20ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ; ಸುರಪುರ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ

0
11

ಸುರಪುರ: ಇಂದಿನಿಂದ 20ನೇ ತಾರೀಖಿನ ವರೆಗೆ ಅಭ್ಯಾರ್ಥಿಗಳ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು ಅಧಿಸೂಚನೆ ಪ್ರಕಟಿಸಲಾಗಿದೆ ಎಂದು ಚುನಾವಣಾಧಿಕಾರಿ ಅಮರೇಶ ನಾಯ್ಕ ತಿಳಿಸಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 20ನೇ ತಾರೀಖಿನ ವರೆಗೆ ನಾಮಪತ್ರ ಸಲ್ಲಿಕೆ,21ಕ್ಕೆ ನಾಮಪತ್ರಗಳ ಪರಿಶೀಲನೆ ಹಾಗೂ 24ನೇ ತಾರೀಖು ನಾಮಪತ್ರ ವಾಪಸ್ಸಾತಿಗೆ ಕೊನೆಯ ದಿನವಾಗಿದೆ ಎಂದರು.ಅಲ್ಲದೆ ಈಬಾರಿ ಪಿಡಬ್ಲ್ಯೂಡಿ ಮತದಾರರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದ್ದು,ಸ್ಪರ್ಧೆಯಲ್ಲಿರುವ ಅಭ್ಯಾರ್ಥಿಗಳ ಪಟ್ಟಿ ಘೋಷಣೆಯಾದ ನಂತರ ನಮ್ಮ ಸಿಬ್ಬಂದಿ ಮನೆ ಮೆನೆಗೆ ಭೇಟಿ ನೀಡಿ ಪಿಡಬ್ಲ್ಯೂಡಿ ಮತ್ತು 80 ವರ್ಷ ಮೇಲ್ಪಟ್ಟ ಮತದಾರರಿಗೆ ಮತಪತ್ರಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಅಲ್ಲದೆ ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣಾ ಪ್ರಕೀಯೆ ನಡೆಯುತ್ತಿರುವುದರಿಂದ ಚುನಾವಣೆ ಮುಗಿಯುವವರೆಗೆ ಸಾರ್ವಜನಿಕರು ತಹಸೀಲ್ದಾರ್ ಕಚೇರಿಯಲ್ಲಿನ ತಮ್ಮ ಕೆಲಸ ಕಾರ್ಯಗಳಿಗಾಗಿ ಮದ್ಹ್ಯಾನ 3 ಗಂಟೆಯ ನಂತರ ಬರುವಂತೆ ತಿಳಿಸಿದರು.

ನಾಮಪತ್ರ ಸಲ್ಲಿಸಲು ಕೇವಲ 5 ಜನರಿಗೆ ಮಾತ್ರ ಅವಕಾಶವಿದ್ದು ಎಲ್ಲ ಪಕ್ಷಗಳವರಿಗೆ ತಿಳಿಸಲಾಗಿದೆ.ಅಲ್ಲದೆ ಐದು ಜನ ಮಾತ್ರವೇ ಬನ್ನಿ ಎಂದು ರಾಜಕೀಯ ಪಕ್ಷಗಳವರಲ್ಲಿ ಮನವಿ ಮಾಡಲಾಗಿದೆ.ಹಾಗೊಮ್ಮೆ ಮೆರವಣಿಗೆ ಏನೆ ಮಾಡಿಕೊಂಡು ಬಂದರೂ 200 ಮೀಟರ್ ಅಂತರದಲ್ಲಿಯೇ ಮೆರವಣಿಗೆ ನಿಲ್ಲಿಸಿ ಐದು ಜನರು ಬಂದು ನಾಮಪತ್ರ ಸಲ್ಲಿಸಬಹುದು ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here