ಗುಹೇಶ್ವರ ಲಿಂಗದಲ್ಲಿ ನಿನ್ನಿಂದ ಸಿರಿವಂತರಿಲ್ಲ ಕಾಣ ಎಲೆ ಮನವೆ

0
42
ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ- ಅವು ಜಗಕಿಕ್ಕಿದ ವಿಧಿ. ನಿನ್ನ ಒಡೆವೆ ಎಂಬುದು ಜ್ಞಾನ ರತ್ನ ಅಂತಪ ರತ್ನವ ನೀನು ಅಲಂಕರಿಸಿದೆ ಯಾದಡೆ ನಮ್ಮ ಗುಹೇಶ್ವರ ಲಿಂಗದಲ್ಲಿ ನಿನ್ನಿಂದ ಸಿರಿವಂತರಿಲ್ಲ ಕಾಣ ಎಲೆ ಮನವೆ

ನಮ್ಮ ಈಗಿನ ದಿನಗಳಲ್ಲಿ ನಾವು ದೊಡ್ಡ ಬಸವಭಕ್ತರು ನಾವು ಏಕದೇವ ಉಪಾಸಕರು ನಮಗೆ ಬಸವಾದಿ ಶರಣರ ಸಾವಿರಾರು ವಚನಗಳು ಬರುತ್ತವೆ. ನಮಗೆ ಬಂದಷ್ಟು ಬೇರೆ ಯಾರಿಗೂ ಬರುವುದಿಲ್ಲ. ನಾವು ಅಪ್ಪಟ ಬಸವ ಸಂಸ್ಕೃತಿದವರು ಎಂದು ಹೇಳಿಕೊಂಡು ಓಡಾಡುವವರಿಗೆ *ಶರಣ ಶಿಕ್ಷಣ* ತುಂಬಾ ಅನಿವಾರ್ಯವಾಗಿದೆ.

ಅಂತರಂಗ ಬಹಿರಂಗ ಶುದ್ದಿಯನ್ನು ಕಾಯ್ದುಕೊಂಡು ಆದರ್ಶ ಜೀವನ ಸಾಗಿಸಿದವರಿಗೆ ಶರಣ ಎಂದು ಕರೆಯುತ್ತಾರೆ ಎಂದು ಕೇಳಿದ್ದೇನೆ.

Contact Your\'s Advertisement; 9902492681

ಇನ್ನು ಶಿಕ್ಷಣ ಏತಕ್ಕೆ ಬೇಕು ಅಂದರೆ ಅರಿವನ್ನು ಹೆಚ್ಚಿಸಲು ಯಾಕೆಂದರೆ ಇಂದು ಅರಿವಿನ ಅಗತ್ಯವಿದೆ.

ಉದಾಹರಣೆಗೆ, ಒಂದು ಅಧಿಕೃತ ಶಾಲಾ ಕಾಲೇಜುಗಳಿಗೆ ಭರ್ತಿ ಪಡೆಯುವುದು, ಮತ್ತೊಂದು ಅನುಭವದಿಂದ ಪಡೆಯುವುದು , ಯಾಕೆಂದರೆ ಶಾಲಾ ಕಾಲೇಜುಗಳಿಂದ ಪಡೆದ ಶಿಕ್ಷಣ ಔಪಚಾರಿಕ ಶಿಕ್ಷಣ ಆದರೆ ಅನುಭವದಿಂದ ಪಡೆಯುವ ಶಿಕ್ಷಣ ಅನೌಪಚಾರಿಕ ಶಿಕ್ಷಣ , ಅದೇ ಶಾಲಾ-ಕಾಲೇಜು ಶಿಕ್ಷಣ ಅಕ್ಷರಗಳನ್ನು ಕಲಿಸಿ ಬುದ್ಧಿಯನ್ನು ಬೆಳೆಸಿ ಪದವಿ ಪಡೆಯಲು ಸಹಾಯವಾಗುತ್ತದೆ, ಹೊರತು ಅರಿವನ್ನು ನೀಡಲು ಸಾಧ್ಯವಾಗುವುದಿಲ್ಲ!

ಅರಿವು ಬೇರೆ , ಬುದ್ಧಿಯೇ ಬೇರೆ !

ಈಗಿನ ದಿನಮಾನಗಳಲ್ಲಿ ನಾವು ಬಸವ ಸಂಸ್ಕೃತಿದವರು ಎಂದು ಹೇಳುವವರಲ್ಲಿ, ಬಸವ ಸಂಸ್ಕೃತಿಯ ಅರಿವು ನಿಜವಾಗಿಯೂ ಮೂಡಿದೆಯೇ??? ಎನ್ನುವ ಪ್ರಶ್ನೆ ನನ್ನದು.

ಯಾಕೆಂದರೆ ಅಂತರಂಗ-ಬಹಿರಂಗ ಒಂದಕ್ಕೊಂದು ತಾಳಮೇಳವೆ ಇಲ್ಲ, ಯಾವುದೇ ಸಹನೆ ಇಲ್ಲ ದ್ವೇಷಸೂಹೆಗಳಿಂದ ತುಂಬಿ ತುಳುಕುತ್ತಿದ್ದಾರೆ! ದಿನ ಬೆಳಗಾದರೆ ಸಾಕು ಎಲ್ಲಿ ಯಾರಿಗೆ ಅವಮಾನ ಮಾಡಬೇಕು ಎಲ್ಲಿ ಯಾರಿಗೆ ಮರ್ಯಾದೆ ಕಳಿಯಬೇಕು ಎನ್ನುವ ಸಂಚು ಹಾಕುತ್ತಿರುತ್ತಾರೆ. ಇಂಥವರಿಗೆ ಬಸವಭಕ್ತರು , ಶರಣರು ಎನ್ನಬೇಕೇ ?

