ಜೂನ್ 26ಕ್ಕೆ ಶಹಾಬಾದ ತಾಲೂಕಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ

0
38

ಕಲಬುರಗಿ; ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರ ಅಧ್ಯಕ್ಷತೆಯಲ್ಲಿ ಇದೇ ಜೂನ್ 26 ರಂದು ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನ ಪ್ರಕೃತಿ ವಿಕೋಪ ಹಾಗೂ ಪೂರ್ವ ಮುಂಗಾರು ಸಿದ್ಧತೆ ಕುರಿತು ಚರ್ಚಿಸಲು ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿಯ ಸಭೆ ಕರೆಯಲಾಗಿದೆ ಎಂದು ತಹಶೀಲ್ದಾರ ಜಗದೀಶ್ ಚೌರ್ ತಿಳಿಸಿದ್ದಾರೆ.

ಸಭೆಯು ಕಲಬುರಗಿ ತಾಲೂಕ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 9.30 ಗಂಟೆಗೆ ನಡೆಯಲಿದ್ದು, ತಾಲೂಕು ಮಟ್ಟದ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸಭೆಗೆ ಅಗತ್ಯ ಮಾಹಿತಿಯೊಂದಿಗೆ ತಪ್ಪದೆ ಹಾಜರಾಗಬೇಕೆಂದು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here