ಗಿಡ-ಮರಗಳ ಸಂರಕ್ಷಣೆ ಮಾಡದಿದ್ದರೇ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ

0
69

ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ. ಇಲ್ಲವಾದರೆ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಹಂದ್ರಾಳ ಹೇಳಿದರು.

ಅವರು ರವಿವಾರ ತಾಲೂಕಿನ ಮರತೂರ ಗ್ರಾಮದಲ್ಲಿ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಏರ್ಪಡಿಸಿದ್ದ ವನಮಹೋತ್ಸವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಸಿಗೆ ನಿರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ನೂರಾರು ಗಿಡಗಳನ್ನು ನೆಟ್ಟು ಬೆಳೆಸುವುದೇ ವನಮಹೋತ್ಸವದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಜಾಗೃತಿ ವಹಿಸಬೇಕು. ನಿತ್ಯ ವಾಹನಗಳು ಹೆಚ್ಚಾಗುತ್ತಿವೆ. ಗಿಡ ಮರಗಳು ನಾಶವಾಗುತ್ತಿವೆ, ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗುತ್ತಿದ್ದು, ಇದರಿಂದ ವಾಯು ಮಾಲಿನ್ಯ, ಉμÁ್ಣಂಶ ಹೆಚ್ಚಾಗುತ್ತಿದೆ. ಮಳೆ ಬೆಳೆಗಳು ಕಡಿಮೆಯಾಗುತ್ತಿವೆ. ಕಾರಣ ಇದರ ಬಗ್ಗೆ ಸಮತೋಲನ ಕಾಪಾಡಲು ಜನರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ ಎಂದು ಹೇಳಿದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ರವೀಂದ್ರ ನರೋಣಿ ಮಾತನಾಡಿ, ನಿರಂತರ ಪರಿಶ್ರಮ ಎಲ್ಲಿ ಇರುತ್ತದೆ ಅಲ್ಲಿ ಉತ್ತಮ ಫಲಿತಾಂಶ ಇದ್ದೆ ಇರುತ್ತದೆ. ಗ್ರಾಮದ ವಾತವರಣ ಮೊದಲು ಸರಿಯಾಗಿ ಇದ್ದರೆದಿಲ್ಲಿನ ಜನರ ಆರೋಗ್ಯವು ಚೆನ್ನಾಗಿರುತ್ತದೆ. ಗ್ರಾಮದ ಜನರು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವ ಮೂಲಕ, ತಮ್ಮ ನೆರೆ ಹೊರೆಯರಿಗೆ ತಿಳಿ ಹೇಳಿ, ಶುದ್ಧ, ಸ್ವಚ್ಛ, ಆರೋಗ್ಯ ಸಮಾಜ ನಿರ್ಮಿಸಲು ಮುಂದಾಗಬೇಕಿದೆ ಎಂದರು.

ಅರಣ್ಯ ವೀಕ್ಷಕರಾದ ಮಾರುತಿ ಮಾತನಾಡಿ, ಈ ಹಿಂದೆ ಸೈಕಲ್ ಹೆಚ್ಚಾಗಿ ಬಳಸುತ್ತಿದ್ದರು. ಇದರಿಂದ ಉತ್ತಮ ಆರೋಗ್ಯದ ಜತೆಗೆ ವಾಯು ಮಾಲಿನ್ಯವಾಗುತ್ತಿರಲಿಲ್ಲ. ಇಂದು ಪ್ರತಿಯೊಬ್ಬರು ಪರಿಸರದ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ಮರತೂರ ಗ್ರಾಮದ ಮುಖಂಡ ಶೌಕತ್ ಅಲಿ,ಗುರುನಾಥ ಕಂಬಾ, ಗ್ರಾಪಂ ಸಿದ್ರಾಮಪ್ಪಗೌಡ ಮಾಲಿ ಪಾಟೀಲ,ಶ್ಯಾಮರಾವ ಸುಣಗಾರ,ಸಂಜುಕುಮಾರ ಗರ್, ರಮೇಶ ಸಾಹು, ಶರಣು ಪರಗುಂಡ, ಮಲ್ಲಿಕಾರ್ಜುನ ದೊಡ್ಡಿ, ವೆಂಕಟೇಶ, ಗೌತಮ ಪರತೂರಕರ್ ,ವೆಂಕಟೇಶ ಪವಾರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here