ಬುಡಕಟ್ಟು ಕಲಾವಿದರು ಮುಖ್ಯವಾಹಿನಿಗೆ ಬನ್ನಿ

0
9

ಸುರಪುರ: ಗ್ರಾಮಗಳಿಂದ ಗ್ರಾಮಗಳಿಗೆ ಒಲಸೆ ಹೊಗುತ್ತಾ ನಿರ್ಜನ ಪ್ರದೇಶದಲ್ಲಿ ವಾಸಮಾಡುತ್ತಾ ಕಲೆಯನ್ನೆ ನಂಬಿ ಬದುಕು ಸಾಗಿಸುತ್ತಿರುವ ಬುಡಕಟ್ಟೂ ಕಲಾವಿಧರು ಮುಖ್ಯವಾಹಿನಿಗೆ ಬರುವುದು ಅವಶ್ಯಕವಾಗಿದೆ ಎಂದು ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದ ಕೇಂದ್ರಸಮಿತಿಯ ಸಹಕಾರ್ಯದರ್ಶಿ ಅಮರೇಶ ಹಸಮಕಲ್ ಹೇಳಿದರು.

ನಗರದ ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಇಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಯಾದಗಿರಿ, ಬಸವಪ್ರಭು ವಿದ್ಯಾವರ್ಧಕ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಬುಡಕಟ್ಟು ದಿನಾಚಾರಣೆ ಹಾಗೂ ಬುಡಕಟ್ಟ್ಟು ಕಲಾವಿಧರ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವ ಸಂಸ್ಥೆಯು ಅಗಸ್ಟ – 9 ರಂದು ಬುಡಕಟ್ಟು ದಿನಾಚರಣೆಯನ್ನು ಘೋಷಿಸಿದ್ದು ವಿಶ್ವದೆಲ್ಲೆಡೆ ಅಲೇಮಾರಿ,ಆದಿವಾಸಿ,ಬುಡಕಟ್ಟು ಎಂದು ಈ ದಿನಾಚರಣೆಯನ್ನು ಆಚರಿಸುತ್ತಿದ್ದು ಈ ಭಾಗದಲ್ಲಿ ಮುಖ್ಯವಾಗಿ ಹಗಲುವೇಶ ಕಲಾವಿಧರು ಅತ್ಯಂತ ಹೆಚ್ಚು ಕಲೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ, ಸರಕಾರ ಮತ್ತು ಸಂಭಂಧಪಟ್ಟ ಇಲಾಖೆ ಈ ಕಲಾವಿಧರನ್ನು ಗುರಿತಿಸಬೇಕು ಎಂದು ಹೇಳಿದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಅಲೆಮಾರಿ ಹಾಗೂ ಬುಡಕಟ್ಟು ಕಲಾವಿಧರು ತಮ್ಮ ಕಲೆಯನ್ನೆ ವೃತ್ತಿಯನ್ನಾಗಿಸಿಕೊಂಡು ಹಲವು ತಲಮಾರುಗಳಿಂದ ಕಲೆಯನ್ನು ಬೆಳೆಸುತ್ತಿದ್ದು, ಪಿಳಿಗೆಯಿಂದ ಪಿಳಿಗೆಗೆ ಕಲೆಯನ್ನು ಬೇಳೆಸಿದ್ದಾರೆ, ಇಂದು ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನಿಡುವುದರ ಜೋತೆಗೆ ತಮ್ಮ ಮಕಳಿಗೂ ಕೂಡ ಈ ಕಲೆಯನ್ನು ಧಾರೆ ಎರೆಯಬೇಕು ಎಂದು ಹೇಳಿದರು. ಸರಕಾರ ಇಗಾಗಲೇ ಕಲಾವಿಧರಿಗಾಗಿ ಮಾಶಾಸನ, ವಾರ್ಷಿಕ ಪ್ರಶಸ್ತಿ, ಗೌರವ ಪ್ರಶಸ್ತಿ ನಿಡುತ್ತಿದ್ದು ಈ ಭಾಗದ ಕಲಾವಿಧರು ಅದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅಲೆಮಾರಿ ಅಭಿವೃದ್ಧಿ ಅನುಷ್ಠಾನ ಸಮಿತಿಯ ಸದಸ್ಯರಾದ ಭಿಮರಾಯ ಮಂಗಳೂರು ಮಾತನಾಡಿ, ಕಲಾವಿದÀರೆಂದು ಆರ್ಥಿಕ ಪರಿಸ್ಥಿಯನ್ನು ಎದುರಿಸುತ್ತಿದ್ದು, ಸರಕಾರ ಕಲಾವಿಧರಿಗೆ ಆರ್ಥಿಕ ಭದ್ದತ್ತೆ ಒದಗಿಸುವುದರ ಜೋತೆಗೆ ಆದಿವಾಸಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ನೀಡಿ ಬುಡಕಟ್ಟು ಸಮುದಾಯಕ್ಕೆ ಶಾಸ್ವತ ಸೂರು ಒದಗಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಶಿಶರಣಪ್ಪ ಹೆಡಿಗಿನಾಳ, ಮಲ್ಲು ಬಾದ್ಯಾಪೂರ ವೇದಿಕೆಮೆಲಿದ್ದರು, ಪವಿತ್ರಾ ನಿರೂಪಿಸಿದರು, ಭಾಗ್ಯಶ್ರೀ ಕುಂಬಾರಪೇಟ ಪ್ರಾರ್ಥಿಸಿದರು, ಮೇಘಾ ದಾಯಿಪುಲೆ ಸ್ವಾಗತಿಸಿದರು, ಅಖೀಲಾ ಜುಜಾರೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here