ಸರ್ಕಾರ ನೌಕರರಿಗೆ ಓ.ಪಿ.ಎಸ್ ಜಾರಿಗೊಳಿಸುವುದು ಶತಸಿದ್ಧ: ಶಾಂತಾರಾಮ ತೇಜ್

0
128

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ಎನ್ ಪಿ ಎಸ್ ನೌಕರರ ಸಂಘ ಬೆಂಗಳೂರು ಜಿಲ್ಲಾ ಘಟಕ ಕಲಬುರಗಿ ವತಿಯಿಂದ ನಗರದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎನ್ ಪಿ ಎಸ್ ರದ್ದು ಪಡಿಸಿ ಒಪಿಎಸ್ ಜಾರಿಗೆ ತರುವಂತೆ ರಾಜ್ಯಾಧ್ಯಕ್ಷ ಶಾಂತಾರಾಮ ತೇಜ್ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ ಕರ್ನಾಟಕ ರಾಜ್ಯ ಸರಕಾರಿ ಎನ್ ಪಿ ಎಸ್ ನೌಕರರ ಸಂಘ ಸ್ಥಾಪನೆಗೊಂಡ 10 ವರ್ಷಗಳ ಅವಧಿಯಲ್ಲಿ ಸಂಘವು ಹಲವಾರು ರೀತಿಯ ವಿಶಿಷ್ಠವಾದ ಹೋರಾಟಗಳನ್ನು ಮಾಡುತ್ತಾ ಬಂದಿರುವುದು ತಮಗೆಲ್ಲ ತಿಳಿದ ವಿಷಯ ಅದಕ್ಕೆ ತಾಲೂಕು ಹಾಗೂ ಜಿಲ್ಲಾ ಎನ್ ಪಿ ಎಸ್ ನೌಕರರ ಸಂಘಗಳ ಸಹಕಾರದಿಂದ ನಮ್ಮ ಹೋರಾಟ ಗಟ್ಟಿಗೊಂಡಿದೆ.

ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದಂತೆ ಎನ್ ಪಿ ಎಸ್ ರದ್ದು ಪಡಿಸಿ ಒಪಿಎಸ್ ಜಾರಿಗೆ ತರುವಂತೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರನ್ನು ಹಲವು ಬಾರಿ ಭೇಟಿ ಆಗಿದ್ದೆವೆ ನಮಗೆ ಸಂಪೂರ್ಣವಾಗಿ ಎನ್ ಪಿ ಎಸ್ ರದ್ದು ಪಡಿಸುವುದಾಗಿ ಹೇಳಿದ್ದಾರೆ ನೌಕರರು ಆಂತಕ ಪಡುವ ಅಗತ್ಯವಿಲ್ಲ ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಯಿತು.

Contact Your\'s Advertisement; 9902492681

ಅವರು ಸಹ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ. ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರೊಂದಿಗೆ ಸುಮಾರು 15 ನಿಮಿಷಗಳ ಕಾಲ ಎನ್ ಪಿ ಎಸ್ ನೌಕರರ ಸಾಧಕ ಬಾಧಕಗಳನ್ನು ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ಪಿ ತಳವಾರ, ರಾಜ್ಯ ಕಾರ್ಯದರ್ಶಿ ವೃಷಬೆಂದ್ರ ಹೀರೆಮಠ ರವಿ ಅಸುಟ್ಟಿ, ರಾಜ್ಯ ಪತ್ರಿಕಾ ಮಾಧ್ಯಮದ ಪ್ರತಿನಿಧಿ ಮಹಾದೇಶ ವರ್ಮಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಯಶವಂತಿ ಮೇಡಂ, ಜಿಲ್ಲಾ ಅಧ್ಯಕ್ಷರಾದ ಧರ್ಮರಾಜ ಜವಳಿ, ಜಿಲ್ಲಾ ಗೌರವಾಧ್ಯಕ್ಷರಾದ ಅಶೋಕ ಸೊನ್ನ ಯಾದಗೀರಿ ಎನ್ ಪಿ ಎಸ್ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಆನಂದ ಕಜಗಾರ ಪ್ರಧಾನ ಕಾರ್ಯದರ್ಶಿ ಚಂದು ಜಾದವ, ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ತಳವಾಡೆ, ಸಂಘದ ಪದಾಧಿಕಾರಿಗಳಾದ ಮಹೇಶ ನಾಗಮಾರಪಳ್ಳಿ, ಸುನಿಲ್ ದತ್ತ ಡಾಂಗೆ, ಶಿವಪ್ರಸಾದ ಪಿ ಜಿ, ಸಂತೋಷ ಕಲ್ಮೂಡ್, ರೇಣುಕಾ ಎನ್,ಪಡೆಯಪ್ಪ, ಮಲ್ಲಿಕಾರ್ಜುನ ಕಲ್ಯಾಣರಾವ, ಶಹಾಬಾದ್ ಅಧ್ಯಕ್ಷರಾದ ಶರಣಪ್ಪ, ಲಲಿತಾ ಪಾಟೀಲ, ಜಯಶ್ರೀ, ರಾಘವೇಂದ್ರ, ಕಾಶಿರಾಯ ಅಶೋಕ ಜೆ ಟಿ, ತಿಪ್ಪಣ್ಣ ಮೆಳಕುಂದಿ ರವಿ ಜಾಧವ ಇತರ ಎನ್ ಪಿ ಎಸ್ ನೌಕರರು ಮತ್ತು ಒಪಿಎಸ್ ನೌಕರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here