ವಾಡಿ: ಬಿಜೆಪಿ ನೂತನ ಕಛೇರಿ ಉದ್ಘಾಟನೆ

0
55

ವಾಡಿ: ಪಟ್ಟಣದಲ್ಲಿ ನೂತನ ಬಿಜೆಪಿ ಕಚೇರಿಯನ್ನು ಭಾರತ ಮಾತೆಗೆ ಮತ್ತು ಶ್ಯಾಮ್ ಪ್ರಸಾರ ಮುಖರ್ಜಿ,ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸೇರಿದಂತೆ ಮಾಜಿ ಶಾಸಕರಾದ ವಾಲ್ಮೀಕ ನಾಯಕರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಉದ್ಘಾಟನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಪಕ್ಷದ ಹಿರಿಯ ಮುಖಂಡ ಬಸವರಾಜ ಪಂಚಾಳ ಅವರು ಕೇಂದ್ರದ ಬಿಜೆಪಿ ಸರ್ಕಾರದ ಕೊಡುಗೆಗಳನ್ನು ಪ್ರತಿ ಮನೆ ಮನಕ್ಕೆ ತಿಳಿಸಿ ಮೂರನೇ ಬಾರಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ಬರಬೇಕಾಗಿದೆ ಎಂದರು.
ಕ್ಷೇತ್ರದಲ್ಲಿ ಬಿಜೆಪಿ ಪಕ್ಷನ್ನು ಬಲಪಡಿಸಬೇಕು, ಬೂತ್ ಸಭೆ, ಶಕ್ತಿ ಕೇಂದ್ರದ ಸಭೆಗಳಿಗಾಗಿ ಈ ಕಚೇರಿಯನ್ನು ಸದುಪಯೋಗ ಮಾಡಿಕೊಂಡು ಚುನಾವಣೆಯಲ್ಲಿನ ಗೆಲುವು ವಿಗೆ ಶ್ರಮಿಸಿ,ನಮ್ಮ ನೆಚ್ಚಿನ ವಾಲ್ಮೀಕ ನಾಯಕರು ಬಯಸಿದಂತೆ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠ ವಾಗಿದೆ ಎಂದು ನಾವು ಸಾಬೀತು ಮಾಡಬೇಕು ಎಂದು ಹೇಳಿದರು.

Contact Your\'s Advertisement; 9902492681

ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ
ಇಂದು ಪವಿತ್ರ ಹನುಮ ಜಯಂತಿ ಯಂದು ಕಛೇರಿ ಉದ್ಘಾಟನೆ ಯೊಂದಿಗೆ ದೇಶದ ಭವಿಷ್ಯ ಕ್ಕಾಗಿ,ನಮ್ಮ ಹಿಂದುತ್ವದ ಹಿರಿಮೆಗಾಗಿ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪ ಮಾಡಬೇಕಾಗಿದೆ ಎಂದರು.

ಉಮೇಶ್ ಜಾಧವ ಅವರನ್ನು ಅತೀ ಹೆಚ್ಚಿನ ಮತಗಳಿಂದ
ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಬಹು ದಿನಗಳಿಂದ ನಮಗೆ ಪಕ್ಷದ ಕಛೇರಿಯ ಅವಶ್ಯಕತೆ ಇತ್ತು,ಅದನ್ನು ನಮ್ಮ ಯುವ ಮುಖಂಡರಾದ ವಿಠಲ ವಾಲ್ಮೀಕ ನಾಯಕ ಅವರಿಂದ ನಮಗೆ ಈಗ ಈಡೇರಿದೆ, ವಾಲ್ಮೀಕ ನಾಯಕರಂತೆ ವಿಠಲ‌ ನಾಯಕ ಅವರು ಮುಂದೆ ಕ್ಷೇತ್ರ ಬಲಪಡಿಸುವ ಮುಖಾಂತರ ಕಮಲ ಅರಳಿಸಲಿ ಎಂದು ನಮ್ಮ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ ಅಗ್ರವಾಲ ಅವರು ಚಿತ್ತಾಪುರದ ಪಕ್ಷದ ಸಭೆಯಲ್ಲಿ ಬಹಿರಂಗವಾಗಿ ಹೇಳಿದ್ದಾರೆ.
ಆದ್ದರಿಂದ ನಮಗೆ ಪಕ್ಷ ಸಂಘಟನೆ ಗೆ ಮತ್ತಷ್ಟು ಸ್ಪೂರ್ತಿ ಸಿಕ್ಕಿದೆ.ಅದರಂತೆ ನಾವು ನಮ್ಮ ವಾಲ್ಮೀಕ ನಾಯಕರ ಆಶಯದಂತೆ ಪಕ್ಷ ಸಂಘಟನೆಯಲ್ಲಿ ತೊಡಗಬೇಕಾಗಿದೆ.
ಹಿರಿಯರ ಹೋರಾಟ, ಪರಿಶ್ರಮದ ಫಲವಾಗಿ ಬಿಜೆಪಿ ಜನಸಾಮಾನ್ಯರ ಮನದಲ್ಲಿ ಮಿಡಿಯುತ್ತಿದೆ.

