ಬಸವಣ್ಣ ಸಾಂಸ್ಕೃತಿಕ ನಾಯಕ: ಕಾರ್ಯಕ್ರಮ ಆಯೋಜಿಸಲು ಮನವಿ

0
24

ಶಹಾಬಾದ: ರಾಜ್ಯದ ಸರ್ಕಾರಿ ವಿವಿಧ ಕಛೇರಿಗಳಲ್ಲಿ ಫೆ. 17 ರಂದು ಬಸವಣ್ಣನವರ ಭಾವಚಿತ್ರ ಅಳವಡಿಸಲು ಸರಕಾರ ಆದೇಶ ಮಾಡಿದ್ದು, ಅಂದು ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆ ಬಳಿ ದೀಪಗಳ ಅಲಂಕಾರ ಮಾಡಿ, ಶಾಸಕರನ್ನು ವಿವಿಧ ಸಮಾಜದ ಮುಖಂಡರನ್ನು, ಗಣ್ಯರನ್ನು ಕರೆಯಿಸಿ ಕಾರ್ಯಕ್ರಮ ಜರುಗಿಸಬೇಕೆಂದು ನಗರದ ಜಾಗತಿಕ ಮಹಾ ಲಿಂಗಾಯತ ಸಭೆಯ ವತಿಯಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಜಾಗತಿಕ ಮಹಾ ಲಿಂಗಾಯತ ಸಭೆಯ ಪ್ರಧಾನ ಕಾರ್ಯದರ್ಶಿ ಗಿರಿಮಲ್ಲಪ್ಪ ವಳಸಂಗ ಮಾತನಾಡಿ, ನಾವೆಲ್ಲರೂ ಒಂದೇ ಎಂದು ಸಮಾನತೆ ಸಾರಿ 12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿದ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕøತಿಕ ಮತ್ತು ಸಮಾನತೆಯ ನಾಯಕನೆಂದು ಘೋಷಣೆ ಮಾಡಿ ಆದೇಶ ಹೊರಡಿಸಿದ್ದು ಶ್ಲ್ಯಾಘನೀಯ.

Contact Your\'s Advertisement; 9902492681

ರಾಜ್ಯದ ಸರ್ಕಾರಿ ವಿವಿಧ ಕಛೇರಿಗಳಲ್ಲಿ ಫೆ. 17 ರಂದು ಬಸವಣ್ಣನವರ ಭಾವಚಿತ್ರ ಅಳವಡಿಸಲು ಆದೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರದ ಸಂಪುಟದ ಸಚಿವರಿಗೆ ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನೆ ತಿಳಿಸಿದರು.

ಸಮಾನತೆ ಸಾರಿದ ಬಸವಣ್ಣನವರನ್ನುಸಾಂಸ್ಕೃತಿಕ ನಾಯಕನೆಂದು ಸರಕಾರ ಆದೇಶ ಮಾಡಿರುವುದರಿಂದ ಸಾರ್ವಜನಿಕ ವಲಯಕ್ಕೆ ತಿಳಿಸುವ ನಿಟ್ಟಿನಲ್ಲಿ ಶಾಸಕರನ್ನು ವಿವಿಧ ಸಮಾಜದ ಮುಖಂಡರನ್ನು, ಗಣ್ಯರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಮನವಿ ಮಾಡಿದರು.

ಶರಣಗೌಡ ಪಾಟೀಲ ಮಾತನಾಡಿ, ಬಸವಣ್ಣನವರು ವಿಶ್ವಮಾನ್ಯ ತತ್ವವನ್ನು ಜಗತ್ತಿಗೆ ಕೊಟ್ಟಿದ್ದಾರೆ. ಅವರನ್ನು ಸರ್ಕಾರ ವಿಶ್ವಗುರು ಸಾಂಸ್ಕೃತಿಕ ನಾಯಕನೆಂದು ನಮೋದಿಸಿದೆ. ಅದಕ್ಕಾಗಿ ಅವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಇಡಲು ಸೂಚಿಸಿದ್ದು ಹರ್ಷ ತಂದಿದೆ ಎಂದರು.

ಜಾಗತಿಕ ಮಹಾ ಲಿಂಗಾಯತ ಸಭೆಯ ಉಪಾಧ್ಯಕ್ಷರಾದ ಮಹಾಂತೇಶ ಅವಂಟಿ, ರೇವಣಸಿದ್ದಪ್ಪ ಮುಸ್ತಾರಿ, ರಮೇಶ ಜೋಗದನಕರ್,ಕುಪೇಂದ್ರ ತುಪ್ಪದ್, ಅಮೃತ ಮಾನಕರ್, ಮಲ್ಲಿನಕಾರ್ಜುನ ವಾಲಿ,ಚನ್ನಮಲ್ಲಪ್ಪ ಸಿನ್ನೂರ್,ವಿರೇಶ ಕುಂಬಾರ,ಸಂತೋಷ ಪಾಟೀಲ, ರಾಕೇಶ, ಶಾಂತಪ್ಪ ಹಡಪದ,ಜಗನ್ನಾಥ.ಎಸ್.ಹೆಚ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here