ಭವಿಷ್ಯ ರೂಪಿಸುವಲ್ಲಿ ಸಂಸ್ಕಾರ ಮುಖ್ಯ; ಜಿಲ್ಲಾ ಕಸಾಪ ದಿಂದ ಪಿಯುಸಿ ಅಂಕವೀರರಿಗೆ ಅಭಿನಂದನೆ

0
86

ಕಲಬುರಗಿ: ಕನ್ನಡ ನಾಡು-ನುಡಿ ಬಗ್ಗೆ ಅಭಿಮಾನದ ಮೂಲಕ ಭವಿಷ್ಯದ ಜೀವನ ಕಟ್ಟಿಕೊಳ್ಳಲು ಸಂಸ್ಕಾರಯುತ ಶಿಕ್ಷಣ ಮುಖ್ಯವಾಗಿದೆ ಎಂದು ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಏರ್ಪಡಿಸಿದ ಪದವಿಪೂರ್ವ ಪರೀಕ್ಷೆಯ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂ¨sದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯೆ ಕಲಿಸಿದ ತಂದೆ-ತಾಯಿ ಹಾಗೂ ಗುರು ಹಿರಿಯರಿಗೆ ಗೌರವಿಸುವ ಪರಂಪರೆ ಮಕ್ಕಳು ಕಲಿಯಬೇಕು. ಅಂಥ ಮನವೀಯ ಅಂತ:ಕರಣ ಬೆಳೆಸುವ ಹಾಗೂ ಜೀವನ ಮೌಲ್ಯ ಬೋಧಿಸುವ ಶಿಕ್ಷಣ ಕಲಿಯಬೇಕು. ತಂದೆ ತಾಯಿಯವರನ್ನು ಅನಾಥರನ್ನಾಗಿ ಮಾಡದೇ ಅವರನ್ನು ಆರೋಗ್ಯದಿಂದ ನೋಡಿಕೊಳ್ಳುವ ಸಂಸ್ಕøತಿ ಬೇಕಾಗಿದೆ. ಉನ್ನತ ಶಿಕ್ಷಣದ ಜತೆಗೆ ಮೌಲ್ಯಯುತ ಸಂಸ್ಕಾರ ಬೇಕು. ಆ ನಂತರದಲ್ಲಿ ಸಮಾಜ ಸೇವೆ ಕೈಗೊಳ್ಳಬೇಕ ಎಂದು ಹೇಳಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ತಪಸ್ಸು ಮಾಡಿದಂತಾಗಿದೆ. ವಿದ್ಯಾರ್ಥಿಗಳಾದವರು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಪ್ರಯತ್ನ ಮಾತ್ರ ನಿರಂತರವಾಗಿರಬೇಕು. ಆ ಪ್ರಯತ್ನ ಇದ್ದಾಗ ಮಾತ್ರ ನಾವು ಮುನ್ನಡೆ ಸಾಗಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ನಿರಂತರವಾದ ಪ್ರಯತ್ನವೇ ನಮ್ಮ ಯಶಸ್ಸಿನ ಮೂಲ ಮೆಟ್ಟಿಲಾಗಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಪರಿಷತ್ತು ಇಂಥದೊಂದು ಕಾರ್ಯಕ್ರಮ ಅಯೋಜಿಸಲಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಕೊಡುವ ಜತೆಗೆ ವಿದ್ಯಾರ್ಥಿಗಳನ್ನೂ ಸಹ ಸಾಹಿತ್ಯ ಕ್ಷೇತ್ರದ ಕಡೆ ಮುಖ ಮಾಡಿಸುವ ಪ್ರಯತ್ನ ಪರಿಷತ್ತು ನಿರಂತರವಾಗಿ ಮಾಡುತ್ತಿದೆ ಎಂದರು.

ಮಹಿಳಾ ಪತಂಜಲಿ ಯೋಗ ಸಮಿತಿಯ ಸಂವಾದ ಪ್ರಭಾರಿ ಸುಮಂಗಲಾ ಚಕ್ರವರ್ತಿ, ಎಕೆಆರ್ ದೇವಿ ಪಿಯು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಪ್ರಮುಖರಾದ ರೇವಣಸಿದ್ದಪ್ಪ ಜೀವಣಗಿ, ಮುಡುಬಿ ಗುಂಡೇರಾವ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ರಮೇಶ ಬಡಿಗೇರ, ಮಲ್ಲಿನಾಥ ಸಂಗಶೆಟ್ಟಿ, ಎಚ್ ಎಸ್ ಬರಗಾಲಿ, ಎಂ ಎನ್ ಸುಗಂಧಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಸುರೇಶ ದೇಶಪಾಂಡೆ, ಸಂತೋಷ ಕುಡಳ್ಳಿ, ಗುರುಬಸಪ್ಪ ಸಜ್ಜನಶೆಟ್ಟಿ, ಗುಂಡಪ್ಪ ಕಾಟೇಕರ್, ಪ್ರಭುಲಿಂU Àಮೂಲಗೆ, ವಿನೋದಕುಮಾರ ಜೇನವೇರಿ, ಸ್ವಾತಿ ಬೆಳಕೇರಿ, ಶಿವಶರಣ ಹಡಪದ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕನ್ನಡ ಭಾಷೆ ನಮ್ಮ ನಾಡಿನ ಆಡಳಿತ ಭಾಷೆ, ನಮ್ಮ ನಾಡಿನ ಎಲ್ಲ ಸಂಸ್ಕøತಿಗಳು ಇದರಲ್ಲಿ ಅಡಗವಾಗಿವೆ. ಆದ್ದರಿಂದ ಕನ್ನಡದ ಬಗ್ಗೆ ವಿದ್ಯಾರ್ಥಿಗಳು ಅಭಿಮಾನ ಬೆಳೆಸಿಕೊಳ್ಳಬೇಕು.ಪೋಷಕರು ಕೂಡ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸಬೇಕು. ಕನ್ನಡ ನಮ್ಮ ಉಸಿರಾಗಬೇಕು. – ವಿಜಯಕುಮಾರ ತೇಗಲತಿಪ್ಪಿ, ಅಧ್ಯಕ್ಷರು, ಕಸಾಪ ಜಿಲ್ಲಾಧ್ಯಕ್ಷ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here