ಸುರಪರ: ನಗರದ ಪೊಲೀಸ್ ಠಾಣೆಯಲ್ಲಿ ಪ.ಜಾ,ಪ.ಪಂ ಕುಂದು ಕೊರತೆಗಳ ಸಭೆ

0
23

ಸುರಪುರ: ಇಲ್ಲಿ ಅನೇಕರು ವಿವಿಧ ಸಮಸ್ಯೆಗಳ ಕುರಿತು ಸಭೆಯಲ್ಲಿ ಗಮನಕ್ಕೆ ತಂದಿರುವಿರಿ,ತಮ್ಮ ಬೇಡಿಕೆಗಳ ಈಡೇರಿಸಲು ಮುಂಬರುವ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಹಸಿಲ್ದಾರ್ ಕೆ.ವಿಜಯಕುಮಾರ ತಿಳಿಸಿದರು.

ನಗರದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ನಮ್ಮ ಕಂದಾಯ ಇಲಾಖೆಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಸಭೆಯಲ್ಲಿ ತಿಳಿಸಿರುವಿರಿ,ನಾನೆ ಖುದ್ದಾಗಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳ ಕುರಿತು ವಿವಿರ ನೀಡಿದ ತಾಲೂಕ ಆರೋಗ್ಯಾಧಿಕಾರಿ ಡಾ.ಆರ್.ವಿ ನಾಯಕ ಅವರು,ನಮ್ಮ ಇಲಾಖೆಗೆ ಸಂಬಂಧಿಸಿದಂತೆ ವೈದ್ಯರ ಕೊರತೆ ಇರುವುದು ಮೇಲಾಧಿಕಾರಿಗಳು ತಿಳಿಸಿದ್ದೇನೆ ಶೀಘ್ರದಲ್ಲಿ ವೈದ್ಯರು ಬರಲಿದ್ದಾರೆ ಎಂದರು.

ಅಲ್ಲದೆ ಸ್ಕ್ಯಾನಿಂಗ್ ಆರಂಭಿಸಲಾಗುವುದು,ಅಲ್ಲದೆ ಆಂಬುಲೆನ್ಸ್‍ಗೆ ಡಿಸೇಲ್‍ಗೆ ಹಣ ಪಡೆದ ಕುರಿತು ತಿಳಿಸಿದ್ದು ಇದರ ಕುರಿತು ಕ್ರಮ ಕೈಗೊಳ್ಳುವುದಾಗಿ ಹಾಗೂ ಬೆಂಗಳೂರ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದ್ದು ಉತ್ತರಿಸಿದ ಮೇಲೆ ತಿಳಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಹೋರಾಟಗಾರ ವೆಂಕೋಬದೊರೆ ಬೊಮ್ಮನಹಳ್ಳಿ ಮಾತನಾಡಿ,ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಪ್ರಮುಖ ಅಧಿಕಾರಿಗಳೆ ಇಲ್ಲದಿರುವ ಸಭೆಯು ಕಾಟಾಚಾರಕ್ಕೆ ನಡೆಸಲಾಗುತ್ತಿದೆ ಎಂದರು.ಅಲ್ಲದೆ ಸುರಪುರ ಹುಣಸಗಿ ತಾಲೂಕಗಳಲ್ಲಿನ ವಿದ್ಯುತ್ ಕಂಬಗಳು ಹಣೆಯದಾಗಿದ್ದು ಬದಲಾಯಿಸಲು ಆಗ್ರಹಿಸಿದರು.ಅಲ್ಲದೆ ಇನ್ನುಳಿದ ಅರಣ್ಯ,ನಗರಸಭೆ ಹಾಗೂ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಕೇಳಿದರು.

ಅಲ್ಲದೆ ಹೋರಾಟಗಾರರಾದ ನಿಂಗಣ್ಣ ಗೋನಾಲ,ಸಚಿನಕುಮಾರ ನಾಯಕ,ಮಾನಪ್ಪ ಕಟ್ಟಿಮನಿ,ದಾನಪ್ಪ ಕಡಿಮನಿ,ರಾಜು ಬಡಿಗೇರ,ಶೇಖರ ಮಂಗಳೂರ,ದೇವಿಂದ್ರಪ್ಪಗೌಡ ಮಾಲಗತ್ತಿ,ಯಲ್ಲಪ್ಪ ನಾಯಕ ಕಲ್ಲೋಡಿ ಸೇರಿದಂತೆ ಅನೇಕರು ವಿವಿಧ ಸಮಸ್ಯೆಗಳ ಕುರಿತು ಮಾತನಾಡಿ, ನಗರದಲ್ಲಿ ಸಿಸಿ ಕ್ಯಾಮೆರಾ ಕಾರ್ಯಾರಂಭದ ಕುರಿತು,ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವ ಕುರಿತು,ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ಕುರಿತು,ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳುವ ಕುರಿತು,ಬೀದಿ ದನಗಳ ಸ್ಥಳಾಂತರ ಕುರಿತು,ಅಕ್ರಮ ಮರಳು ಸಾಗಾಟ,ಅಕ್ಕಿ ಸಾಗಾಟ,ಜೂಜು ಮಟ್ಕಾ ದಂಧೆಗೆ ಕಡಿವಾಣ ಹಾಕುವ ಕುರಿತು ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.

ಸಭೆಯಲ್ಲಿ ಪಿ.ಐ ಆನಂದ ವಾಗಮೊಡೆ,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಅರಣ್ಯ ಇಲಾಖೆ ಅಧಿಕಾರಿ ಬುಹ್ರಾನ್ ಶಹಾ,ಪಿಎಸ್‍ಐ ಸಿದ್ದಣ್ಣ ಯಡ್ರಾಮಿ,ಶಿವರಾಜ ಪಾಟೀಲ್ ಸೇರಿದಂತೆ ತಾ.ಪಂ ವ್ಯವಸ್ಥಾಪಕರು,ಸಮಾಜ ಕಲ್ಯಾಣ ಇಲಾಖೆ ಸಿರಸ್ತೆದಾರರು ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

ಪೊಲೀಸ್ ಪೇದೆ ದಯಾನಂದ ಜಮಾದಾರ ಸಭೆಯ ಕುರಿತು ನಿರೂಪಿಸಿ ವಂದಿಸಿದರು.ವಿವಿಧ ಸಂಘಟೆಗಳ ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here