸಾಕಷ್ಟು ಕ್ಷೇತ್ರದ ಜನರ ಜತೆಗೆ ಬೆರೆತಿದ್ದೆನೆ.ಕ್ಷೇತ್ರದ ಜನರು ಒಳ್ಳೆಯವರಿದ್ದಾರೆ.ಅವರ ಭರವಸೆಗಳನ್ನು ಈಡೇರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೆವೆ.ಮುಂದೆಯೂ ಮಾಡುತ್ತೆವೆ.ಬರುವ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ನೀಡುವ ಮೂಲಲ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಪಕ್ಷದ ಪ್ರಮುಖರಾದ ಶ್ರೀಮತಿ ಜಯಶ್ರೀ ಬಸವರಾಜ ಮತ್ತಿಮಡು, ಕಲಬುರಗಿ ಗ್ರಾಮಿಣ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಶರ್ಮ, ಕಲಬುರಗಿ ಗ್ರಾಮಿಣ ಜಿಲ್ಲಾ ಮಹಿಳಾ ಮೊರ್ಚಾ ಅಧ್ಯಕ್ಷರು ಶ್ರೀಮತಿ ಭಾಗಿರತಿ ಗುನ್ನಾಪುರ, ಶಹಾಬಾದ ಮಂಡಲ ಉಪಾಧ್ಯಕ್ಷರು ಶಶಿಕಲಾ ಸಜ್ಜನ, ಕಾರ್ಯದರ್ಶಿಗಳಾದ ರತ್ನಾ ಬಿರಾದಾರ, ನೀಲಗಂಗಮ್ಮ ಘಂಟ್ಲಿ, ಪದ್ಮಾ ಕಟಕೆ, ಮಂಡಲ ಮಹಿಳಾ ಮೊರ್ಚಾ ಅಧ್ಯಕ್ಷರು ಜಯಶ್ರೀ ಸೂಡಿ, ಪ್ರಧಾನ ಕಾರ್ಯದರ್ಶಿಗಳಾದ ಆರತಿ ಕುಡಿ, ಸುನೀತಾ, ಲತಾ ಸಂಜೀವ, ಉಪಾಧ್ಯಕ್ಷರಾದ ನಂದಾ ಹಂಚಾಟೆ, ಜಯಶ್ರೀ ಜಿಂಗಾಡೆ, ಸಿಮಾ ಸುಬೆದಾರ, ಅವರ ನೇತ್ರತ್ವದಲ್ಲಿ ಬಿಜೆಪಿ ಶಾಲು ಹೊದಿಸಿ ಸ್ವಾಗತ ಕೋರಿ ಸೇರ್ಪಡೆಗೊಳಿಸಿದರು.

ಚಂದ್ರಕಾಂತ ಗೊಬ್ಬೂರಕರ, ಜ್ಯೋತಿ ಶರ್ಮ, ಭಾಗಿರತಿ ಗುನ್ನಾಪೂರ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಉಪಾಧ್ಯಕ್ಷರಾದ ಮಹಾದೇವ ಗೊಬ್ಬೂರಕರ,ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬಸವರಾಜ ಬಿರಾದಾರ,ನಗರಸಭೆ ಸದಸ್ಯ ಜಗದೇವ ಸುಬೆದಾರ, ಎಸ್.ಟಿ.ಮೊರ್ಚಾ ಅಧ್ಯಕ್ಷರು ಶಿವಶರಣಪ್ಪ ಸುಬೆದಾರ, ಯುವಮೊರ್ಚಾ ಅಧ್ಯಕ್ಷರು ದಿನೇಶಗೌಳಿ, ಅವಿನಾಶ್ ಸಾಳುಂಕೆ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತಿತರಿರದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here