`ಬಿಸಿಲನಾಡಿನ ಬೆಳದಿಂಗಳು’ ಕೃತಿ ಲೋಕಾರ್ಪಣೆ ಮಾ.3 ರಂದು

0
139

ಕಲಬುರಗಿ; ಮಕ್ಕಳ ಸಾಹಿತ್ಯ ಕ್ಷೇತ್ರದ ಅದ್ವಿತೀಯ ಸಾಧನೆಗೈದ ಹಿರಿಯ ಲೇಖಕರಾದ ಎ.ಕೆ.ರಾಮೇಶ್ವರ ಅವರು 50 ವರ್ಷ ಸಲ್ಲಿಸಿದ ಸಾಹಿತ್ಯದ ಸೇವೆಯ ಹಿನ್ನೆಲೆಯಲ್ಲಿ ಒಂದು ಲಕ್ಷ ರೂ.ಹಮ್ಮಿಣಿ ಕೊಡುವ ಮೂಲಕ ಗೌರವಿಸುವಂಥ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರೂ ಆಗಿರುವ ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

91 ವರ್ಷದ ಹಿರಿಯ ಲೇಖಕರಾದ ಎ.ಕೆ.ರಾಮೇಶ್ವರ ಅವರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಸುಮಾರು 12 ಕವನ ಸಂಕಲನಗಳನ್ನು ಕೊಟ್ಟಿರುವ ಏಕೈಕ ಕವಿಯಾಗಿದ್ದು, ಕಲಬುರಗಿ ನೆಲದಲ್ಲಿದ್ದುಕೊಂಡು, ಇಡೀ ಕರ್ನಾಟಕವನ್ನು ಈಕಡೆ ನೋಡುವಂತೆ ಮಾಡಿದ್ದಾರೆ. ಮಕ್ಕಳ ಸಾಹಿತ್ಯ ಸಂದರ್ಭದಲ್ಲಿ ಎ.ಕೆ.ರಾಮೇಶ್ವರ ಅವರದು ಅದ್ವಿತೀಯ ಸಾಧನೆಯಾಗಿದ್ದು, ಇದನ್ನು ಮನಗಂಡು, ಕಲಬುರಗಿ ನೆಲದ ಸಾಹಿತ್ಯಾಭಿಮಾನಿಗಳು ಅವರಿಗೆ `ಧನ್ಯವಾದ’ ಹೇಳುವುದಕ್ಕಾಗಿ ವಿಶಿಷ್ಟವಾದ ಕೃತಿಯೊಂದನ್ನು ಅರ್ಪಿಸುವುದಲ್ಲದೇ, ಒಂದು ಲಕ್ಷ ರೂ.ಹಮ್ಮಿಣಿಯನ್ನು ನೀಡಿ ಗೌರವಿಸಲಾಗವುದು ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ರಾಮೇಶ್ವರ ಅವರು ಬರೆದಿರುವ 12 ಮಕ್ಕಳ ಸಾಹಿತ್ಯ ಕೃತಿಗಳನ್ನು ಕ್ರೋಢೀಕರಿಸಿ, ಅವುಗಳಲ್ಲಿ 19 ವಿಶಿಷ್ಟ ವೈವಿಧ್ಯಮಯ ವಿಷಯಗಳ ವಸ್ತುಗಳ ಬಗ್ಗೆ 19 ಲೇಖಕರಿಂದ ಸಂಶೋಧನಾತ್ಮಕ ಲೇಖನಗಳನ್ನು ಬರೆಯಿಸಿ, ಮಹಿಪಾಲರೆಡ್ಡಿ ಸೇಡಂ ನುಡಿಸಾರಥ್ಯದ `ಬಿಸಿಲನಾಡಿನ ಬೆಳದಿಂಗಳು’ ಎಂಬ ವಿಭಿನ್ನ ಕೃತಿಯನ್ನು, ಮಾ.3 ರಂದು ಕಲಬುರಗಿ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಸಂಜೆ 4 ಕ್ಕೆ ಲೋಕಾರ್ಪಣೆ ಮಾಡಲಾಗುವುದು.

