ಶಹಾಬಾದ: ಸಂಪೂರ್ಣತಾ ಅಭಿಯಾನ ಉತ್ಸವಕ್ಕೆ ಚಾಲನೆ

0
42

ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ ಆರಂಭಿಸಿದೆ ಎಂದು ಕಲಬುರಗಿ ಜಿಪಂನ ಉಪನಿರ್ದೇಶಕರು ಮೌಲ್ಯಮಾಪನ ಮತ್ತು ಯೋಜನಾಧಿಕಾರಿಗಳಾದ ಮಧುಮತಿ ಹೇಳಿದರು.

ನಗರದ ತಾಪಂ ಆವರಣದಲ್ಲಿ ಶುಕ್ರವಾರದಂದು ನೀತಿ ಆಯೋಗ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಕಲಬುರಗಿ ಮತ್ತು ತಾಲೂಕಾ ಪಂಚಾಯತಿ ಶಹಾಬಾದ ಆಯೋಜಿಸಲಾದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸಂಪೂರ್ಣತಾ ಆಭಿಯಾನ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ನೀತಿ ಆಯೋಗದಡಿ ಜಿಲ್ಲೆಯ ಶಹಾಬಾದ ತಾಲೂಕನ್ನು ಮಹತ್ವಾಕಾಂಕ್ಷಿ ತಾಲೂಕು ಎಂದು ಆಯ್ಕೆಮಾಡಲಾಗಿದೆ.
ಸೆಪ್ಟೆಂಬರ್ 30ರ ವರೆಗೆ ಈ ಅಭಿಯಾನವು ನಡೆಯಲಿದೆ. ಮಹತ್ವಾಕಾಂಕ್ಷೆಯ ತಾಲೂಕಿನಲ್ಲಿ ಆರು ಪ್ರಮುಖ ಕಾರ್ಯಕ್ರಮತೆ ಸೂಚಕಗಳಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸುವ ಗುರಿಯನ್ನು ಹೊಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಪಂ ಇಓ ಮಲ್ಲಿನಾಥ ರಾವೂರ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ “ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ”ದಡಿ “ಸಂಪೂರ್ಣತಾ ಅಭಿಯಾನ ಉತ್ಸವ” ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ತಾಲೂಕಾ ಮಟ್ಟದಲ್ಲಿನ ಜನರ ಜೀವನ ಮಟ್ಟ ಸುಧಾರಿಸಲು ಶ್ರಮಿಸೋಣ ಅವರು ಕರೆ ನೀಡಿದರು.

ತಾಲೂಕಿನ ಜನರ ಜೀವನ ಮಟ್ಟವನ್ನು ಸುಧಾರಿಸಲು ಪ್ರಮುಖ ಸೇವಾ ವಲಯಗಳಾದ ಆರೋಗ್ಯ, ಶಿಕ್ಷಣ, ಮೂಲಸೌಲಭ್ಯ, ನೀರಾವರಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಮೂಲಕ ಜನರ ಜೀವನಮಟ್ಟ ಎತ್ತರಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.

ತಾಲೂಕಿನಲ್ಲಿ ಪ್ರಮುಖ ಸೂಚಂಕಗಳ ಸಂಪೂರ್ಣತೆಯನ್ನು ಸಾಧಿಸಲು ಸುಟ್ಟರ ಪ್ರಯತ್ನ ಕೈಗೊಳ್ಳಲು ನೀತಿ ಆಯೋಗವು ಇಂದಿನಿಂದ 3 ತಿಂಗಳ ಕಾಲ ಸಂಪೂರ್ಣತಾ ಅಭಿಯಾನ ಹಮ್ಮಿಕೊಂಡಿದೆ. ಹಾಗಾಗಿ ಪ್ರಸವಪೂರ್ವ ಆರೈಕೆ ನೋಂದಣಿ, ಮಧುಮೇಹ ತಪಾಸಣೆ, ಅಧಿಕ ರಕ್ತದೊತ್ತಡ ಸ್ವೀನಿಂಗ್, ಪೂರಕ ಪೆÇೀಷಣೆ, ಮಣ್ಣಿನ ಆರೋಗ್ಯ ಪರೀಕ್ಷೆ, ಶಿಕ್ಷಣ, ಕುಡಿಯುವ ನೀರು ಮತ್ತು ನೈರ್ಮಲ್ಯ, ಕೃಷಿ, ಜಲ ಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮೇಲಿನ ಎಲ್ಲಾ ವಲಯಗಳಲ್ಲಿ ರಾಜ್ಯ ಮಟ್ಟದ ಸರಾಸರಿ ಅಭಿವೃದ್ಧಿಯ ಗುರಿಯನ್ನು ಹೊಂದಲಾಗಿದೆ ಎಂದರು.

ನರೇಗಾ ಸಹಾಯಕ ನಿರ್ದೇಶಕ ಅನೀಲ ಮಾನ್ಪಡೆ,ತಾಲೂಕಾ ಯೋಜನಾಧಿಕಾರಿ ಈರಣ್ಣ ಸಾಥಖೇಡ್,ವಿವಿಧ ಇಲಾಖೆಯ ಅಧಿಕಾರಿಗಳಾದ ವೈದ್ಯಾಧಿಕಾರಿ ಡಾ.ಸಂತೋಷ ಆಲಗೂಡ, ಕೃಷಿ ಅಧಿಕಾರಿ ಸತೀಶಕುಮಾರ, ಸಿಡಿಪಿಓ ವಿಜಯಲಕ್ಷ್ಮಿ ಹೇರೂರ,ತಾಲೂಕಾ ಸಹಾಯಕ ಲೆಕ್ಕಾಧಿಕಾರಿ ಶಿವರಾಜ,ಶಾಂತಲಿಂಗ, ಸಿದ್ದು ಖಣದಾಳ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here