ಗ್ರಾಪಂ ಹಂಗಾಮಿ ಅಧ್ಯಕ್ಷೆ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹಿಸಿ ಎಸ್.ಪಿಗೆ ಮನವಿ

0
20

ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮ ಪಂಚಾಯತಿಗೆ ಉಪ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ನೇಮಕವಾಗಿದ್ದ ಸ್ವಪ್ನಾ ನಿಂಗರಾಜ ಕಡಿ ಅವರ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಜೇವರ್ಗಿ ದಲಿತ ಸಂಘಟನೆಗಳ ದಲಿತ ಸಮನ್ವಯ ಸಮಿತಿ ಪಧಾದಿಕಾರಿಗಳು ಎಸ್ಪಿಗೆ ಬುಧುವಾರ ಮನವಿ ಸಲ್ಲಿಸಿದರು.

ಇಂದು ಚುನಾವಣೆ ನಡೆಯಲಿದೆ.ಈ ಹಿನ್ನಲೆಯಲ್ಲಿ ಸಪ್ನಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ವಿನಾಕಾರಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.ಈ ಕುರಿತು ಯಡ್ರಾಮಿ ಪೋಲಿಸ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ.ಆದ್ದರಿಂದ ಆರೋಪಿಗಳನ್ನು ಬಂಧಿಸಿ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಮತ್ತು ಅವರ ಕುಟುಂಬಕ್ಕೆ ಪೋಲಿಸ ಇಲಾಖೆ ಭದ್ರತೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

Contact Your\'s Advertisement; 9902492681

ಈ ಘಟನೆ ಕುರಿತು ಅರಳಗುಂಡಗಿಯ ಶರಣಗೌಡ ಹಿರೇಗೌಡ ಸೇರಿದಂತೆ 5 ಜನರ ಮೇಲೆ ಪ್ರಕರಣ ದಾಖಲಾಗಿದೆ.ಪ್ರಕರಣಕ್ಕೆ ಸಂಬಂದಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು.ಈ ಕುರಿತು ಯಡ್ರಾಮಿ ಪಿಎಸ್ಐಗೆ ಸೂಚನೆ ನೀಡಬೇಕು.ಚುನಾವಣೆ ಶಾಂತಿಯುತವಾಗಿ ನಡೆಯುವಂತೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಹರಿ ಕರಕಿಹಳ್ಳಿ,ಸಿದ್ದರಾಮ ಕಟ್ಟಿ, ಸಿದ್ದು ಕೆರೂರು,ಭೀಮರಾಯ ನಗನೂರ,ಶ್ರೀಶೈಲ ಜಾಲವಾದ, ಜಗನ್ನಾಥ ಸೂರ್ಯವಂಶಿ,ಮಂಜುನಾಥ ನಾಲವಾರಕರ್, ಅಬ್ದುಲ ಹನಿ,ಶಿವಶರಣ ಆಂದೋಲಾ,ರೇವಣಸಿದ್ದ ಬಿರಾಳ ಹಾಗೂ ಅರಳಗುಂಡಗಿ ಗ್ರಾಮದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here