ಕಲಬುರಗಿ ದಕ್ಷಿಣ ಮತಕ್ಷೇತ್ರ ಸರ್ವತೋಮುಖ ಪ್ರಗತಿಗೆ ಕೈ ಜೋಡಿಸಿ; ಅಲ್ಲಂಪ್ರಭು ಪಾಟೀಲ್

0
21

ಕಲಬುರಗಿ; ಕಲಬುರಗಿದಕ್ಷಿಣ ಮತಕ್ಷೇತ್ರ ಕಳೆದ 2 ದಶಕದಿಂದ ಒಂದೇ ಮನೆತನದ ಮುಷ್ಟಿಯಲ್ಲಿದೆ. ಹೀಗಾಗಿ ಪ್ರಗತಿ ಕುಂಠಿತವಾಗಿದೆ. ಈ ಬಾರಿ ಚುನಾವಣೆಯಲ್ಲಿ ಮತದಾರರು ನೀವೆಲ್ಲರೂ ಕಾಂಗ್ರೆಸ್‍ಗೆ ಬೆಂಬಲಿಸುವ ಮೂಲಕ ಬಿಜೆಪಿ ಸೋಲಿಸಿ ಈ ಮತಕ್ಷೇತ್ರವನ್ನು ಪ್ರಗತಿ ಪಥದತ್ತ ಕೊಂಡೊಯ್ಯಬೇಕಿದೆ. ಅದಕ್ಕಾಗಿ ಎಲ್ಲರೂ ಎಚ್ಚರದಿಂದ ಮತ ಹಾಕುವಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ್ ಮನವಿ ಆಡಿದ್ದಾರೆ.

ನಗರದ ಬ್ರಹ್ಮಪುರ, ವಿಜಯ ನಗರ ಬಡಾವಣೆಗಳಲ್ಲಿ ಸಂಚಾರ ಮಾಡಿ ವಿವಿಧೆಡೆ ಸಭೆಗಳನ್ನು ನಡೆಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬ್ರಹ್ಮಪುರದ ಶರಣಮ್ಮ, ಲಕ್ಷ್ಮೀ ರಾಜೇಶ್ವರಿ, ಸುರೇಖಾ, ಭಾಗ್ಯವಂತಿ, ಅಂಬಿಕಾ, ಶಾಲುಬಾಯಿ, ಶೋಭಾ, ಅಮೃತಾ, ಅಂಬಿಕಾ, ಅಮರ್, ರವಿ ವಿಜಯ ಕುಮಾರ್ ಬಸವ ಸೇರಿದಂತೆ ನೂರಾರು ಮಹಿಳೆಯರು, ಪುರುಷರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

Contact Your\'s Advertisement; 9902492681

ಇದಲ್ಲದೆ ಲ್ಲಂಪ್ರಭು ಪಾಟೀಲರ ಸಮ್ಮುಖದಲ್ಲೇ ವಿಜಯ ನಗರ ಬಡಾವಣೆಯಲ್ಲಿಯೂ ಕಾಶೀಬಾಯಿ, ಶ್ರೀದೇವಿ, ಆಶಾ, ಅಶ್ವಿನಿ, ರಾಕೇಶ ರಾಜೇಶ, ರಮೇಶ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಿದರು. ಇವರನ್ನೆಲ್ಲ ಕಾಂಗ್ರೆಸ್ ಪಕ್ಷದ ಬಾಟುವ ನೀಡಿ ಅಲ್ಲಂಪ್ರಭು ಪಾಈಲರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ ಸೇರಿದಂತೆ ಮುಖಂಡರು ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here