ವಿಧ್ಯಾರ್ಥಿಗಳು ಸಮಾಜ ಮುಖಿ ಚಿಂತನೆಗಳು ಅಳವಡಿಸಿಕೊಳ್ಳಬೇಕು; ಪ್ರೊ.ಆರ್.ಕೆ.ಹುಡಗಿ

0
83

ಕಲಬುರಗಿ : ಸರಕಾರಿ ಮಹಾವಿದ್ಯಾಯ ಸ್ವಾಯತ್ತದಲ್ಲಿ ರಾಷ್ಟ್ರಿಯ ಸೇವಾ ಯೋಜನೆ (ಎನ್‌ಎಸ್‌ಎಸ್) ೨೦೨೩-೨೪ನೇ ಸಾಲೀನ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಗತಿಪರ ಚಿಂತಕರಾದ ಪ್ರೋ.ಆರ್.ಕೆ.ಹುಡಗಿ ಅವರು ಮಾತನಾಡಿ ಇಂದಿನ ದಿನಗಳಲ್ಲಿ ಜಗತ್ತಿನಲ್ಲಿ ಮಾನವಿಯತೆಗೆ ಬರ ಬಂದಿದ್ದು ಇನ್ನೋಬ್ಬರ ಸಂಕಷ್ಟದಲ್ಲಿ ಭಾಗಿಯಾಗುವ ಮನೋಭಾವ ಕಡಿಮೆ ಆಗುತ್ತಿದೆ, ಅದರ ಬದಲಿಗೆ ನೋವು ಸಂಕಷ್ಟಗಳನ್ನು ಕಂಡು ಸಂತೋಷ ಪಡುವ *ಸಂದ್ಗಿದ* ಪರಿಸ್ಥಿತಿಯಲ್ಲಿ ಇದ್ದೆವೆ. ಇದು ಅತ್ಯಂತ ಖೇದಕರ್ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಇಂತಹ ಪರಿಸ್ಥಿತಿಗಳಿಂದ ಹೊರಗಡೆ ಬರಬೇಕಾದರೆ ವಿದ್ಯಾಭ್ಯಾಸ ಮಾಡಿ ಉತ್ತಮ ಶಿಕ್ಷಣ ಪಡೆಯುದೊಂದೆ ಪರಿಹಾರ ಎಂದರಲ್ಲದೆ ಖಾಸಗಿಕರಣದ ಇಂದಿನ ಯುವದಲ್ಲಿ ಉದ್ಯೋಗ ಅಸಾಧ್ಯವಾಗಿದೆ. ಖಾಸಗಿ ಕ್ಷೇತ್ರವೂ ಕೂಡಾ ಇದರಿಂದ ಹೊರತಾಗಿಲ್ಲ ಆದರಿಂದ ಎಲ್ಲಾ ಬಾಗಿಲುಗಳು ಮುಚ್ಚಿದಾಗ ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯವಿದ್ದು ಎಲ್ಲೂರೂ ಕಷ್ಟಪಟು ಅಧ್ಯಾಯನ ಮಾಡಬೇಕು ಎಂದು ಕರೆ ನೀಡಿದರು.

ಕಲಬುರಗಿ ಉಪ ವಿಭಾಗದ ಎಸಿಪಿ ಡಿ.ಜೆ.ರಾಜಣ ಅವರು ಮಾತನಾಡಿ ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಾಯನ ಮಾಡಿ ಉನ್ನತ ಹುದ್ದೆಗಳು ಪಡೆಯುವುದರ ಮೂಲಕ ತಂದೆ ತಾಯಿಗೆ ಒಳ್ಳೆಯ ಹೆಸರು ತರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾ ವಿಭಾಗದ ಡೀನರಾದ ಡಾ.ವಿಜಯಕುಮಾರ ಸಾಲಿಮನಿ ವಹಿಸಿದ್ದರು. ವೇದಿಕೆಯ ಮೇಲೆ ಡಾ.ರಾಜಕುಮಾರ ಸಲಗರ್, ಡಾ.ವಿನೋದಕುಮಾರ ರಾಠೋಡ, ಡಾ.ವಿಜಯನಂದ ವಿಠಲರಾವ, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ಶ್ರೀಮತ ಬಿ.ಹೋಳಕರ್, ಡಾ.ನಾಗಪ್ಪ ಗೋಗಿ, ಡಾ. ರವಿ ಬೌದ್ದೆ, ಪ್ರೋ.ಮೇರಿ ಮ್ಯಾಥ್ಯೂಸ್, ಡಾ.ಬಲಭೀಮ ಸಾಂಗ್ಲಿ, ಡಾ.ವಿಜಯಕುಮಾರ ಗೋಪಾಳೆ, ಡಾ.ರಾಜೇಶ ಅಜಬ್‌ಸಿಂಗ್, ಡಾ. ಶ್ಯಾಮಲಾ ಸ್ವಾಮಿ ಉಪಸ್ಥಿತರಿದ್ದರು. ಕುಮಾರಿ ಪ್ರಿಯಾಂಕಾ ಸ್ವಾಗತಿಸಿದರು. ಕುಮಾರಿ ರಂಜಿತಾ ನಿರೂಪಿಸಿದರು. ದುರ್ಗಪ್ಪ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here