ಅಗ್ನಿಪಥ ಯೋಜನೆ ಯುವಕರ ಭದ್ರತೆಗೆ ಮಾರಕ

0
41

ಕಲಬುರಗಿ: ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಭಾರತೀಯ ಸೇನೆಯಲ್ಲಿ ಅಗ್ನಿಪಥ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡ್ರೇಶನ್ (ಎಐವೈಎಫ್) ಕಲಬುರಗಿ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ನೇತೃತ್ವದಲ್ಲಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಭಾರತೀಯ ಸೇನೆ ದೇಶದ ಉದ್ಯೋಗ ನೀಡುವ ಎರಡನೆ ದೊಡ್ಡ ಸಂಸ್ಥೆಯಾಗಿದೆ‌‌. ಯುವಕರು ದೇಶಪ್ರೇಮದ ಹಿನ್ನಲೆಯಲ್ಲಿ ಸೈನ್ಯಕ್ಕೆ ಸೇರುವ ತುಡಿತದ ಮನಸ್ಸುನ್ನು ಹೊಂದಿರುತ್ತಾರೆ‌ ರಾಷ್ಟ್ರ ರಕ್ಷಣೆಯ ಜೊತೆ,ಜೊತೆಗೆ ತಮ್ಮ ಕುಟುಂಬ ನಿರ್ವಹಣೆಗಾಗಿ ಸೈನೆಯು ಉದ್ಯೋಗ ಭದ್ರತೆಯನ್ನು ಯುವಕರಿಗೆ ನೀಡುತ್ತಿತ್ತು. ಆದರೆ ಕೇಂದ್ರ ಸರಕಾರ ಅಗ್ನಿಪಥ ಯೋಜನೆ ಜಾರಿಗೆ ತರುವ ಮೂಲಕ ಯುವಕರಿಗೆ ಒದಗುತ್ತಿದ್ದ ಉದ್ಯೋಗ ಭದ್ರತೆಯನ್ನು ನಾಶಗೊಳಿಸಿದೆ.

Contact Your\'s Advertisement; 9902492681

ದೇಶದ ಸುರಕ್ಷತೆಯ ಅಪಾಯಕ್ಕೆ ತಂದು ನಿಲ್ಲಿಸಿದೆ. ಅಗ್ನಿಪಥ ಯೋಜನೆ ಮೊದಲ ಹಂತದ ಯುವಕರು ಈಗಾಗಲೇ ತಮ್ಮ ಸೇವೆ ಪೂರ್ಣಗೊಳಿಸುತ್ತಿದ್ದು ಅವರ ಮುಂದಿನ ಭವಿಷ್ಯವೇನು? ಸರಕಾರ ಅಲ್ಪ ಆರ್ಥಿಕ ನೆರವು ನೀಡಿ ಪೂರ್ಣ ಪ್ರಮಾಣದ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ‌. ಈ ಯುವಕರು ತಮ್ಮ ಔಪಚಾರಿಕ ಶಿಕ್ಷಣವನ್ನು ಮೊಟಕುಗೊಳಿಸಿ ಈ ಯೋಜನೆಗೆ ಸೇರಿ ಅಲ್ಪಾವಧಿ ಸೇವೆಯನ್ನು ಪೂರ್ಣಗೊಳಿಸಿ ಕಡಿಮೆ ವಯಸ್ಸಿನಲ್ಲಿಯೇ ನಿವೃತ್ತರಾದರೆ ಈ ಕಡೆ ಶಿಕ್ಷಣವೂ ಇಲ್ಲ, ಆ ಕಡೆ ಉದ್ಯೋಗವೂ ಇಲ್ಲ ಎನ್ನುವಂತಹ ಸ್ಥಿತಿಗೆ ಯುವಜನರು ಸಿಲಿಕಿಬಿಡುತ್ತಾರೆ.

ಅಲ್ಪಾವಧಿ ಸೇನೆಯಲ್ಲಿ ನಿಯೋಜಿಸುವುದು ದೇಶದ ರಕ್ಷಣಾ ದೃಷ್ಟಿಯಿಂದಲೂ ಸೂಕ್ತವಲ್ಲ ಎನ್ನುವಂತಹ ಅಭಿಪ್ರಾಯ ಸೇನಾ ಉನ್ನತ ಅಧಿಕಾರಿಗಳ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದ್ದು ಯೋಜನೆಯ ಅಪಾಯವನ್ನು ತಿಳಿಸುತ್ತದೆ. ಆದ್ದರಿಂದ ದೇಶದ ಸುರಕ್ಷಿತೆಯ ದೃಷ್ಟಿಯಿಂದ ಮತ್ತು ಯುವಜನರಿಗೆ ಭದ್ರತೆಯ ಉದ್ಯೋಗದ ದೃಷ್ಟಿಯಿಂದ ಅಗ್ನಿಪಥ ಯೋಜನೆಯನ್ನು ಕೈಬಿಡಬೇಕು ಮತ್ತು ಸೇನೆಯಲ್ಲಿ ಈ ಹಿಂದಿನಂತೆ ನೇಮಕಾತಿ ಮಾಡುವಂತೆ ಅಖಿಲ ಭಾರತ ಯುವಜನ ಫೆಡರೇಷನ್‌ ಂIಙಈ ಕಲಬುರಗಿ ಜಿಲ್ಲಾ ಮಂಡಳಿ ಒತ್ತಾಯಿಸುತ್ತದೆ.

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಅಸ್ಲಾಂ ಶೇಖ್‌, ಆನಂದ ಖೇಳಗಿ, ಮಂಜುನಾಥ ಬಿರಾದಾರ ಖೇಳಗಿ, ಬಸವರಾಜ ಟೆಂಗಳಿ, ಉತ್ತಮಕುಮಾರ ಪಾಂಡುರಂಗ, ತಿಪ್ಪಣ್ಣ ಎಂಪೂರೆ,ಧರೇಶ ಎಮ.ತೇಲಿ, ಡಾ.ನಾನಾಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here