ಜೇವರ್ಗಿ; ತಾಲೂಕ‌ ಸ್ವೀಪ್ ಸಮಿತಿಯಿಂದ ಕಾಲ್ನಡಿಗೆ ಜಾಥಾದ ಮೂಲಕ ಮತದಾನ ಜಾಗೃತಿ

0
23

ಕಲಬುರಗಿ: 2024ರ ಲೋಕ ಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ತಾಲೂಕಾಡಳಿತ ಹಾಗೂ ತಾಲೂಕ‌ ಸ್ವೀಪ್ ಸಮಿತಿಯಿಂದ ಸೋಮವಾರ ಕ್ಯಾಂಡಲ್ ಮಾರ್ಚ್ ಕಾಲ್ನಡಿಗೆ ಜಾಥಾ ಹಮ್ಮಿಕೊಂಡು ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರತಿಜ್ಞೆ ವಿಧಿ ಬೋಧಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ ಗೌಡರ್, ತಹಶಿಲ್ದಾರ ಮಲ್ಲಣ್ಣ ಯಲಗೋಡ, ಸಹಾಯಕ ಚುನಾವಣಾಧಿಕಾರಿ ಕೃಷ್ಣಾ ಸಂತಪುರ, ಪುರಸಭೆಯ ಮುಖ್ಯಾಧಿಕಾರಿ ಶಂಭುಲಿಂಗ ಸೇರಿದಂತೆ ತಾಲೂಕಾಡಳಿತಕ್ಕೊಳಪಡುವ ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here