ಮಹಿಳೆಯರಿಗೆ ಕೆ.ವಿ.ಕೆ. ಕಲಬುರಗಿಯಲ್ಲಿ ಸಿರಿಧಾನ್ಯ ಆಧಾರಿತ ಖಾದ್ಯಗಳ ಸ್ಪರ್ಧೆ

0
13

ಕಲಬುರಗಿ: ಮಹಿಳೆಯರಿಗೆ ಕೆ.ವಿ.ಕೆ. ಕಲಬುರಗಿಯಲ್ಲಿ ಭಾರತಿಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಹೈದ್ರಾಬಾದ ಅವರೊಂದಿಗೆ ಜಂಟಿಯಾಗಿ ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯಲ್ಲಿ ಆಗಸ್ಟ್ 19 ರಂದು ಮಹಿಳೆಯರಿಗಾಗಿ ಸಿರಿಧಾನ್ಯ ಆಧಾರಿತ ಖಾದ್ಯಗಳ ಸ್ಪರ್ಧೆಯನ್ನು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.

ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಲ್ಲಿ ಸಿರಿಧಾನ್ಯಗಳ ಪೌಷ್ಟಿಕಾಂಶ ಮತ್ತು ಆರೋಗ್ಯ ಪ್ರಯೋಜನಗಳು ಮತ್ತು ಕೃಷಿಗೆ ಅವುಗಳ ಸೂಕ್ತತೆಯ ಬಗ್ಗೆ ಜಾಗೃತಿ ಮೂಡಿಸಲು ಈ ವರ್ಷವು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಆಚರಿಸಲಾಗುತ್ತಿದ್ದು ಭಾರತ ದೇಶ ಇದರ ಅಥಿತೇಯ ವಹಿಸಿದ್ದು ಹೆಮ್ಮಯ ವಿಷಯವಾಗಿದೆ.

Contact Your\'s Advertisement; 9902492681

ಸಿರಿಧಾನ್ಯಗಳ ಸುಸ್ಥಿರ ಉತ್ಪಾದನೆಯನ್ನು ಉತ್ತೇಜಿಸುವ ಹಾಗು ಉತ್ಪಾದಕರು ಮತ್ತು ಗ್ರಾಹಕರಿಗೆ ಹೊಸ ಸಮರ್ಥನೀಯ ಮಾರುಕಟ್ಟೆ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಪೂರಕವಾಗಿ ಸಿರಿಧಾನ್ಯ ಬೆಳೆಗಳ ಬೀಜ ವಿತರಣೆ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಹೀಗೆ ಹಲವು ಚಟುವಟಿಕೆಗಳನ್ನು ಕೃಷಿ ವಿಜ್ಞಾನ ಕೇಂದ್ರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ಭಾಗವಹಿಸಲಿಚ್ಛಿಸುವ ಮಹಿಳೆಯರು ಸಿರಿಧಾನ್ಯ ಆಧಾರಿತ, ಮೌಲ್ಯವರ್ಧಿತ ಬಿಸ್ಕೆಟ್, ಸಿಹಿ ಅಥವಾ ಖಾರಾ ತಿಂಡಿ-ತಿನಿಸಿನೊಂದಿಗೆ, ಅದನ್ನು ತಯಾರಿಸುವ ವಿವರವಾದ ವಿಧಾನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ತಿಂಡಿ-ತಿನಿಸುಗಳ ಪೌಷ್ಠಿಕತೆ, ರುಚಿ ಹಾಗೂ ಮಂಡಿಸುವಿಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದು.

ಸ್ಪರ್ಧೆಗೆ ನೊಂದಾಯಿಸಲಿಚ್ಛಿಸುವವರು ಮೊಬೈಲ್ ಸಂಖ್ಯೆ: 9480696315, 7892219462, ಗೆ ಸಂಪರ್ಕಿಸಿ ಆಗಸ್ಟ್ 18 ರೊಳಗಾಗಿ ಹೆಸರುಗಳನ್ನು ನೊಂದಾಯಿಸಬಹುದು. ಮೊದಲು ನೊಂದಾಯಿಸಿದ 25 ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ. ಸ್ಪರ್ಧೆಯಲ್ಲಿ ಭಾಗವಹಿಸಿದ ವ್ಯಕ್ತಿ ಅಥವಾ ಸಂಘದ ಮುಖ್ಯಸ್ಥರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಗುವುದು. ಆಯ್ಕೆಗೊಂಡ ಉತ್ತಮ ಖಾದ್ಯ ಉತ್ಪನಗಳ ವಾಣಿಜ್ಯಿಕರಣ ಮತ್ತು ಮಾರಾಟ ಮಾಡಲು ಸಲಹೆಗಳನ್ನು ಕೃಷಿ ವಿಜ್ಞಾನ ಕೇಂದ್ರ ಸಹಕರಿಸುವುದು.

ಸ್ಪರ್ಧೆಗೆ ತಗಲುವ ಎಲ್ಲ ಖರ್ಚು ವೆಚ್ಚವನ್ನು ಸ್ಪರ್ಧಾಳುಗಳಿಗೆ ಭರಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here