ಅಲ್ಪಸಂಖ್ಯಾತರ ಸ್ಥಾಲರ್ ಶಿಫ್ ಸಮಸ್ಯೆ ಇತ್ಯಾರ್ಥಕ್ಕೆ ಆಗ್ರಹ

0
17

ಕಲಬುರಗಿ; ನಗರದ ಉತ್ತರ ಮತ್ತು ದಕ್ಷೀಣ ವ್ಯಾಪ್ತಿಯಲ್ಲಿ ಬರುವ ಮುಸ್ಲಿ ಸಮಯದಾಯದ ಕಾಲೇಜು ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ಸ್ಥಾಲರ್ ಶಿಫ್ ಪಡೆಯಲು ತಮ್ಮ ವಿಧಾನಸೌಧದಲ್ಲಿರುವ ಮೈನಾರಿಟಿ ಕಛೇರಿಯಲ್ಲಿ ಫಾರ್ಮ ತುಂಬುವುದು ನಡೆಯುತ್ತಿದ್ದು, ಒಮ್ಮೊಮ್ಮೆ ಸರ್ವರ್ ಇರದೇ ಇರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ಮತ್ತು ಸದರಿ ಇದರ ಕೊನೆಯ ದಿನಾಂಕದ ಅವಧಿ ವಿಸ್ತರಣೆ ಮಾಡಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚೀನ್ ಎಸ್. ಫರತಾಬಾದ ನೇತೃತ್ವದಲ್ಲಿ ಜಿಲ್ಲಾಧಿಕಾಗಿಗಳಿಗೆ ಮನವಿ ಸಲ್ಲಿಸಿದರು.

ಕಲಬುರಗಿ ನಗರದ ಉತ್ತರ ಮತ್ತು ದಕ್ಷೀಣ ವ್ಯಾಪ್ತಿಯಲ್ಲಿ ಬರುವ ಮುಸ್ಲಿಂ ಜನಾಂಗದವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸದರಿ ಇವರಿಗೆ ಕರ್ನಾಟಕ ಸರಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಸಿಗುವ ಶಿಷ್ಯ ವೇತವನ್ನು ಪಡೆಯಲು ಈ ಮೊದಲು ಅವರವರ ಕಾಲೇಜುಗಳಲ್ಲಿ ಫಾರಂ ತುಂಬುವುದು ವಾಡಿಕೆ ಇರುತ್ತದೆ.

Contact Your\'s Advertisement; 9902492681

ಇದನ್ನು ಬದಲಾವಣೆ ಮಾಡಿ ಸದರಿ ಇಲ್ಲಿರುವ ವಿದ್ಯಾರ್ಥಿ/ವಿದ್ಯಾರ್ಥಿಯರಿಗೆ ವಿದ್ಯಾರ್ಥಿ ಶಿಷ್ಯ ವೇತನ ಪಡೆಯಬೇಕಾದರೇ ತಮ್ಮ ಕಛೇರಿಯ ಮೂರನೇ ಮಹಡಿಯಲ್ಲಿರುವ ಮೈನಾರಿಟಿ ಕಛೇರಿಗೆ ಬಂದು ಇಲ್ಲಿಯ ಗಣಕಯಂತ್ರದಲ್ಲಿ ಫಾರಂ ಭರ್ತಿ ಮಾಡಬೇಕೆಂದು ಹೊಸದಾಗಿ ನಿಯಮವನ್ನು ಮಾಡಿರುವುದರಿಂದ ಮುಸ್ಲಿಂ ಸಮಯದಾಯದ ಸಮಸ್ತ ವಿದ್ಯಾರ್ಥಿ/ವಿದ್ಯಾರ್ಥಿನಿಯರು ದಿನನಿತ್ಯ ಬೆಳಗ್ಗೆ 10:00 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಲ್ಲುವುದು ಮತ್ತು ಸರ್ವರ್ ಇಲ್ಲದೇ ಇರುವುದರಿಂದ ಹಾಗೂ ಕಛೇರಿಯಲ್ಲಿ ಯಾವುದೇ ರೀತಿಯ ಕುಡಿಯುವ ನೀರು, ಶೌಚಾಲಯ ಮತ್ತು ಇತರೇ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದಾರೆ ಮತ್ತು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಶಿಷ್ಯ ವೇತನ ಪಡೆಯುವುದಕ್ಕಾಗಿ ಕಾಲೇಜು ರಜೆ ಹಾಕಿ ಅವರ ವಿದ್ಯಾಭ್ಯಾಸವು ಹಾಳುಗತ್ತಿದೆ ತಿಳಿದು ಬಂದಿರುತ್ತದೆ.

ವಿದ್ಯಾರ್ಥಿ ಶಿಷ್ಯ ವೇತನ ಪಡೆಯಲು ಕೊನೆಯ: 28ರಂದು ಆಜ್ಞೆ ಇರುತ್ತದೆ. ಕೂಡಲೇ ಇದನ್ನು ಬದಲಾವಣೆ ಮಾಡಿ, ದಿನಾಂಕ:5-09-2023 ರವರೆಗೆ ಕೊನೆಯ ದಿನಾಂಕವೆಂದು ಆಜ್ಞೆ ಹೊರಡಿಸಲು ಕರ್ನಾಟಕ ಸರ್ಕಾರಕ್ಕೆ ಈ ಮನವಿಯ ಬಗ್ಗೆ ಚರ್ಚಿಸಬೇಕು ಮತ್ತು ಸದರಿ ಕಾಲೇಜುಗಳಲ್ಲಿ ಓಡುತ್ತಿರುವ ವಿದ್ಯಾರ್ಥಿಗಳಿಗೆ ಅವರವರ ಕಾಲೇಜುಗಳಂದಲೇ ಶಿಷ್ಯ ವೇತನ ಪಡೆಯಲು ಫಾರಂಗಳನ್ನು ಹಾಗೂ ಆನ್‍ಲೈನ್ ಮೂಲಕ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸುರೇಶ ಹನಗುಡಿ, ಅಂಬು ಮಸ್ಕಿ, ಅಕ್ಷಯ, ನವೀನ, ಸಾಯಿಕುಮಾರ ಸಿಂಧೆ, ಪ್ರವೀಣ ಸಿಂಧ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here