1984ರಲ್ಲಿ ಎರಡು ಲೋಕಸಭಾ ಸ್ಥಾನ ಪಡೆದಿದ್ದ ಪಕ್ಷ ಈಗ 400ಕ್ಕಿಂತಲೂ ಅಧಿಕ ಸ್ಥಾನ ಪಡೆಯುತ್ತ ಸಾಗುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಆ ನಿಟ್ಟಿನಲ್ಲಿ ನಾವು ಬೂತ್ ಮಟ್ಟದಲ್ಲಿ ಪ್ರತಿ ಮನೆಗೆ ನಾವೇ ಮೋದಿ ಎಂದು ಹೇಳಿ ಪ್ರಚಾರ ಮಾಡಿ ಮೋದಿ ಅವರಿಗೆ ಮೂರನೇ ಬಾರಿ ಪ್ರಧಾನಿ ಮಾಡಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರ್ಚಕ ಮಂಗಳ ಮೂರ್ತಿ ಮುಖಂಡರಾದ ವಿಠಲ ವಾಲ್ಮೀಕ ನಾಯಕ, ಬಸವರಾಜ ಪಂಚಾಳ,ಸಿದ್ದಣ್ಣ ಕಲ್ಲಶೆಟ್ಟಿ,ಭೀಮರಾವ ದೊರೆ ಅವರನ್ನು ಅಭಿನಂದಿಸಲಾಯಿತು.ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಗಿರಿಮಲ್ಲಪ್ಪ ಕಟ್ಟೀಮನಿ, ಶರಣಗೌಡ ಚಾಮನೂರ,ಭೀಮಶಾ ಜೀರೊಳ್ಳಿ ,ಆಶೋಕ ಪವಾರ,ಕಿಶನ ನಾಯಕ, ಆನಂದರಾವ ಡೌವಳೆ, ತುಕಾರಾಮ ರಾಠೋಡ, ಸ್ಯಾಮಸನ್ ರಡ್ಡಿ,ಸತೀಶ ನಾಯಕ,ರವೀಂದ್ರ ನಾಯಕ,
ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,ದತ್ತಾ ಖೈರೆ,ಅಂಬದಾಸ ಜಾಧವ, ಆನಂದ ಇಂಗಳಗಿ,ಪ್ರಕಾಶ ಪುಜಾರಿ,ಹೀರಾ ನಾಯಕ,ಅಯ್ಯಣ್ಣ ದಂಡೋತಿ,ಸತೀಶ ಸಾವಳಗಿ, ಅಶೋಕ ರಾಠೋಡ,ಮಹೇಂದ್ರ ಕುಮಾರ,ಸಿದ್ದೇಶ್ವರ ಚೊಪಡೆ,ಬಸವರಾಜ ಪಗಡಿಕರ,ಚಂದ್ರಶೇಖರ ಬೆಣ್ಣೂರ, ಮಲ್ಲಿಕಾರ್ಜುನ ಸಾತಖೇಡ,ಶಿವಕುಮಾರ ಚವ್ಹಾಣ,ವಿಶ್ವರಾಧ್ಯ ತಳವಾರ,ಸಂಜಯ ಪವಾರ,ರಮೇಶ ರಾಠೋಡ,ಮಹಮ್ಮದ್ ಇರ್ಫಾನ್,ಸಚಿನ್ ಡೌವಳೆ, ರವಿ ರಾಠೋಡ ಸೇರಿದಂತೆ ನೂರಾರು ಜನ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here