ಜಾನಪದ ಕಲೆ, ಸಂಸ್ಕøತಿಯನ್ನು ಉಳಿಸಲು ಶ್ರಮಿಸೋಣ; ಪದ್ಮಶ್ರೀ ಡಾ.ಮಂಜಮ್ಮ ಜೋಗುತಿ

0
40

ಕಲಬುರಗಿ: ದೇಶದ ಮೂಲ ವಾರಸುದಾರರ ಸಂಸ್ಕøತಿ, ಪರಂಪರೆಯಾದ ಜಾನಪದ ಕಲೆ, ಸಂಸ್ಕøತಿ, ಪರಂಪರೆಯನ್ನು ಮರೆತರೆ ದೇಶದ ಭವ್ಯ ಪರಂಪರೆಗೆ ದಕ್ಕೆಯಿದೆ. ವಿದೇಶಿ ವ್ಯಾಮೋಹಕ್ಕೆ ಒಳಗಾಗದೆ, ನಮ್ಮತನವನ್ನು ಹೊಂದಿರುವ ದೇಶದ ಮೂಲ ಕಲೆ, ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಎಲ್ಲರಿಂದ ಜರುಗಬೇಕಾದದ್ದು ಇಂದಿನ ಅಗತ್ಯತೆಯಾಗಿದೆ ಎಂದು ಹಿರಿಯ ಜಾನಪದ ಕಲಾವಿದೆ ಪದ್ಮಶ್ರೀ ಡಾ.ಮಂಜಮ್ಮ ಜೋಗುತಿ ಹೇಳಿದರು.

ನಗರದ ಸಿದ್ದಾರ್ಥ ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ನಂತರ ಅವರು ಮಾತನಾಡಿದರು.

Contact Your\'s Advertisement; 9902492681

ಜಾನಪದ ಸಂಸ್ಕøತಿಯಲ್ಲಿ ಮಾನವೀಯ ಮೌಲ್ಯಗಳಿವೆ. ಇದರ ಅಳವಡಿಕೆಯಿಂದ ಜಾತಿ, ಧರ್ಮ, ಪ್ರದೇಶಗಳ ಆದಾರದ ಮೇಲೆ ನಾವಿಂದು ಕಾಣುತ್ತಿರುವ ತಾರತಮ್ಯ ನಿರ್ಮೂಲನೆಯಾಗಿ, ಭ್ರಾತೃತ್ವದ ಮೂಡುತ್ತದೆ. ದೇಶದ ಸಂಸ್ಕøತಿಯ ಶ್ರೀಮಂತಿಕೆಗೆ ಜನಪದರ ಕೊಡುಗೆ ಅಪಾರವಾಗಿದೆ. ಪ್ರಸ್ತುತ ದಿನಗಳಲ್ಲಿ ಜಾನಪದ ಸಂಸ್ಕøತಿ ಕಡಿಮೆಯಾಗುತ್ತಿದ್ದು, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಬ್ದಾರಿ ಎಲ್ಲರ ಮೇಲಿದೆ ಎಂದರು.

ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ನಾಡಿನ ಕಲೆ, ಸಂಸ್ಕøತಿ, ಪರಂಪರೆಗೆ ಡಾ.ಮಂಜಮ್ಮ ಜೋಗುತಿ ಅವರ ಕೊಡುಗೆ ಅನನ್ಯವಾಗಿದೆ. ಅವರಲ್ಲಿರುವ ಸಾಮಾಜಿಕ ಕಾಳಜಿ, ಕಳಕಳಿ ಶ್ಲಾಘನೀಯವಾಗಿದೆ ಎಂದರು.
ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಪ್ರಮುಖರಾದ ಎಸ್.ಬಿ.ಹರಿಕೃಷ್ಣ, ಕಸ್ತೂರಬಾಯಿ ಸಿಂದಬಂದಗಿ, ಲಲಿತಾ ಸಿಂದಬಂದಗಿ, ರವಿಕಿರಣ, ಚೇತನ, ಮಂಜುನಾಥ ಮರೆಮ್ಮನಳ್ಳಿ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here