ಶಾಲಾ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ 

0
28

ಶಹಾಬಾದ: ಪ್ರಜ್ಞಾ ಫೌಂಡೇಷನ್, ಎಂ.ಎನ್.ದೇಸಾಯಿ ಪದವಿ ಮಾಹಾವಿದ್ಯಾಲಯ ಹಾಗೂ ಸರಕಾರಿ ಪ್ರೌಢ ಶಾಲೆ ಮರತೂರ ವತಿಯಿಂದ ಇಂದು ಸರ್ಕಾರಿ ಪ್ರೌಢಶಾಲೆ ಮರತೂರನ ಶಾಲಾ ಆವರಣದಲ್ಲಿ ಅಶೋಕ ಸಸ್ಯಗಳನ್ನು ನಡುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಶಿಕ್ಷಕಿ ಶ್ರೀಮತಿ ಸುಮಂಗಲಾ ಪರಿಸರ ಬೆಳೆಸಿ ಉಳಿಸಬೇಕು. ಶಾಲಾ ಆವರಣದಲ್ಲಿ ಈಗಾಗಲೇ ಅನೇಕ ಸಸ್ಯಗಳನ್ನು ಹಚ್ಚಲಾಗಿದೆ, ಇಂದು ಇನ್ನಷ್ಟು ಸಸ್ಯಗಳನ್ನು ಹಚ್ಚುವ ಮೂಲಕ ಶಾಲೆಯ ಸೌಂದರ್ಯಕರಣ ಹೆಚ್ಚಾಗಲಿದೆ. ಅಶೋಕ ಸಸ್ಯಗಳು ಆವರಣವನ್ನು ತುಂಬಾ ಸುಂದರಗೊಳಿಸಲು ಅವಕಾಶವಾಗುತ್ತದೆ. ನಾವೆಲ್ಲರೂ ಸಸಿಗಳನ್ನು ಬೆಳೆಸುವುದರ ಮೂಲಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಪ್ರೇಮಿ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಕೆ.ಎಂ. ವಿಶ್ವನಾಥ ಮರತೂರ ಇವರು ಪ್ರಜ್ಞಾ ಫೌಂಡೇಷನ್ ವತಿಯಿಂದ ಸಾರ್ಥಕ ಶನಿವಾರ ಎನ್ನುವ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ, ನಾನು ಕಲಿತ ಸರ್ಕಾರಿ ಪ್ರೌಢಶಾಲೆ ಮರತೂರಿನಲ್ಲಿ ಈಗಾಗಲೇ ಅನೇಕ ಗಿಡಗಳನ್ನು ನೆಡಲಾಗಿದ್ದು, ಇಂದು ವಿಶೇಷವಾಗಿ ೨೦ ಅಶೋಕ ಗಿಡಗಳನ್ನು ಹಚ್ಚುವ ಮೂಲಕ ಶಾಲೆಯ ಇನ್ನಷ್ಟು ಸೌಂದರ್ಯೀಕರಣಕ್ಕೆ ಸಾಕ್ಷಿಯಾಗಲಾಯಿತು. ನಾವೆಲ್ಲರೂ ನಮ್ಮ ಶಾಲೆಗಳಿಗೆ ಭೇಟಿಕೊಟ್ಟು, ಆ ಶಾಲೆಗಳಲ್ಲಿ ನಮ್ಮ ಕೈಲಾದ ಸೇವೆಯನ್ನು ಮಾಡುವುದು ಸಾರ್ಥಕ ಶನಿವಾರ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

ಈ ಕಾರ್ಯಕ್ರಮ ಪ್ರಜ್ಞಾ ಫೌಂಡೇಶನದಿಂದ ಜಾರಿಯಾಗಿದ್ದು ಆಸಕ್ತಿಯುಳ್ಳ ಮನಸ್ಸುಗಳು, ತಾವು ಕಲಿತ ತಮ್ಮ ಶಾಲೆಗಳಿಗೆ ಭೇಟಿ ನೀಡಿ, ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುವುದಾಗಿದೆ.

ಈ ಕಾರ್ಯಕ್ರಮದಲ್ಲಿ ಮನೋಹರ್, ವಿಜಯಕುಮಾರ, ಟೀಕೆರಾವ್, ಇತರೆ ಶಿಕ್ಷಕರು ಹಾಗೂ ಕಲಬುರಗಿ ಜಿಲ್ಲೆಯ ಎಮ್.ಎನ್.ದೇಸಾಯಿ ಪದವಿ ಮಾಹಾವಿದ್ಯಾಲಯದ ಎನ್.ಎಸ್.ಎಸ್. ಶಿಬಿರದ ಶಿಬಿರಾರ್ಥಿಗಳು ಅಧ್ಯಾಪಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here