ಚಂದ್ರಯಾನ್-೨ ಮಿಷನ್ ಇಡೀ ಜಗತ್ತಿಗೆ ಮಾಧರಿ ಉಡಾವಣೆ

0
67

ಕಲಬುರಗಿ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತವು ತನ್ನ ತ್ವರಿತ ಪ್ರಗತಿಯಲ್ಲಿರುವುದರಿಂದ ಬಾಹ್ಯಾಕಾಶದಲ್ಲಿ ಪ್ರಯಾಣವು ಇತರ ಯಾವುದೇ ಪ್ರಯಾಣದ ವಿಧಾನಗಳಿಗಿಂತ ಅಗ್ಗವಾಗಿದೆ. ಎಂಬುವುದನ್ನು ಇಡೀ ಜಗತ್ತಿಗೆ ಸಾಬೀತು ಪಡಿಸಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಇಂಗ್ಲಿಷ್ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ದುಬಾರಿ ವೆಚ್ಚದ ಚಂದ್ರಯಾನ್-೨ ಮಿಷನ್ ಭಾಗಶ ವಿಫಲವಾದರೂ, ನೌಕೆಯನ್ನು ಚಂದ್ರನ ಮೇಲೆ ಇಳಿಸುವ ಸಾಮರ್ಥ್ಯ ಹೊಂದಿದೆ ಎಂಬ ಸಂದೇಶ ಇಡೀ ಜಗತ್ತಿಗೆ ಸಾಭಿತು ಪಡಿಸಿದೆ ಎಂದರು.

Contact Your\'s Advertisement; 9902492681

ಚಂದ್ರಯಾನ್-೨ ಮಿಷನ್ ಯೋಜನೆಯಲ್ಲಿ ಕೆಲಸ ಮಾಡಿದ ಬಹಳಷ್ಟು ವಿಜ್ಞಾನಿಗಳು ಪ್ರತಿಷ್ಠಿತ ಯಾವುದೇ ಇಂಡಿಯನ್ ಇನ್‌ಸ್ಟೂಟ್ ಆಫ್ ಟೆಕ್ನಾಲಾಜಿ ಹಾಗೂ ಶಿಕ್ಷಣ ಸಂಸ್ಥೆ ಕಾಲೇಜು, ವಿಶ್ವವಿದ್ಯಾಲಯಗಳಿಂದ ಬಂದವರಲ್ಲ. ಅವರು ಸಾಮಾನ್ಯ ಎಂಜನಿಯರಿಂಗ್ ಕಾಲೇಜು, ವಿಶ್ವವಿದ್ಯಾಲಯಗಳಿಂದ ಬಂದಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಇಂತಹ ಪ್ರತಿಭೆಗಳ ಅನುಕರಣೆ ಮಾಡಬೇಕು ಎಂದು ಡಾ.ಅನೀಲಕುಮಾರ ಬಿಡವೆ ಸಲಹೆ ನೀಡಿದರು.

ದೇಶದ ಅತ್ಯಂತ ಕಿರಿಯ ವಿಶ್ವವಿದ್ಯಾಲಯವಾಗಿರುವ ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ, ವಿಶ್ವವಿದ್ಯಾನಿಲಯವನ್ನು ವಿಶ್ವ ದರ್ಜೆಯ ವಿಶ್ವವಿದ್ಯಾಲಯವಾಗಿ ಪರಿವರ್ತಿಸಬೇಕು. ಅಂದಾಗ ಮಾತ್ರ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಶರಣಬಸವಪ್ಪ ಅಪ್ಪಾಜೀಯ ಕನಸು ನನಸಾಗುತ್ತದೆ ಎಂದು ತಿಳಿಸಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ ಶಿವಾನಂದನ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್ ಪಾಟೀಲ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ.ಗೀತಮಾಲಾ ಮಾತನಾಡಿದರು. ಪ್ರೊ.ಅಶ್ವಿನಿ, ಇದ್ದರು.

ಸ್ವಾತಿ, ಪ್ರೀತಿ ನಿರೂಪಿಸಿದರು. ಚಂದ್ರಿಕಾ ಪಾಟೀಲ ಸ್ವಾಗತಿಸಿದರು. ಪೂಜಾ ಪ್ರಾರ್ಥಿಸಿದರು. ಕಾಂಚನಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here