ಸಚಿವರು, ಶಾಸಕರು ಸೇರಿದಂತೆ ಗಣ್ಯರು ಭಾಗವಹಿಸುವ ಈ ಸಮಾರಂಭದಲ್ಲಿ ಹಿರಿಯ ಲೇಖಕರು, ಸಾಹಿತಿಗಳು, ಪತ್ರಕರ್ತರು ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸುವರು. `ಬಿಸಿಲನಾಡಿನ ಬೆಳದಿಂಗಳು’ ಈ ಕೃತಿಯಲ್ಲಿ ಎ.ಕೆ.ರಾಮೇಶ್ವರರ ಮಕ್ಕಳ ಕಾವ್ಯದಲ್ಲಿ `ವಸ್ತು’ ಕುರಿತು ಕಲಬುರಗಿ ರಂಗಾಯಣದ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಅವರ ಲೇಖನ, ಎ.ಕೆ.ಆರ್.ಕಾವ್ಯದಲ್ಲಿ `ಶಾಲೆ’ ಕುರಿತು ಗುಲ್ಬರ್ಗ ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ಎಂ.ಬಿ.ಕಟ್ಟಿ, `ದೇಶಭಕ್ತಿ’ ಬಗ್ಗೆ ಲೇಖಕರಾದ ಡಾ.ಗವಿಸಿದ್ದಪ್ಪ ಪಾಟೀಲ, `ತಾಯಿ’ಕುರಿತು ಲೇಖಕಿಯಾಗಿರುವ ಡಾ.ವಿಶಾಲಾಕ್ಷಿ ಕರಡ್ಡಿ, ಕಾವ್ಯದ `ಶೈಲಿ’ ಬಗ್ಗೆ ವಿಮರ್ಶಕ ಗುರುಶಾಂತಯ್ಯ ಭಂಟನೂರು, `ಗೇಯತೆಯ ಕಾವ್ಯ’ ಕುರಿತು ಡಾ.ಲಕ್ಷ್ಮೀ ಶಂಕರ ಜೋಶಿ, `ಶರಣ ಸಂಸ್ಕøತಿ’ಯ ಕುರಿತು ಪ್ರೊ.ಶೋಭಾದೇವಿ ಚೆಕ್ಕಿ, `ದಾರ್ಶನಿಕರು’ ಕುರಿತು ರಂಗತಜ್ಞೆ ಡಾ.ಸುಜಾತಾ ಜಂಗಮಶೆಟ್ಟಿ, `ಪಕ್ಷಿ-ಪ್ರಾಣಿ ಪ್ರಪಂಚ’ ಬಗ್ಗೆ ಲೇಖಕಿ ಪ್ರೇಮಾ ಹೂಗಾರ ಬೀದರ್, `ಶ್ರೀ ಸಾಮಾನ್ಯ’ ಬಗ್ಗೆ ಕನ್ನಡ ಪ್ರಾಧ್ಯಾಪಕ ಡಾ.ಮಲ್ಲಿನಾಥ ತಳವಾರ, `ಹಬ್ಬಗಳು’ಬಗ್ಗೆ ಲೇಖಕಿ ಡಾ.ಶೈಲಜಾ ಬಾಗೇವಾಡಿ, `ಕಥನ ಕಾವ್ಯ’ ಕುರಿತು ಮಕ್ಕಳ ಸಾಹಿತಿ ಮಂಡಲಗಿರಿ ಪ್ರಸನ್ನ, `ಕ್ರೀಡೆ’ ಬಗ್ಗೆ ಅಫಜಲಪುರದ ಶಿಕ್ಷಕ ಡಿ.ಎಂ.ನದಾಫ, `ಮಹಾಪುರುಷರು’ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ, `ಮಗು’ವಿನ ಬಗ್ಗೆ ಶಿಕ್ಷಕಿ ಪರವಿನ್ ಸುಲ್ತಾನಾ, `ದೈವತ್ವ’ದ ಬಗ್ಗೆ ಲೇಖಕ ಜಗನ್ನಾಥ ತರನಳ್ಳಿ, ಕಾವ್ಯದಲ್ಲಿ `ಪರಿಸರ’ ಕುರಿತು ಲೇಖನವನ್ನು ಕಿರಣ್ ಪಾಟೀಲ ಲೇಖನಗಳನ್ನು ಬರೆದಿದ್ದಾರೆ. ಎ.ಕೆ.ರಾಮೇಶ್ವರ ಅವರು ಬರೆದ ಕವಿತೆಗಳಲ್ಲಿ ಕೆಲವು ಪಠ್ಯ ಪುಸ್ತಕಗಳಲ್ಲಿ ಬಳಸಲಾಗಿದ್ದು, ಅದರನ್ವಯ `ಪಠ್ಯವಾದ ಪದ್ಯಗಳು’ ಕುರಿತು ಡಾ.ಸುಜಾತಾ ಪಾಟೀಲ ಮತ್ತು `ದಣಿವರಿಯದ ಸಾಧಕ’ ಎಂಬ ಲೇಖನವನ್ನು ಲೇಖಕಿ ಡಾ.ಚಂದ್ರಕಲಾ ಬಿದರಿ ಅವರು ಬರೆದಿದ್ದಾರೆ ಎಂದು ಸಂಪಾದಕ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here