ಮತದಾನ ಜಾಗೃತಿ ಬೈಕ್ Rallyಗೆ ಚಾಲನೆ

0
15

ಕಲಬುರಗಿ: ಸ್ವೀಪ್ ಜಾಗೃತಿ ವಿಶೇಷ ಅಭಿಯಾನ ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ಜಿಮ್ಸ್ ಕಾಲೇಜು ಹಾಗೂ ಆರೋಗ್ಯ ಇಲಾಖೆಯಿಂದ ರವಿವಾರ ಕಲಬುರಗಿ ನಗರದ ಜಿಮ್ಸ್ ಆವರಣದಲ್ಲಿ ಆಯೋಜಿಸಿದ ಬೈಕ್ Rallyಗೆ ಡಿ.ಎಚ್.ಓ ಡಾ.ರಾಜಶೇಕರ ಮಾಲಿಪಾಟೀಲ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೇ 10 ರಂದು ಜರುಗುವ ವಿಧಾನಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಮತ್ತು ಅಧೀಕ್ಷಕರು ನತ್ತು ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಡಾ.ಅಂಬಾರಾಯ ರುದ್ರವಾಡಿ, ಡಿ.ಎಲ್.ಓ ಡಾ.ರಾಜಕುಮಾರ್, ಆಯುμï ಇಲಾಖೆಯ ಉಪನಿರ್ದೇಶಕಿ ಡಾ.ಗಿರಿಜಾ ನಿಗ್ಗುಡಗಿ, ಕುಟುಮಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ಟಿ.ಬಿ. ಕಾರ್ಯಕ್ರಮ ಅಧಿಕಾರಿ ಡಾ.ಚಂದ್ರಕಾಂತ ನರಿಬೋಳ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಬಸವರಾಜ ಗುಳಗಿ ಸೇರಿದಂತೆ ಇನ್ನಿತರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಫಾರ್ಮಸಿ-ನಸಿರ್ಂಗ್ ಸಿಬ್ಬಂದಿಗಳು, ವೈದ್ಯ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು, ನೌಕರರು ಭಾಗವಹಿಸಿದ್ದರು.

ಜಿಮ್ಸ್ ವೃತ್ತದಿಂದ ಆರಂಭವಾದ ಬೈಕ್ ರ್ಯಾಲಿ ಅನ್ನಪೂರ್ಣ ಕ್ರಾಸ್ – ಜಗತ್ ವೃತ್ತ-ನಗರೇಶ್ವರ ಶಾಲೆ- ಸಂತ್ರಾಸವಾಡಿ-ಎಸ್.ಟಿ.ಬಿ.ಟಿ-ಪೆÇಲೀಸ್ ಭವನ ಮಾರ್ಗವಾಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣಕ್ಕೆ ಬಂದು ಕೊನೆಗೊಂಡಿತು. ಕೊನೆಯದಾಗಿ ಚಂಪಾ ಕ್ರೀಡಾಂಗಣದಲ್ಲಿ ಮತದಾನ ಪ್ರತಿಜ್ಞೆ ವಿಧಿ ಬೋಧನೆಯೊಂದಿಗೆ ಕೊನೆಗೊಂಡಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here