ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ನಾಡಿನ ಹಿರಿಮೆ ಹೆಚ್ಚಿಸಿ

0
40

ಕಲಬುರಗಿ : ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಲಬುರಗಿ ತಾಲ್ಲೂಕು ಕಸಾಪದಿಂದ ಸನ್ಮಾನ ಕಾರ್ಯಕ್ರಮ ಜರುಗಿತು.

ಈ ವೇಳೆ ತಾಲೂಕ ಕ ಸಾ ಪ ಅಧ್ಯಕ್ಷರಾದ ಗುರುಬಸಪ್ಪ ಎಸ್ಸ.ಜ್ಜನಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಕನ್ನಡದಲ್ಲಿ ಇನ್ನು ಅತಿ ಹೆಚ್ಚು ಅಂಕ ಪಡೆಯುವುದರ ಮೂಲಕ ಕನ್ನಡ, ಭಾಷೆ, ಉಳಿಸುವುದರೊಂದಿಗೆ ನಾಡಿನ ಹಿರಿಮೆ ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

Contact Your\'s Advertisement; 9902492681

ತಮಗೆ ಯಾವುದೇ ರೀತಿಯ ಸಾಹಕಾರ ಬೇಕಾದರೆ ವಿದ್ಯಾರ್ಥಿಗಳಿಗೆ ಕ ಸಾ ಪ ಮತ್ತು ಸಂಘ ಇತರ ಸಂಘ ಸಂಸ್ಥಗಳ ಮೂಲಕ ಸಹಾಯ ಹಸ್ತ ನೀಡಲಾಗುವುದು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ತಾಲೂಕು ಮತ್ತು ಶಕುಂತಲಾ ಪಾಟೀಲ್ ಪದವಿ ಪೂರ್ವ ಕಾಲೇಜು ಕಲಬುರಗಿ ಇವರುಗಳ ಸಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ ದೇವೇಂದ್ರಪ್ಪ ಕಪನೂರ್ ಸದಸ್ಯರು. ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು ಇವರು ಮುಂದುವರೆದು ಮಾತನಾಡುತ್ತಾ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

ಇಂದಿನ ಯುಗದಲ್ಲಿ ಪೈಪೋಟಿ ಶಿಕ್ಷಣವು ಕೂಡ ಹೊರತಾಗಿಲ್ಲ ಶಿಕ್ಷಣ ಪಡೆದ ವಿದ್ಯಾರ್ಥಿಯು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ ಹಿಂದಿನ ಶಿಕ್ಷಣ ಹೇಗಿದೆ ಎಂದರೆ ನಾವು ಶಾಲೆಗೆ ಹೋಗುವ ಕಾಲದಲ್ಲಿ ಸೆಕೆಂಡ್ ಕ್ಲಾಸ್ ಪಾಸ್‌ದರೆ ಸಿಹಿ ಹಂಚುತ್ತಿದ್ದೆವು. ನಮ್ಮೆಲ್ಲ ಗೆಳೆಯರ ಬಳಗವಲ್ಲದೆ ನಮ್ಮೆಲ್ಲ ಸುತ್ತಮುತ್ತಲಿನ ಬಡಾವಣೆಯ ಜನರು ಕೂಡ ಹರ್ಷ ವ್ಯಕ್ತಪಡಿಸುತ್ತಿದ್ದರು.

ಹಳ್ಳಿಯ ಭಾಷೆಯಲ್ಲಿ ಹೇಳಬೇಕಾದರೆ ಅಂದಿನ ಕಾಲದ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕ ಪಡೆಯಬೇಕಾದರೆ ಮಣ್ಣಿನಿಂದ ಬಂಗಾರ ತೆಗೆದಂತೆ ಆಗುತ್ತಿತ್ತು. ಅಲ್ಲೊಬ್ಬರು ಇನ್ನೊಬ್ಬರು ಟಾಪರ್ಸ್. ಫಸ್ಟ್ ರ‍್ಯಾಂಕ್ ಸೆಕೆಂಡ್ ರ‍್ಯಾಂಕ್ ಬರ್ತಕಂತ ವಿದ್ಯಾರ್ಥಿಗಳನ್ನು ನಾವು ನೋಡುತ್ತಿದ್ದೆವು ಆದರೆ ಇಂದಿನ ಯುಗದಲ್ಲಿ ಚಿನ್ನದಲ್ಲಿ ಚಿನ್ನ ಸೋಸಿ ಬಂಗಾರ ತೆಗೆದಂತೆ ಶಿಕ್ಷಣ ಅಷ್ಟು ಮುಂದುವರೆದಿದೆ ಇಂದಿನ ವಿದ್ಯಾರ್ಥಿಗಳು ಕೂಡ ೮೫ರಿಂದ ೯೯ ರಿಂದ ನೂರರವರೆಗೆ ಅಂಕ ತೆಗೆಯುವ ಒಂದು ಸಾಮರ್ಥ್ಯ ಹೊಂದಿದ್ದಾರೆ ಶಿಕ್ಷಣದಲ್ಲಿ ಅದಕ್ಕಾಗಿ ತಾವು ಹೆಚ್ಚಿನ ವಿದ್ಯಾಭ್ಯಾಸ ಕಲಿತು ಶಿಕ್ಷಣ ಕ್ಷೇತ್ರದ ವಿವಿಧ ಕೋರ್ಸ್ಗಳನ್ನು ಪಡೆಯುವುದರ ಮೂಲಕ ಮತ್ತು ಯುಪಿಎಸ್ಸಿ ಅಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ತಾವು ದೇಶದ ಉನ್ನತ ಮಟ್ಟದ ಹುದ್ದೆಗಳಲ್ಲಿ ತಾವು ರಾರಾಜಿಸಬೇಕೆಂಬ ಬಯಕೆ ನಮ್ಮೆಲ್ಲರದಾಗಿದೆ ಅದಕ್ಕಾಗಿ ತಾವು ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ಕನ್ನಡ ಉಳಿಸಿ ಬೆಳೆಸುವ ಒಂದು ಪ್ರಯತ್ನ ತಾವು ಮಾಡಬೇಕೆಂದು ಈ ವೇದಿಕೆ ಮೂಲಕ ತಮ್ಮಲ್ಲಿ ಮನವಿ ಮಾಡಿದ್ದರು.

ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸೇವಂತ ಪಿ ಚೌಹಾಣ್ ಅವರು ವಿದ್ಯಾರ್ಥಿನಿಯರು ಶಿಕ್ಷಣವಲ್ಲದೆ ಬೇರೆ ಬೇರೆ ಇನ್ನಿತರ ಕ್ಷೇತ್ರಗಳಲ್ಲಿಯೂ ಕೂಡ ಪುರುಷರಿಗಿಂತ ಮಹಿಳಾ ವಿದ್ಯಾರ್ಥಿಗಳೇ ನಮಗೆ ಸಂತೋಷವಾಗಿದೆ ಅದೇ ರೀತಿ ಪುರುಷ ವಿದ್ಯಾರ್ಥಿಗಳು ಕೂಡ ಶಿಕ್ಷಣ ಕ್ಷೇತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಪೈಪೋಟಿ ಮಾಡಿ ಮುಂದೆ ಬರಬೇಕೆಂದು ನನ್ನ ಆಶಯವಾಗಿದೆ ಆದ್ದರಿಂದ ತಾವು ಶಿಕ್ಷಣ ಪಡೆದು ನಿಮ್ಮ ತಂದೆ ತಾಯಿಗಳ ಆಶೀರ್ವಾದ ಪಡೆದು ಮತ್ತು ಗುರು ಹಿರಿಯರಿಗೆ ಗೌರವ ನೀಡುವುದರೊಂದಿಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ತಾವು ಬೆಳೆದು ಈ ದೇಶದ ಉನ್ನತ ಮುಟ್ಟದ ಹುದ್ದೆಗಳಲ್ಲಿ ತಾವು ಕಾಣಿಸಬೇಕು ಎಂದರು.

ಶಕುಂತಲಾ ಪದವಿಪೂರ್ವ ಕಾಲೇಜು ಕಲಬುರಗಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಿದಂಬರಾವ ಪಾಟೀಲ್ ಅವರು ಮಾತನಾಡುತ್ತಾ ನಾವು ಶಿಕ್ಷಣದಲ್ಲಿ ಅಂದಿನ ಕಾಲದಲ್ಲಿ ಬಹಳ ಹಿಂದೆ ಇದ್ದಿದ್ದೇವೇ ಇಂದಿನ ಶಿಕ್ಷಣದ ಪೈಪೋಟಿ ಮತ್ತು ವಿದ್ಯಾರ್ಥಿಗಳ ಜಾಣ ಚಾಣಕ್ಷತೆ ಮತ್ತು ಓದು ಬರಹಗಳನ್ನು ನೋಡಿದರೆ ಅವರ ಪರಿಶ್ರಮ ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ ಅದಕ್ಕೆ ನನಗೆ ವಿದ್ಯಾರ್ಥಿಗಳ ಹೆಚ್ಚಿಗೆ ಅಂಕ ಪಡೆದಿರುವುದರಿಂದ ನನಗೆ ಅತಿ ಸಂತೋಷವಾಗುತ್ತದೆ ಹಾಗೂ ತಮಗೆ ಶಿಕ್ಷಣದಲ್ಲಿ ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪೈಪೋಟಿ ಮಾಡಿದರೆ ತಮಗೆ ನಮ್ಮ ಸಂಸ್ಥೆಯ ವತಿಯಿಂದ ಸಹಾಯ ಸಹಕಾರ ನೀಡಲಾಗುವುದು ಎಂದರು. ವೇದಿಕೆ ಮೇಲೆ ಅಕಾಡೆಮಿಕ ನಿರ್ದೇಶಕರಾದ ಡಾ. ಮನೋಜಕುಮಾರ ಬುರುಬುರೆ ಅವರು ಮಾತನಾಡಿದರು.

ಕಿರಣ್ ಕುಮಾರ್ ಗಾದಗಿ, ಡಾ. ಪ್ರೇಮ್ ಸಿಂಗ್ ಚೌಹಾಣ, ಸಂಘಟನೆ ಕಾರ್ಯದರ್ಶಿಗಳಾದ ಶರಣು ಹಾಗರಗುಂಡಗಿ, ಸಹ ಕಾರ್ಯದರ್ಶಿಯಾದ ಪ್ರಭವ ಪಟ್ಟಣಕರ, ಹಾಗೂ ವೀರಣ್ಣ ಸಿನ್ನೂರ, ಆಕಾಶ ಮರಪಳ್ಳಿ, ಸಿದ್ದರಾಮ ಇನ್ನು ಇತರರು ಇದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ನಿರೂಪಣೆ ಗೌರವ ಕಾರ್ಯದರ್ಶಿ ವಿಶಾಲಕ್ಷಿ ಮಾಯಣ್ಣವರ  ವಂದನಾರ್ಪಣೆಯನ್ನು ಕೋಶ್ಯಾಧ್ಯಕ್ಷರಾದ ಕುಪೇಂದ್ರ ಬರಗಾಲಿ ಅವರು ಗೈದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here