ಹೈಜೀನ್ ದಿನ: ಪೀರಿಯಡ್ ಸ್ನೇಹಿ ಗ್ರಾಮ ಅಭಿಯಾನಕ್ಕೆ ಚಾಲನೆ

0
9

ಸುರಪುರ : ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ವತಿಯಿಂದ ಮಾನಸಿಕ ಆರೋಗ್ಯ-ಹೈಜೀನ್ (ಮುಟ್ಟಿನ ದಿನ) ದಿನಾಚರಣೆ ಅಂಗವಾಗಿ ಪೀರಿಯಡ್ ಸ್ನೇಹಿ ಗ್ರಾಮ ಅಭಿಯಾನಕ್ಕೆ ಟಿಎಚ್‍ಒ ಡಾ.ಆರ್.ವಿ.ನಾಯಕ ಚಾಲನೆ ನೀಡಿದರು.

ನಂತರ ಕೆಎಚ್‍ಪಿಟಿಯ ಅಧಿಕಾರಿಗಳು ಮಾತನಾಡಿ, ಮುಟ್ಟು ಎನ್ನುವುದು ಮಹಿಳೆಯರಿಗೆ ಪ್ರತಿ ತಿಂಗಳು ಬರುವ ನೈಸರ್ಗಿಕ ಪ್ರಕ್ರಿಯೆ ಇದು ಸಹಜ ಪ್ರಕ್ರಿಯೆಯಾದರೂ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ.28 ರಂದು ಮುಟ್ಟಿನ ನೈರ್ಮಲ್ಯ ದಿನ ಆಚರಿಸಲಾಗುತ್ತದೆ ಎಂದರು.

Contact Your\'s Advertisement; 9902492681

ಮುಟ್ಟಿನ ಆರೋಗ್ಯದ ಮಹತ್ವ, ಮುಟ್ಟಿನ ದಿನಗಳಲ್ಲಿ ಕಾರಣವಾಗುವ ಸಮಸ್ಯೆ, ವಿಚಾರಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಟ್ಟಿನ ನೈರ್ಮಲ್ಯ ದಿನ ಆಚರಿಸಲಾಗುತ್ತದೆ. ಈ ವರ್ಷದ ಥೀಮ್ ಪೀರಿಯಡ್ ಸ್ನೇಹಿ ವಿಶ್ವವಾಗಿದೆ. ಕರ್ನಾಟಕ ಹೆಲ್ತ್ ಪ್ರೊಮೋಷನ್ ಟ್ರಸ್ ಪೀರಿಯಡ್ ಸ್ನೇಹಿ ಗ್ರಾಮ ಮಾಡುವ ಹೆಮ್ಮೆಯನ್ನು ಹೊತ್ತಿದೆ ಎಂದರು.

ಪೀರಿಯಡ್ ಸ್ನೇಹಿ ಗ್ರಾಮ ಅಭಿಯಾನವನ್ನು ಸುರಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯ ಹಳ್ಳಿಗಳಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ. ಅಭಿಯಾನಕ್ಕೆ ಎಲ್ಲರು ಸಹಕರಿಸುತ್ತಿದ್ದಾರೆ ಎಂದರು. ಅಭಿಯಾನದಲ್ಲಿ ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆಯರು, ಕೆಎಚ್‍ಪಿಡಿ ಸಿಬ್ಬಂದಿಗಳು, ಪೋಷಕರು ಸೇರಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here