ಹಾಗಾಗಿ ಅಲ್ಲಮ ಪ್ರಭುದೇವರು ಈ ಮೇಲಿನ ವಚನವನ್ನು ಹೇಳಿರಬಹುದು!

ಶ್ರೀಮಂತ ಅನ್ನುತ್ತಲೇ ಅವನ ಹತ್ತಿರ ಎಷ್ಟು ಹಣವಿದೆ. ಎಷ್ಟು ಬಂಗಾರ ಇದೆ. ಎಷ್ಟು ಆಸ್ತಿ ಇದೆ. ಎಂಥ ಮನೆ ಕಟ್ಟಿದ್ದಾರೆ. ಎಂದು ಬಾಹ್ಯ ವಸ್ತುಗಳ ಒಡವೆಗಳ ಮೂಲಕ ನೋಡುತ್ತಾರೆ.
ಹೊನ್ನು ಶ್ರೀಮಂತಿಕೆ ಸಂಕೇತ ಎಂದು ಕೆಲವರು ಭಾವಿಸುತ್ತಾರೆ.

ಅದೇ ಕೆಲವರು ನಮ್ಮ ಶ್ರೀಮಂತಿಕೆಯಿಂದಲೇ ಬೇರೆಯವರ ಸಂಸಾರ ನಡೆಯುತ್ತಿದೆ. ನಮ್ಮ ಶ್ರೀಮಂತಿಕೆಯಿಂದಲೇ ಬೇರೆಯವರು ಉದ್ಧಾರವಾಗುತ್ತಿದ್ದಾರೆ ಎನ್ನುವ ಪರಿ ಬೇರೆ ಅಂಥವರನ್ನು ನಾನು ಕಣ್ಣಾರೆ ಕಂಡಿದ್ದೇನೆ , ಕಿವಿಯಾರ ಕೇಳಿದ್ದೇನೆ, ಇಂಥವರಿಗೆ ಬಸವ ಭಕ್ತರನ್ನ ಬೇಕೆ ??

ಬಸವ ಭಕ್ತರೆಂದರೆ ಅವರಿಗೆ ನಿಜವಾದ ಸಂಪತ್ತು ಜ್ಞಾನ, ಅದು ಬರಿ ಜ್ಞಾನವಲ್ಲ! ಜ್ಞಾನ ರತ್ನ, ದಿವ್ಯ ರತ್ನ, ಜ್ಞಾನ ಹೊರಗಿನಿಂದ ಸಿಗುವಂತದ್ದಲ್ಲ ! ತನ್ನ ಅರಿವೇ ತನಗೆ ಗುರು ಎನ್ನುವಂತೆ ಪ್ರತಿಯೊಬ್ಬರ ಅಂತರಂಗದಲ್ಲೂ ಅದ್ಭುತ ಶಕ್ತಿ ಅಡಗಿರುತ್ತದೆ, ಆ ಶಕ್ತಿ ಜಾಗೃತಗೊಳಿಸುವ ಕೆಲಸ ಮಾತ್ರ ಶಿಕ್ಷಣ ಮಾಡಬಹುದು , ಅಂತಹ ಶಿಕ್ಷಣದ ಗಂಧ ಗಾಳಿಯು ಗೊತ್ತಿಲ್ಲದವರಿಗೆ ಈ ಜ್ಞಾನವೆಲ್ಲಿಂದ ಬರಬೇಕು ? ಮಾನವನೊಳಗೆ ಇಲ್ಲದೆ ಇರುವುದನ್ನು ಹೊರಗಿನಿಂದ ತುಂಬಲು ಸಾಧ್ಯವಿಲ್ಲ, ಹೊರಗಿನ ಪ್ರೇರಣೆ ಪ್ರಚೋದನೆ ಬೇಕು ಅಷ್ಟೇ,

12ನೇ ಶತಮಾನದ ಬಹುತೇಕ ಶರಣರು ಶಾಲಾ-ಕಾಲೇಜು ಮುಖ ನೋಡಿದ್ದರೇನು? ಅವರು ಅಕ್ಷರದ ಅರಿವಿನಿಂದ ದೂರವಿದ್ದವರು ಶಿಕ್ಷಣ ಸೌಲಭ್ಯದಿಂದ ವಂಚಿತರಾದವರು, ಇಂದಿನ ದಿನಮಾನಗಳಲ್ಲಿ ಅವರ ವಚನಗಳನ್ನು ಸಂಶೋಧನೆ ಮಾಡಿದರೆ ಎಂತಹ ಡಾಕ್ಟರೇಟ್ ಪದವಿ ಪಡೆದವರು ಕೂಡ ಅವರ ಮುಂದೆ ಶೂನ್ಯ ಇದ್ದಂತೆ.

ಹಾಗಾಗಿ ನಾವು ಬಸವಭಕ್ತರು ನಾವು ಬಸವ ಸಂಸ್ಕೃತಿ ದವರು ಪ್ರತಿಯೊಬ್ಬರಲ್ಲಿ ದಯ ಉಳ್ಳವರು ಎಂದು ಹೇಳಿಕೊಂಡು ತಿರುಗುವವರಿಗೆ ನನ್ನದೊಂದು ಮನವಿ ಆತ್ಮಸಾಕ್ಷಿಯಾಗಿ ನಿಮ್ಮನ್ನು ನೀವು ಒಂದು ಸಲ ತಿರುಗಿ ನೋಡಿ ನಿಜದಲ್ಲಿ ನಾವು ಬಸವಭಕ್ತರೇ ನಮ್ಮಲ್ಲಿ ಆ ಸಂಸ್ಕೃತಿ ಇದೆಯೇ ?

-ಮೇನಕಾ ಪಾಟೀಲ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here