ಸಿನಿ ರಸಿಕರ ಮನಗೆಲ್ಲುವ “ಗಿರಿನಾಡ್ ಪ್ರೇಮಿ” ಸಿನಿಮಾ

0
186
  • ಸಾಜಿದ್ ಅಲಿ

ಸಿನೆಮಾ ಎನ್ನುವುದು ಒಂದು ತಂಡದ ಕೆಲಸವೇ ಹೊರತು. ಒಬ್ಬನ-ಇಬ್ಬರ ಕೆಲಸವಲ್ಲ. ನಿರ್ದೇಶಕನ ತಾಳಕ್ಕೆ ನಟ, ನಟಿ, ತಂತ್ರಜ್ಞರು ಕುಣಿದರೆ ಮಾತ್ರ ಅತ್ಯುತ್ತಮ ಸಿನೆಮಾ ಮೂಡಿಬರಲು ಸಾಧ್ಯ ಎಂಬುದಕ್ಕೆ ಗಿರಿನಾಡ್ ಪ್ರೇಮಿ ಸಿನೆಮಾ ನಮ್ಮೆದುರಿಗೆ ಉದಾಹರಣೆಯಾಗಿ ನಿಂತಿದೆ.

ಹೌದು, ಯಾದಗಿರಿ ಸೀಮೆಯ ನೈಜಕತೆಯಾದಾರಿತ ಸಿನೆಮಾ ಇದಾಗಿದ್ದು, ಉತ್ತರ ಕನ್ನಡ ಭಾಷೆಯ ಶೈಲಿ, ವಿನೂತನ ಸಾಹಸದ ಮೂಲಕ ಸಿನಿ ರಸಿಕರ ಮನಗೆಲ್ಲುತ್ತಿದೆ. ಭಾರಿ ಗಾತ್ರದ ಬಜೆಟ್, ಖ್ಯಾತ ನಟರು ಇಲ್ಲದೆ ಹೋದರು ಯಾದಗಿರಿ ಜಿಲ್ಲೆಯ ಯುವಜನರ ಬದುಕು ಜೀವನ ಮತ್ತು ಯಶಸ್ಸನ್ನು ಅತ್ಯುತಮÀ ನಟನೆ ಮತ್ತು ಸಂಗೀತ, ಭಾಷೆ ಮತ್ತು ನಿರ್ದೇಶನ, ಕ್ಯಾಮೆರಾ ವರ್ಕ್ ನೋಡಿದರೆ ದೊಡ್ಡ ಗಾತ್ರದ ಸಿನೆಮಾಗಿಂತ ಕಡಿಮೆಯೇನು ಇಲ್ಲವೆಂದನಿಸದೆ ಇರದು.

Contact Your\'s Advertisement; 9902492681

ಸಿನಿಮಾದಲ್ಲಿ ಪ್ರೇಮಿಗಳಿಬ್ಬರ ಪ್ರೀತಿಯನ್ನು ಕ್ಲೆöÊಮೆಕ್ಸ್ ವರೆಗೆ ಜೀವಂತವಾಗಿ ಕಾಪಾಡಿಕೊಂಡು, ಪ್ರತಿ ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಅಲ್ಲದೇ ಈ ಸಿನಿಮಾ ಯಾದಗಿರಿ ಕಲಬುರಗಿ ಮತ್ತು ಗ್ರಾಮೀಣ ಭಾಗದ ಯುವ ಜನರ ಚೊಚಲ ಪ್ರೀತಿಯ ಕುರುಹುಗಳು ಮನಸ್ಸಿಗೆ ತಟ್ಟುವ ರೀತಿಯಲ್ಲಿ ಸಿನೆಮಾದ ಹೆಚ್ಚುಗಾರಿಕೆಯಾ ಆಗಿದೆ.

ಯುವಕ ಓರ್ವ ನೂತನ ಉದ್ಯಮ ಒಂದು ಪ್ರಾರಂಭಿಸಿ ಅದರಲ್ಲಿ ರಾಂಗ್ ರೀಚಾರ್ಜ್ ಕಾರಣದಿಂದ ಸಿನಿಮಾದ ಆರಂಭವಾಗಿ ಮೈಲಾರ ಲಿಂಗೇಶ್ವರ ದೇವರ ಅನುಗ್ರಹದ ಕೃಪೆಯ ನಂಬಿಕೆಯನ್ನು ಆಧಾರವಾಗಿ ಒಂದು ಮೊಬೈಲ್ ಕರೆಯಲ್ಲಿ ಆರಂಭವಾಗಿ ಮೊಬೈಲ್ ಕಳೆದ ಮೇಲೆ ಸಿನಿಮಾ ಕಥೆಯನ್ನು ಇನ್ನಷ್ಟು ಕುತೂಹಲ ಮುಡಿಸುವ ರೀತಿಯಲ್ಲಿ ನಿರ್ಮಾಪಕರು ನಿರ್ದೇಶಕರು ಬಯಲು ಸೀಮಿಯ ಮಧುರ ಪ್ರೇಮ ಕಥೆಯಾಗಿಯನ್ನು ಜನರ ಮನಮುಟ್ಟುವಂತೆ ಮಾಡಿದ್ದಾರೆ.

ಇನ್ನು ಈ ಸಿನೆಮಾವನ್ನು ಎಂ. ಡಿ. ಕುರಂ ಮತ್ತು ಶರಣು ಪಟ್ಟೆದಾರ ನಿರ್ಮಾಣ ಮಾಡಿದ್ದು, ಯುವರಾಜ್ ಗುತ್ತೇದಾರ ನಿರ್ದೇಶನ, ಸಂಕಲನಕಾರ ಮತ್ತು ಛಾಯಾಗ್ರಾಹಣ ಹೊಣೆಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಜೊತೆಗೆ ಸಾಮ್ರಾಟ್ ಮತ್ತು ಶ್ರೀವಸರ ಸಂಗೀತ ನೀಡಿದರೆ, ಸೂರಜ್ ಪುರಾಣಿಕ್ ಸಾಹಿತ್ಯವಿದೆ.

ಇನ್ನು ತಾರಾಗಣದಲ್ಲಿ ನಟಿ ಸೌಮ್ಯ ತಿತಿರ, ಮುಖ್ಯವಾದ ಪಾತ್ರದಲ್ಲಿ ರೌಶಾನ್ ಲಾರೆನ್ಸ್ ಅವರು ನಟಿಸಿದ್ದು ಕಿಚ್ಚ ಸಾಗರ, ರಾಘವೇಂದ್ರ ಹಳಿಪೇಟ್, ಅಶೋಕ್ ಚಿಕೋಟಿ, ಶರಣ್ ಶೆಟ್ಟಿ, ಪ್ರವೀಣ್ ಜಮಾದಾರ್, ಪ್ರವೀಣ್ ಹಿರೇಮಠ್, ಹರೀಶ್ ಮತ್ತು ಇಂದ್ರಜೀತ್ ಪಾಟೀಲ್ ಮತ್ತು ಎಲ್ಲಾ ಕಲಾವಿದರು ಉತ್ತರ ಕರ್ನಾಟಕದ ಸ್ಥಳೀಯ ಪ್ರತಿಭೆಗಳಾಗಿರುವುದು ವಿಶೇಷ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here