ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ | ಕ್ಷಯರೋಗ ನಿರ್ಮೂಲನಾ ಕೇಂದ್ರದಲ್ಲಿ ಆಚರಣೆ

0
11

ಕಲಬುರಗಿ; ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾಂಗಣದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದಲ್ಲಿ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ ವಿಧಿ ಸ್ವೀಕರಿಸಿದ್ದರು.

ಕ್ಷಯರೋಗ ನಿರ್ಮೂಲನಾ ಕೇಂದ್ರ ಮತ್ತು ಡ್ಯಾಪ್ಕೋ ಸರ್ವ ಸಿಬ್ಬಂದಿಗಳು ಪ್ರತಿಜ್ಞಾ ವಿಧಿ ಮತ್ತು ಪ್ರಮಾಣವನ್ನು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಕಾಂತ ನರಬೋಳಿ ಅವರು ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನನ್ನನ್ನು ಅರ್ಪಿಸಿಕೊಳ್ಳುತ್ತೆನೆ ಮತ್ತು ನನ್ನ ದೇಶ ಬಾಂಧವರಲ್ಲಿ ಈ ಸಂದೇಶ ವನ್ನು ಸಾರಲು ಶ್ರಮಿಸುತ್ತೆನೆ ಎಂದು ನಾನು ಶ್ರದ್ಧಾ ಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೆನೆ. ಸರ್ದಾರ್ ವಲ್ಲಭಬಾಯಿ ಪಾಟೇಲ್ ರವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣ ಸ್ಪೂರ್ತಿಯನ್ನು ಕಾಪಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿದರು.

Contact Your\'s Advertisement; 9902492681

ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿ ಪಡಿಸಲು ನಾನು ನನ್ನದೇ ಆದ ಕೊಡುಗೆಯನ್ನು ನೀಡುತ್ತೇನೆ ಎಂದು ಒಮ್ಮನಸ್ಸಿನಿಂದ ಪ್ರತಿಜ್ಞೆ ಪ್ರತಿಜ್ಞಾ ವಿಧಿ ಭೋದಿಸಿರು.

ಈ ಕಾರ್ಯಕ್ರಮದಲ್ಲಿ ಎಫ್ ಡಿ ಎ ಸುರೇಖಾ ಹೇರಲಗಿ, ಹಿರಿಯ ಆರೋಗ್ಯ ನೀರಿಕ್ಷಾಣಧಿಕಾರಿಗಳಾದ ಗುಂಡಪ್ಪ ದೊಡ್ಡಮನಿ , ರಾಜಶೇಖರ ಕುರಕೋಟಿ ‌ . ಜಿಲ್ಲಾ ಎನ್ ಟಿ ಇಪಿ ಫಾರ್ಮಸಿ ಅಧಿಕಾರಿ ಅದ್ನನ್ ಕುಡ್ಳೆ . ಎಸ್ ಟಿ ಎಲ್ ಎಸ್ ಸಂಗಮೇಶ ಪಾಟೀಲ್, ಜಿಲ್ಲಾ ಡಿ ಆರ್ ಟಿ ಬಿ ಸಕ್ಷಮ್ ಸಮಾಲೋಚಕ ಮಂಜುನಾಥ ಕಂಬಾಳಿಮಠ, ಡಿಇಓ ಪೂಜಾ ಪಾಟೀಲ , ಜಿಲ್ಲಾ ವಿಬಿಡಿ ಸಲಹೆಗಾರರು, NVBDCP ಕರ್ಣಿಕ ಕೋರೆ , ಡ್ಯಾಪ್ಕೋ ಅಕೌಂಟೆಂಟ್ ಅರ್ಚನಾ ಅಣವೇಕರ್, ಡಿಇಓ ದಿನೇಶ. ಐಸಿಟಿಸಿ ಸಮಾಲೋಚಕಿ ಜಗದೇವಿ ವಿ ಸೂರನ್. ಐ ಸಿ ಎಂ‌ ಆರ್ ಎನ್ ಐ ಟಿ ಎಂ. ಸಿಬ್ಬಂದಿಗಳಾದ ಸಾಮೀದ್ ಕಬ್ಬೆನವರ್, ಸುನೀಲ್ ಚಿನ್ನಮಳ್ಳಿ, ಸಿದ್ದರಾಜ, ಸಿಮಬ್ರೀನ್, ಪ್ರಭು ಯುವರಾಜ, ಸಂಗೀತಾ ರೇಷ್ಮ. , ಮತ್ತು ನಾಗೇಂದ್ರಪ್ಪ ಮೂಲಗೆ, ಆಹೇರಿ ಬೀ., ಹಾಗೆ ಇತರೆ , ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here