ಅಂಗವಿಕಲರ ಶೇ.5 ಸೌಲಭ್ಯ ಕಲ್ಪಿಸಿ: ವಿಕಲಚೇತನರ ಸಂಘ ಒತ್ತಾಯ

0
34

ಶಹಾಬಾದ: ನಗರಸಭೆಯ 2022-23 ನೇ ಸಾಲಿನ ನಗರ ಉನ್ನತ ಅಡಿಯಲ್ಲಿ ಅಂಗವಿಕಲರಿಗೆ ಅನುದಾನ 5% ಸೌಲಭ್ಯ ವಿತರಣೆ ಮಾಡಬೇಕೆಂದು ಒತ್ತಾಯಿಸಿ ತಾಲೂಕಾ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘ ಶಹಾಬಾದ ತಾಲೂಕಿನ ಪದಾಧಿಕಾರಿಗಳು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ ಮಾತನಾಡಿ, ವಿಕಲಚೇತನರಿಗಾಗಿ ನಗರೋತ್ಥಾನ ಯೋಜನೆ ಅಡಿಯಲ್ಲಿ 5% ಅನುದಾನದಲ್ಲಿ ತ್ರಿಚಕ್ರ ವಾಹನ ಹಾಗೂ ಶಸ್ತ್ರ ಚಿಕಿತ್ಸೆ, ಶಿಕ್ಷಣ ಸೇರಿದಂತೆ ಹಲವಾರು ಯೋಜನೆಗಳು ನಿಗದಿಪಡಿಸಲಾಗಿತ್ತು, ಆದರೆ ಒಂದು ವರ್ಷ ಐದು ತಿಂಗಳು ಕಳೆದರು ಕೂಡ ಯಾವುದೇ ವಿಕಲಚೇತನರ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿಲ್ಲ, ಆರ್ಜಿ ಹಾಕಿದ ಫಲಾನುಭವಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

Contact Your\'s Advertisement; 9902492681

ಸರ್ಕಾರ ಅಂಗವಿಕಲರಿಗಾಗಿ ಮೀಸಲಿಟ್ಟಿರುವ ಶೇಕಡ 5ರಷ್ಟು ಅನುದಾನದಲ್ಲಿ ಕೂಡಲೇ ಸೌಲಭ್ಯ ವಿತರಿಸಬೇಕೆಂದು ತಾಲೂಕು ವಿಕಲಚೇತನರ ಕ್ಷೇಮಾಭಿವೃದ್ದಿ ಸಂಘದ ತಾಲೂಕ ಅಧ್ಯಕ್ಷ ಚಂದ್ರಕಾಂತ ಪಾಟೀಲ ಪೌರಾಯುಕ್ತರಾದ ಪಂಕಜಾ ರಾವೂರ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಒಂದು ವೇಳೆ ನಿರ್ಲಕ್ಷ ಮಾಡಿದರೆ ಅತಿ ಶೀಘ್ರದಲ್ಲಿ ನಗರ ಸಭೆ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ, ಮೋಹನ ಹಳ್ಳಿ, ಸುಭಾಶ್ಚಂದ್ರ ಕಾಂಬಳೆ, ಮಲ್ಲಿಕಾರ್ಜುನ ಹಳ್ಳಿ, ಸತೀಶ, ವೆಂಕಟೇಶ ಕುಸಾಳೆ, ಲಕ್ಷ್ಮಣ, ಪರಶುರಾಮ, ಅನಿಲ ಮಠಪತಿ, ಲಕ್ಷ್ಮೀಕಾಂತ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here