ಎಫ್.ಐ.ಡಿ ಮತ್ತು ಎನ್‍ಪಿಸಿಐ ಮಾಡುವುದು ಕಡ್ಡಾಯ: ತಹಶೀಲ್ದಾರ್ ಸಂಗಾವಿ

0
13

ಶಹಾಬಾದ: ಎಫ್‍ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರದ ಮೊತ್ತ ಸಿಗಲಿದೆ.ಆದ್ದರಿಂದ ಎಫ್‍ಐಡಿ ಹೊಂದಿರದವರು ನೊಂದಣಿ ಮಾಡುವುದು ಕಡ್ಡಾಯ ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವಿವಿಧ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳು ತಾವು ಪಿಂಚಣಿ ಪಡೆಯುತ್ತಿರುವ ಬ್ಯಾಂಕ ಅಥವಾ ಅಂಚೆ ಕಛೇರಿಗೆ ತೆರಳಿ ತಮ್ಮ ಬ್ಯಾಂಕ / ಅಂಚೆ ಕಛೇರಿ ಖಾತೆಗೆ ಆಧಾರ ಜೋಡಣೆ ಮತ್ತು ಎನ್.ಪಿ.ಸಿ.ಐ. ಮ್ಯಾಪಿಂಗ್ ನವಂಬರ್ 30ರ ಒಳಗಾಗಿ ಮಾಡಿಸಿಕೊಳ್ಳತಕ್ಕದ್ದು. ತಪ್ಪಿದ್ದಲ್ಲಿ ತಮ್ಮ ಪಿಂಚಣಿ ತಡೆ ಹಿಡಿಯಲಾಗುವುದು ಅಥವಾ ರದ್ದುಗೊಳಿಸಲಾಗುವುದು ಎಂದು ತಹಶೀಲ್ದಾರ್ ಗುರುರಾಜ ಸಂಗಾವಿ ಸಾರ್ವಜನಿಕರಿಗೆ ತಿಳಿಸಿದ್ದಾರೆ.

ತಾಲೂಕಿನಲ್ಲಿ ಭೂ ಹಿಡುವಳಿದಾರಾದ ಬಹುತೇಕ ರೈತರು ಎಫ್‍ಐಡಿ ನೊಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ರೈತರು ತಮ್ಮ ಎಲ್ಲಾ ಸರ್ವೇ ನಂಬರ್ ಗಳನ್ನು ಎಫ್‍ಐಡಿ ಮಾಡಿಸಿ, ಒಂದು ವೇಳೆ ಮಾಡಿಸದಿದ್ದರೆ ರೈತರಿಗೆ ಬರ ಪರಿಹಾರ, ತೊಗರಿ ನೆಟೆರೋಗ ಪರಿಹಾರದ ಮೊತ್ತ ಬರುವುದಿಲ್ಲ. ಏಕೆಂದರೆ ಈ ಹಣ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.

Contact Your\'s Advertisement; 9902492681

ಎಫ್‍ಐಡಿ ಮಾಡಿಸದ ರೈತರು ತಕ್ಷಣ ಸಮೀಪದ ಸಿಎಸ್‍ಸಿ ಸೆಂಟರ್, ರೈತ ಸಂಪರ್ಕ ಕೇಂದ್ರ ಕಚೇರಿಗೆ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆಯೊಂದಿಗೆ ತೆರಳಿ ಎಫ್‍ಐಡಿ ಮಾಡಿಸಲು ಸೂಚಿಸಿದ್ದಾರೆ, ತಪ್ಪಿದಲ್ಲಿ ಸರಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ವಂಚಿತರಾಗುವಿರಿ ಎಂದು ತಹಶೀಲ್ದಾರ್ ಗುರುರಾಜ ಸಂಗಾವಿ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here