ನೇಕಾರರ ಸೇವಾ ಸಂಘದ ಕಛೇರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ

0
12

ಕಲಬುರಗಿ: ನೇಕಾರರ ಸೇವಾ ಸಂಘದ ಕಛೇರಿಯಲ್ಲಿ ರಾಷ್ಟ್ರೀಯ ಯುವ ದಿನ, ಆಚರಣೆಯ ಸಂದರ್ಭದಲ್ಲಿ ಜಿಲ್ಲಾ ಕುರಹಿನಶೆಟ್ಟಿ ಸಮಾಜ, ಪ್ರಕಟಿಸಿದ 2024 ರ ವರ್ಷದ ತೂಗು ದಿನದರ್ಶಿಕೆ ಯನ್ನು ಲೋಕಾರ್ಪಣೆಗೊಳಿಸಲಾಯಿತು.

ಕಲಬುರಗಿ ಮಹಾನಗರದ ಪ್ರತಿಯೊಂದು ನೇಕಾರರ ಮನೆಯಲ್ಲಿ ತೂಗಿಹಾಕುವಂತೆ ಮಾಡಲು ಶ್ರಮವಹಿಸಲು ಯುವಕರು ವಿವೇಕಾನಂದರ ಭಾವ ಚಿತ್ರಕ್ಕೆ ಪ್ರಮಾಣ ಮಾಡಲಾಯಿತು, ಮಹಾನಗರದಲ್ಲಿ ನೇಕಾರರ ಅಸ್ಮಿತೆ ಜಾಗ್ರತಿ ಗೊಳ್ಳಲು ಈ ಕಾರ್ಯ ಅನಿವಾರ್ಯವಾಗಿದೆ ಎಂದು ಸಪ್ತ ನೇಕಾರ ಸಂಘದ ಕಾರ್ಯದರ್ಶಿ ಗಳಾದ ಮ್ಯಾಳಗಿ ಚಂದ್ರಶೇಖರ್ ಕೋರಿದರು.

Contact Your\'s Advertisement; 9902492681

ಅಧ್ಯಕ್ಷರಾದ ಬಸವರಾಜ ಕರದಳ್ಳಿ ಅಧ್ಯಕ್ಷತೆ ವಹಿಸಿದ್ದರು, ಮೊದಲಿಗೆ ನ್ಯಾಯವಾದಿ ಸಂತೋಷ್ ಗುರುಮಿಟಕಲ ಎಲ್ಲರಿಗೂ ಸ್ವಾಗತಿಸಿದರು, ಪ್ರಾಸ್ತಾವಿಕವಾಗಿ ಉಪಾಧ್ಯಕ್ಷರಾದ ಕುಶಾಲ ಯಡವಳ್ಳಿ ಮಾತನಾಡುತ್ತ, ಕಲಬುರಗಿ ಮಹಾನಗರದಲ್ಲಿ ಕಳೆದ 25 ವರ್ಷದಿಂದ ಸೇವೆ ಮಾಡುತ್ತಾ ಬಂದರು, ನಮಗೆ ಸ್ವಂತ ಕಾರ್ಯಾಲಯಕ್ಕೆ ಯಾವುದೇ ಸರಕಾರ ಸಹಾಯ ಮಾಡಿಲ್ಲ, ಅದನ್ನು ಬದಿಗೊತ್ತಿ ಸ್ವಂತ ಬಲದಿಂದ 2 ಎರಡು ಎಕರೆ ಜಮೀನು ಖರೀದಿಸಲು ಸಂಘಟಿತ ರಾಗಿದ್ದೇವೆ ಎಂದು ತಿಳಿಸಿದರು, ಖಜಾಂಚಿ ಮಲ್ಲಿನಾಥ ಕುಂಟೋಜಿ ಉಪಸ್ಥಿತರಿದ್ದರು.

ಡಾ. ಬಸವರಾಜ ಚನ್ನಾ ವಂದಿಸಿದರು ಕಾರ್ಯಕ್ರಮದಲ್ಲಿ ವಕೀಲ ಶಿವಲಿಂಗಪ್ಪಾ ಅಷ್ಟಗಿ, ವಿನೋದ ಕುಮಾರ ಜೇನವೆರಿ, ರಾಜು ಕೋಷ್ಟಿ, ಶ್ರೀನಿವಾಸ, ವೆಂಕಟೇಶ್ ಬಲ ಪೂರ್ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here