ಬುದ್ಧರ ಸಂದೇಶವನ್ನು ಎಲ್ಲರು ಬದುಕಿನಲ್ಲಿ ಅಳವಡಿಸಿಕೊಳ್ಳಿ

0
7

ಸುರಪುರ:ಮಹಾತ್ಮ ಗೌತಮ್ ಬುದ್ಧರ ಸಂದೇಶವನ್ನು ಎಲ್ಲರು ಬದುಕಿನಲ್ಲಿ ಅಳವಡಿಸಿಕೊಂಡು ಬದುಕು ಹಸನಾಗಿಸಿಕೊಳ್ಳಬೇಕು ಎಂದು ನಾಗರತ್ನ ಬಂತೇಜಿ ತಿಳಿಸಿದರು.

ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಗೌತಮ್ ಬುದ್ಧರ 2568ನೇ ಬುದ್ಧ ಜಯಂತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ,ಪ್ರತಿಯೊಬ್ಬರಿಗೂ ಧ್ಯಾನ ಮುಖ್ಯವಾಗಿದೆ. ಮಹಾತ್ಮ ಗೌತಮ್ ಬುದ್ಧರು ಧಮ್ಮದ ಮೂಲಕ ಎಲ್ಲರಿಗೂ ಶಾಂತಿ ಸಂದೇಶ ನೀಡಿದ್ದಾರೆ,ಜಗತ್ತಿನ ಎಲ್ಲ ರಾಷ್ಟ್ರಗಳು ಇಂದು ಮಹಾತ್ಮ ಗೌತಮ್ ಬುದ್ಧರನ್ನು ಸ್ಮರಿಸುತ್ತಾರೆ,ಅಲ್ಲದೆ ಬೌದ್ಧ ಧರ್ಮಿಯರಾದ ಎಲ್ಲರು ಬುದ್ಧನ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಆ ಕುಟುಂಬದಲ್ಲಿ ಸಂತೋಷ ಇರಲಿದೆ ಎಂದರು.

Contact Your\'s Advertisement; 9902492681

2568 ನೇ ವೈಶಾಖ ಮಾಸ ಹುಣ್ಣಿಮೆ ಬುದ್ಧ ಪೂರ್ಣಿಮೆ ಸಿದ್ಧಾರ್ಥ ಬುದ್ಧನ ಜಯಂತ್ಯೋತ್ಸವದ ಸಂದರ್ಭದಲ್ಲಿ ಬೌದ್ಧ ಅನುಯಾಯಿಗಳ ಕುಟುಂಬಗಳ ಸಮ್ಮುಖದಲ್ಲಿ ಟ್ರಸ್ಟ್ ವತಿಯಿಂದ ಬುದ್ದ ಪೂರ್ಣಿಮ ಪ್ರಯುಕ್ತ ವಿಶೇಷವಾಗಿ ನೇರವೆರಿಸಲಾಯಿತು.

ಇದೇ ಸಂದರ್ಭದಲ್ಲಿ ಬೌದ್ಧ ಉಪಾಸಕ ಆದಪ್ಪ ಹೊಸ್ಮನಿ,ತಕ್ಷಶಿಲಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಂಬಿಕಾ ಡಾ.ಮುಕುಂದ ಯಾನಗುಂಟಿ,ಡಾ.ಪ್ರಕಾಶ ಬಡಿಗೇರ ಮಾತನಾಡಿದರು.ಮಾಳಪ್ಪ ಕಿರದಳ್ಳಿ ಕುಟುಂಬ ದಿಂದ ಭೋಜನದಾನ ನೆರವೇರಿಸಿದರು.

ಕಾರ್ಯಾಕ್ರಮದಲ್ಲಿ ಬಾಗವಹಿಸಿದವರು ಮಾನಪ್ಪ ಕರಡಕಲ್, ಭೀಮರಾಯ ಸಿಂದಗೇರಿ, ವೆಂಕಟೇಶ್ವರ್ ಸುರಪುರ, ಡಾ.ಪ್ರಕಾಶ ಬಡಿಗೇರ ಸಿಂದಗಿ, ಹಣಮಂತ ಬಾಂಬೆಕರ್, ಹಣಮಂತ ಭದ್ರಾವತಿ, ಶಿವಶಂಕರ್ ಹೊಸಮನಿ, ಮಂಜು ಹೊಸಮನಿ, ಚಂದಪ್ಪ ಪಂಚಮ್ ಚನ್ನಬಸವ ಚಲವಾದಿ, ಶರಣು ತಳವಾರಗೇರಾ, ಪರಶು ಹಸನಾಪುರ, ಶರಣು ಹಸನಾಪುರ, ಪ್ರಕಾಶ ಮುಷ್ಠಳ್ಳಿ, ನಾಗರಾಜ್ ಬೇವಿನಾಳ, ಅವಿನಾಶ ಹೊಸಮನಿ, ಬಸವರಾಜ್ ದೊಡ್ಡಮನಿ, ಹಣಮತ ತೇಲ್ಕರ್, ಮಂಜುಳಾ ಸುರಪುರ, ಶಿಲ್ಪಾ ಹುಲಿಮನಿ, ಭಿಮಬಾಯಿ ಕಲ್ಲದೇವನಹಳ್ಳಿ,ಬಸಮ್ಮ ಹುಲಿಮನಿ, ಶಿವಮೊಗ್ಗೆಮ್ಮ ಹೊಸಮನಿ, ಸುನಿತಾ ಕಿರದಳ್ಳಿ, ನಾಗರತ್ನಾ ಹೊಸಮನಿ, ಶಿವಲೀಲಾ ದೇವಿಕೆರಿ, ಕವಿತಾ ಬಡಿಗೇರ್, ಯಲ್ಲಮ್ಮ ತೇಲ್ಕರ್, ಇತರೇ ಮಹಿಳೆಯರು ಮಕ್ಕಳು ಅನೇಕರು ಬಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here