ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬೀದಿಂದ ಮತದಾನ ಜಾಗೃತಿ

0
8

ಕಲಬುರಗಿ: ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ವಿಜಯ್, ಡಾ. ಸ್ನೇಹ, ಡಾ. ಜ್ಯೋತಿ ಕಾರ್ಯಕ್ರಮಕ್ಕೆ ಭಾಗಿಯಾಗಿ ಚಾಲನೆ ನೀಡಿದರು.

ತದನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಮತದಾನದ ಮಹತ್ವ ಕುರಿತು ಮಾತನಾಡುತ್ತಾ ಮೇ ೧೦ ರಂದು ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ತಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ತಮ್ಮ ಮತ ನೀಡಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕೆಂದು ವಿವರಿಸಿದರು.

Contact Your\'s Advertisement; 9902492681

ನಂತರ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೈಯದ್ ಅಸರಾರ ಹಾ ಸ್ಮಿ , ನೇತ್ರಾಧಿಕಾರಿ ಸುರೇಶ್ ಬಂಡ್ಗಾರ್, ಕೇಂದ್ರ ಸಿಬ್ಬಂದಿಗಳಾದ ಪ್ರಿಯ, ಉದಯಕುಮಾರ್, ಸಂಗೀತ, ರವಿಕಿರಣ್, ಅಂಜು, ಆಶಾ ಮಲ್ಲಮ್ಮ, ಆಪ್ತ ಸಮಾಲೋಚಕ ರಾ ದ ಸುಜಾತ ಹಿರೇಮಠ, ಎನ್ ಸುಧಾಕರ್, ಕೆ ಎಚ್ ಪಿ ಟಿ ಸ್ವಯಂಸೇವಕರಾದ ಸುಧೀರ್, ಸಾರ್ವಜನಿಕರು, ಆಶಾ ಕಾರ್ಯಕರ್ತರು ಹಾಜರಿದ್ದರು, ತದನಂತರ ಎಲ್ಲರೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಜಾಗೃತಿಯನ್ನು ಮೂಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here