ಆರ್ಥಿಕ ಸ್ಥಿತಿಗಿಂತ, ಆರೋಗ್ಯವಂತ ಸ್ಥಿತಿ ಶ್ರೇಷ್ಠ

0
169

ಕಲಬುರಗಿ: ಆರ್ಥಿಕ ಸ್ಥಿತಿ ಎಷ್ಟು ಚೆನ್ನಾಗಿದ್ದರೂ ಕೂಡ ಜೀವನದ ನಿಜವಾದ ಸಂತೋಷ ಅನುಭವಿಸಲು ಉತ್ತಮವಾದ ಆರೋಗ್ಯ ಬಹು ಮುಖ್ಯ ಎಂದು ಹಿರಿಯ ವೈದ್ಯರಾದ ಡಾ. ಎಸ್ ಎಸ್ ಗುಬ್ಬಿ ಹೇಳಿದರು.

ತಾಲೂಕಿನ ಉಪಳಾಂವ ಗ್ರಾಮದ ಶ್ರೀ ರಾಮ ಕನ್ನಡ ಶಾಲಾ ಆವರಣದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಹಾಗೂ ಶೈನ್ ಹೆಲ್ತ್ ಕೇರ್ ಸೆಂಟರ್ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ದಣಿವರಿಯದ ನಾಯಕ, ನ್ಯಾಯವಾದಿ ಹಣಮಂತರಾಯ ಅಟ್ಟೂರ ಅವರ ಹುಟ್ಟುಹಬ್ಬ ಹಾಗೂ 26 ವರ್ಷದ ಸಮಾಜ ಸೇವೆಯ ನಿಮಿತ್ಯ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಭಾಗದ ಜನರು ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆವಹಿಸಿ ಕೊಂಡು ಜೀವನ ಸಾಗಿಸಬೇಕು.ದಣಿವರಿಯದ ನಾಯಕ ಅಟ್ಟೂರ ಅವರ ಸಮಾಜ ಸೇವೆಯನ್ನು ಗುರುತಿಸಿ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂಘದ ಕಾರ್ಯ ಶ್ಲಾಘನೀಯ. ಇಂತಹ ಸಮಾರಂಭಗಳು ಸಮಾಜ ಸೇವೆ ಮಾಡಲು ಇಮ್ಮಡಿಗೊಳಿಸುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಜೀವನ ಜ್ಯೋತಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಅಮರನಾಥ ಮಹಾರಾಜ ಮಾತನಾಡಿ ಇಂದಿನ ಸಮಯದಲ್ಲಿ ಜನರು ಹಣ ಗಳಿಸುವುದಕ್ಕೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ, ಮತ್ತೆ ಆರೋಗ್ಯ ಸರಿಪಡಿಸಿಕೊಳ್ಳಲು ಗಳಿಸಿದ ಹಣ ಖರ್ಚು ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡವೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಯುವ ಮುಖಂಡರಾದ ವೀರೇಶ ಬಿರಾದಾರ, ಶಿವಲಿಂಗಪ್ಪ ಟೆಂಗಳಿ, ಖ್ಯಾತ ಸಂಗೀತ ಕಲಾವಿದ ಸಂಗಮೇಶ ಶಾಸ್ತ್ರಿ ಮಾಶಾಳ, ಡಾ. ಜಿಲಾನಿ ಖಾನ, ಡಾ, ಶಾಮವೆಲ್ ಎಡಿಸನ್, ಆಗಮಿಸಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮಿಕಾಂತ ಟೆಂಗಳಿ, ಉಮೇಶ ದೇಗಾಂವ, ರಘುನಂದನ ಕುಲಕರ್ಣಿ, ನಾಗರಾಜ ನಾಗೂರ, ನಾಗರಾಜ ತುಳಜಾಪುರ, ಹಣಮಂತರಾಯ ಮಾಳೆಗಾಂವ, ಚಂದ್ರಕಾಂತ ಮುತ್ತಗಿ, ಶಿವಶರಣಪ್ಪ ಬಿರಾದಾರ, ಹಣಮಂತರಾಯ ಅಟ್ಟೂರ, ಜ್ಯೋತಿ ಪಾಟೀಲ, ಶ್ವೇತಾ ರೆಡ್ಡಿ, ದೇವರಾಜ ಮಳ್ಳಿ, ಸಂಗೀತಾ ಪಾಟೀಲ, ಸುನಿತಾ, ಮೀನಾಕ್ಷಿ, ಶಿಲ್ಪಾ ಎಸ. ಸುಶ್ಮಿತಾ ಕುಂಬಾರ, ಆಫ್ರಿನ, ನಿವೇದಿತಾ, ಪ್ರಿಯಾಂಕ, ಓಮದೇವಿ, ಸೇರಿದಂತೆ ಅನೇಕ ಜನ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಉಪಳಾಂವ ಹಾಗೂ ಸುತ್ತಮುತ್ತಲಿನ ಅನೇಕ ಜನರು ಆರೋಗ್ಯ ತಪಾಸಣೆ ಮಾಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here