ತ್ರಿಂಬಕೇಶ್ವರಿ ದೇವಸ್ಥಾನದಲ್ಲಿ ಸನ್ಮಾನ

0
99

ಕಲಬುರಗಿ; ಸರ್ವ ದಾನಗಳಲ್ಲಿ ಅನ್ನದಾನವೆ ಶ್ರೇಷ್ಠದಾನ, ಅನ್ನದಾನ ಮಾಡುವುದರಿಂದ ನಾವು ಸ್ವರ್ಗದ ಬಾಗಿಲು ಮುಟ್ಟುತ್ತೆವೆ ಎಂದು ತ್ರಿಂಬಕೇಶ್ವರಿ ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷರಾದ ಪುಷ್ಪಾವತಿ ಗಣಪತರಾವ ಸುರ್ಯವಂಶಿ ಹೇಳಿದರು.

ಕೆರಿಭೋಸಗಾ ಗ್ರಾಮದ ಸಮೀಪವಿರುವ ಅಳಂದ ರಸ್ತೆಯ ತ್ರಿಂಬಕೇಶ್ವರಿ ಟ್ರಸ್ಟಿನ ವತಿಯಿಂದ ನವರಾತ್ರಿ ಉತ್ಸವದ ನಿಮಿತ್ಯ ವಿವಿಧ ಕ್ಷೇತ್ರದಲ್ಲಿ ಸೇವೆಗೆಯುತ್ತಿರುವ ಮಹನಿಯರಿಗೆ ಸನ್ಮಾನಿಸಿ ಮಾತನಾಡುತ್ತಾ ಇತ್ತೀಚಿಗೆ ನಮ್ಮನ್ನಗಲಿದ ನನ್ನ ಪತಿಯವರಾದ ಗಣಪತರಾವ ಸೂರ್ಯವಂಶಿ ಯವರು ಸುಮಾರು 22 ವರ್ಷಗಳಿಂದಲೂ ನಿರಂತರವಾಗಿ ಸಮಾಜ ಸೇವೆ ಮಾಡಿದರು.

Contact Your\'s Advertisement; 9902492681

ಬಡವ, ನಿರ್ಗತಿಕರಿಗೆ ವಿಶೇಷವಾಗಿ  ಅನ್ನದಾಸೋಹವೇ ಶ್ರೇಷ್ಠದಾನ ಎಂಬ ಸಂಕಲ್ಪ ಹೊಂದಿ ಅದರಲ್ಲಿಯೇ ದೇವರನ್ನು ಕಂಡ ಮಹಾನ ವ್ಯಕ್ತಿಯಾಗಿದ್ದರು. ಅವರ ಸಂಕಲ್ಪದಂತೆ ಈ ಸ್ಥಳ ಪುಣ್ಯಕ್ಷೇತ್ರ ಮಾಡುವುದರೊಂದಿಗೆ ಶ್ರೀಯುತರ  ಸಾಮಾಜಿಕ ಕಳಕಳಿಯ ಕನಸು ಮುಂದುವರಿಸಲು ತಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಸೇವೆಗೆಯುತ್ತಿರುವ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಶರಣಬಸಪ್ಪ ಮಚೆಟ್ಟಿ, ಶೀನು ಪೊದ್ದಾರ, ವಿಶಾಲ ಪಾಟೀಲ, ಬನಶಂಕರಿ ಅಂಗಡಿ, ಜಗನ್ನಾಥ ವಡ್ಡಣಕೇರಿ, ರಾಮದಾಸ ಪಾಟೀಲ, ನಾಗೇಂದ್ರಪ್ಪ ಅಟ್ಟೂರ ಅವರಿಗೆ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಪ್ರವೀಣ ಜಿ ಸೂರ್ಯವಂಶಿ, ವಿಕಾಸ ಸೂರ್ಯವಂಶಿ, ಅಶ್ವಿನಿ ಸಂಜೆಯರಾವ,ರಾಜ ಕುಮಾರ ಮೊಹಿತೆ, ಪ್ರಕಾಶ ಘಂಟೋಜಿ, ಮಹಾದೇವಪ್ಪ ಕಾವಲಿ, ಮೋಹನರಾವ ಕಲಬುರಗಿ, ಕಿಶನರಾವ್ ಪಾಟೀಲ, ಬಸವರಾಜ ಬಾಗೋಡಿ, ಲಕ್ಷ್ಮಣ ಅಮ್ಮನೂರ, ಧನರಾಜ ಯಾದವ, ಶ್ರೀಪತಿ ಬಿರಾದಾರ,ಅನಿಲ ಮೋರೆ, ನರೇಶ ಭೋಸಲೆ,ಸಚಿನ ಸೂರ್ಯವಂಶಿ, ಶ್ರೀಕಾಂತ ಜಾದವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here