ಕಳಪೆ ಬೀಜ ಮಾರಾಟವಾಗದಂತೆ ಅಧಿಕಾರಿಗಳು ಎಚ್ಚರವಹಿಸಿ

0
7

ಸುರಪುರ: ಕ್ಷೇತ್ರದಲ್ಲಿ ಎಲ್ಲಿಯೂ ಕೂಡಾ ಕಳಪೆ ಮಟ್ಟದ ಬೀಜ ವಿತರಿಸದಂತೆ ಎಚ್ಚರ ವಹಿಸಬೇಕು ಒಂದುವೇಳೆ ಕಳಪೆ ಮಟ್ಟದ ಬೀಜ ವಿತರಿಸುತ್ತಿರುವುದು ಕಂಡುಬಂದಲ್ಲಿ ಅಂತವರಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ರೈತರ ಹಿತಕಾಯಬೇಕು ಎಂದು ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲ ನಾಯಕ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈಗಾಗಲೆ ಕ್ಷೇತ್ರದಲ್ಲಿ ಮುಂಗಾರು ಮಳೆಯು ಆರಂಭವಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ, ಕಳೆದಬಾರಿ ಭೀಕರ ಬರಗಾಲದಿಂದ ರೈತರು ತತ್ತರಿಸಿ ಸಾಲದ ಸುಳಿಯಲ್ಲಿ ಸಿಲುಕಿ ಕಷ್ಟವನ್ನು ಅನುಭವಿಸಿದ್ದಾರೆ ಆದರೆ ಈ ಬಾರಿಯು ಮುಂಗಾರು ಸರಿಯಾದ ಸಮಯಕ್ಕೆ ಆರಂಭವಾಗುವ ವಿಶ್ವಾಸವು ರೈತರಲ್ಲಿ ಮೂಡಿದ್ದು ಕ್ಷೇತ್ರದಲ್ಲಿ ಮಳೆಯು ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ ಈ ಹಿನ್ನಲೆಯಲ್ಲಿ ಅಧಿಕಾರಿಗಳು ಬಿತ್ತನೆಗೆ ಬೇಕಾದ ಬೀಜ, ರಸ ಗೊಬ್ಬರದ ದಾಸ್ತಾನುಗಳುನ್ನು ಶೇಖರಸಿಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಕ್ಷೇತ್ರದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಮನೆಗಳು ಬಿದ್ದಿವೆ, ಜಾನುವರಾಗಳಿಗೆ ಹಾನಿಯಾಗಿದ್ದು ತಕ್ಷಣವೆ ಅಧಿಕಾರಿಗಳು ಎಚ್ಚರವಹಿಸಿ ಮನೆಗಳು ಬಿದ್ದರುವುದನ್ನು ಸರ್ವೇ ಕಾರ್ಯ ಮುಗಿಸಿ ಸರ್ಕಾರಕ್ಕೆ ವರದಿಸಲ್ಲಿಸಿ ಪರಿಹಾರ ಒದಗಿಸಲಿ ಕ್ರಮವಹಿಸಬೇಕು. ಅಲಲ್ಲಿ ವಿದ್ಯುತ್ ವತ್ಯಯವಾಗುತ್ತಿದ್ದು ಹಾಗೂ ಬಿರುಗಾಳಿಗೆ ಅನೇಕ ವಿದ್ಯುತ್ ಕಂಬಗಳು ಉರುಳಿ ವಿದ್ಯುತ್ ಪರಿವರ್ತಕಗಳು ಸುಟ್ಟು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಸಂಬಂಧಿಸಿದ ಜೇಸ್ಕಾಂ ಅಧಿಕಾರಿಗಳು ಸಮಸ್ಯಯನ್ನು ಪರಿಹರಿಸಿ ವಿದ್ಯುತ್ ವ್ಯತ್ಯಯ ಆಗದಂತೆ ಕ್ರಮವಹಿಸಲು ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here