ವಾಡಿ: ಉರಳಿದ ಬಿದ್ದ ಅಂಗನವಾಡಿ ಕೇಂದ್ರದ ಮೇಲ್ಚಾವಣಿ

0
13

ವಾಡಿ: ಪಟ್ಟಣದಲ್ಲಿ ಶುಕ್ರವಾರ ಸುರಿದ ಸತತ ಮಳೆಗೆ ವಾರ್ಡ್ 15 ಇಂದಿರಾ ಕಾಲೋನಿ ಬಡಾವಣೆಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಉರಳಿ ಬಿದ್ದ ಘಟನೆ ನಡೆದಿದೆ.

ಅದೃಷ್ಟವಶಾತ್ ಮಕ್ಕಳು ಸ್ಥಳದಲ್ಲಿ ಇರದ ಕಾರಣ ಸಂಭವಿಸಬಹುದಾಗಿದ್ದ ಪ್ರಾಣ ಹಾನಿಯಿಂದ ರಕ್ಷಣೆಯಾಗಿದ್ದಾರೆ.

Contact Your\'s Advertisement; 9902492681

ಅಂಗನವಾಡಿ ಕೇಂದ್ರದಲ್ಲಿ ಇಡಲಾಗಿದ್ದ ಪೌಷ್ಟಿಕ ಆಹಾರದ ದವಸ ಧಾನ್ಯಗಳು ಹಾಳಾಗಿದ್ದು, ಪಾತ್ರೆಗಳು ಮತ್ತು ಅಡುಗೆ ಸಾಮಾಗ್ರಿಗಳು ನಾಶವಾಗಿವೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಮಕ್ಕಳು ಕೇಂದ್ರದಲ್ಲಿ ಇರಲಿಲ್ಲ. ಪುಟಾಣಿಗಳು ಆಹಾರ ಸೇವಿಸಿ ಮನೆಗಳಿಗೆ ಮರಳಿದ ಬಳಿಕ ಈ ದುರಂತ ಸಂಭವಿಸಿದೆ. ಪದರುಗಲ್ಲಿನಿಂದ ಕೂಡಿದ್ದ ಅಂಗನವಾಡಿ ಬಾಡಿಗೆ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿದೆ.

ಸ್ವಂತ ಕಟ್ಟಡ ಲಭ್ಯವಿಲ್ಲದ ಕಾರಣ ಹಲವು ದಿನಗಳಿಂದ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದ್ದು, ತಮ್ಮ ಮಕ್ಕಳು ಇಷ್ಟು ದಿನ ಆತಂಕಕಾರಿ ಕೋಣೆಯಲ್ಲಿ ಪೌಷ್ಟಿಕ ಆಹಾರ ಸೇವಿಸುತ್ತಿದ್ದರು ಎಂಬುದು ಗೊತ್ತಾಗಿ ಪೋಷಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ದಿನನಿತ್ಯ ಅಂಗನವಾಡಿ ಕೇಂದ್ರಕ್ಕೆ ಬರುತ್ತಿದ್ದ ‌ಮಕ್ಕಳು ಈ ಅವಘಡದಿಂದ ತಪ್ಪಿಸಿಕೊಂಡಿದ್ದಾರೆ. ಬಾಡಿಗೆ ಕೇಂದ್ರದಲ್ಲಿ ನಡೆಯುತ್ತಿದ್ದ ಅಂಗನವಾಡಿ, ದುರಸ್ಥಿ ಹಂತದಲ್ಲೇ ಇದರು ಸಹ ಅಲ್ಲೇ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಸಿಡಿಪಿಒ ಭೇಟಿ: ಘಟಿಸಿದ ಈ ಅವಘಡದ ವಿಷಯ ಅರಿತು ಸ್ಥಳಕ್ಕೆ ಭೇಟಿ ನೀಡಿದ ಶಹಾಬಾದ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ (ಸಿಡಿಪಿಒ) ವಿಜಯಲಕ್ಷ್ಮೀ ಹೇರೂರ, ಅಂಗನವಾಡಿ ಕೇಂದ್ರವನ್ನು ಬೇರೆಡೆ ಸ್ಥಳಾಂತರ ಮಾಡುವ ಮೂಲಕ ಜವಾಬ್ದಾರಿ ಮೆರೆದಿದ್ದಾರೆ. ಅಲ್ಲದೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗ ಹುಡುಕುತ್ತಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here