ಚಿಂಚೋಳಿ: ಬಸವಣ್ಣನವರಿಗೆ ಜೈಕಾರ, ಗೌರವ ಸಮರ್ಪಣೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು

0
27

ಚಿಂಚೋಳಿ: 12 ನೇ ಶತಮಾನದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು, ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ ವಿಶ್ವಕ್ಕೆ ಸಮಾನತೆ ಸಾರಿದ ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ (ರಾಯಭಾರಿ)ಯಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಿರುವ ಹಿನ್ನೆಲೆಯಲ್ಲಿ, ಚಿಂಚೋಳಿ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಆಶ್ವಾರೂಡ ಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆಗೆ ಚಿಂಚೋಳಿ ಕಾಂಗ್ರೆಸ್ ಮುಖಂಡರು ಹೂ ಮಾಲೆ, ಪುಷ್ಪನಮನ ಗೌರವ ಸಮರ್ಪಣೆ ಸಲ್ಲಿಸಿ, ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಜೈ ಕಾರ ಕೂಗುವ ಮೂಲಕ ಹರ್ಷವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಶರಣು ಪಾಟೀಲ್ ಮೊತಕಪಳ್ಳಿ, ಲಕ್ಷ್ಮಣ ಅವುಂಟಿ, ನಾಗೇಶ್ ಗುಣಾಜಿ, ಬಸವರಾಜ ಕಡಬೂರ, ಖಲೀಲ್ ಪಟೇಲ್, ಶಿವರಾಜ ಪಾಟೀಲ್, ವಿಶ್ವ ಹೊಡೆಬೀರನಳಿ, ನರಸಪ್ಪ ಕಿವಣಕೊರ, ವಿರೇಶ್ ಜೋನಲ್, ಮನೋಹರ ದೇಗಲ್ಮಡಿ, ಎಂ. ಕೆ. ಖಾನ್, ಮಸ್ತಾನ್ ಪಟೇಲ್, ಶೇಕ್ ಫರೀದ, ಹಫೀಜ್ ಪಟೇಲ್, ಪ್ರಕಾಶ್ ಜಾಧವ, ಗೋಪಾಲ ಕೊರಡಂಪಳ್ಳಿ, ಸೂರ್ಯಕಾಂತ ರಾಠೋಡ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here