ಪರಿಶ್ರಮದ ಫಲವೇ ಸಂತೃಪ್ತಿ ಜೀವನ: ಶಿಲ್ಪಾರಾಣಿ ಪಾಟೀಲ

0
29

ಕಲಬುರಗಿ: ಮನುಷ್ಯ ಸತತ ಪ್ರಯತ್ನದಿಂದ ಸಾಧನೆಯ ಶಿಖರವೇರಿ ಇತಿಹಾಸ ನಿರ್ಮಾಣ ಮಾಡಬಹುದು ಎಂದು ಎಸ್‌ಬಿಆರ್ ಶಿಕ್ಷಣ ಸಂಸ್ಥೆಯ ಸಹ ಶಿಕ್ಷಕರಾದ ಶಿಲ್ಪಾರಾಣಿ ಪಾಟೀಲ ಮಹಾಗಾಂವ ಹೇಳಿದರು.

ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 216ನೇ ವಾರದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ ಆತ್ಮ ಶುದ್ಧ ದಿಂದ ಕಾಯಕ ಮಾಡಿದರೆ ಆತ್ಮ ತೃಪ್ತಿಯೊಂದಿಗೆ ಸಂತೃಪ್ತ ಸಮಾಜ ನಿರ್ಮಿಸಬಹುದು. ಪರಿಶ್ರಮದ ಫಲವೇ ಸಂತೃಪ್ತಿ ಜೀವನದ ಅಡಿಪಾಯವಾಗಿದೆ. ಇಂತಹ ಆಧ್ಯಾತ್ಮಿಕ ಚಿಂತನೆಗಳು ಸಮಾಜ ಬದಲಾವಣೆಗೆ ಆಗುವುದರೊಂದಿಗೆ ದುಷ್ಟ ಶಕ್ತಿಗಳಿಗೆ ನಾಂದಿಯಾಗುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾದ ಕಲ್ಯಾಣ ಕಹಳೆ ಪತ್ರಿಕೆ ಸಂಪಾದಕರಾದ ಶರಣಗೌಡ ಪಾಟೀಲ ಪಾಳಾ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಕೆಲವು ಸ್ವಾಮೀಜಿಗಳು ಕೇವಲ ಪೂಜೆಗೆ ಸೀಮಿತವಾಗಿರುವ ಸಂದರ್ಭದಲ್ಲಿಯೂ ಹಗಲು ರಾತ್ರಿ ಎನ್ನದೆ ಸಂಸ್ಕಾರದ ಬೀಜ ಬಿತ್ತುತಿರುವ ಬಬಲಾದ ಪೂಜ್ಯರಾದ ಗುರುಪಾದಲಿಂಗ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯ. ಕಾವಿಯ ಶಕ್ತಿಯಿಂದ ಇಡೀ ಸಮಾಜ ಬದಲಾವಣೆಯಾಗಿರುವ ಉದಾಹರಣೆಗಳು ಬಹಳಷ್ಟಿವೆ. ಶ್ರೀ ಮಠದ ಎಲ್ಲಾ ಪೂಜ್ಯರು ಭಕ್ತರಿಗೆ ಆಶೀರ್ವದಿಸುವುದರೊಂದಿಗೆ ಸಮಾಜಮುಖಿ ಕಾರ್ಯವನ್ನು ಮಾಡಿ ಉತ್ತಮ ಸಮಾಜ ನಿರ್ಮಿಸುವ ಕಾರ್ಯವಾಗಲೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಡ್ರಾಮಾ ಜೂನಿಯರ್ ಸೆಷನ್ 5 ರಲ್ಲಿ ಕಲಬುರಗಿಯಿಂದ ಆಯ್ಕೆಯಾದ ಕುಮಾರ ವಾಸು ನಾಗರಾಜ ಪಾಟೀಲ ಅವರಿಗೆ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಮಾಣಿಕ ಮಿರ್ಕಲ್, ಶರಣಬಸಪ್ಪ ಪಾಟೀಲ ವರನಾಳ, ಸಿದ್ದಣ್ಣ ಬಿರೆದಾರ ವಾಡಿ, ನಾಗರಾಜ ಪಾಟೀಲ,ಗುರುರಾಜ ಹಸರಗುಂಡಗಿ, ಶಾಂತು ಕಲಬುರಗಿ, ಶಿವಕುಮಾರ ಸಾವಳಗಿ, ಗೌಡೇಶ ಬಿರಾದಾರ, ಜ್ಯೋತಿ ಪಾಟೀಲ, ಜ್ಯೋತಿ, ಪ್ರಕಾಶ ಬಿರಾದಾರ ವಾಡಿ ಸೇರಿದಂತೆ ಅನೇಕ ಜನ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here