ಬಸವ ತತ್ವ ನಮ್ಮೆಲ್ಲರ ಬದುಕಿಗೆ ದಾರಿದೀಪ

0
27

ಶಹಾಬಾದ: ಬಸವ ತತ್ವ ಅದೊಂದು ಬದುಕಿನ ತತ್ವ. ಈ ತತ್ವದಲ್ಲಿ ಬೆಳಕಿದೆ.ಅದು ಎಂದೆಂದಿಗೂ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದೆ ಎಂದು ಬಸವಪರ ಚಿಂತಕ ಮಹಾಂತಪ್ಪ ಬಸವಪಟ್ಟಣ ಹೇಳಿದರು.

ಅವರು ತಾಲೂಕಿನ ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ಆಯೋಜಿಸಲಾದ ಬಸವ ತತ್ವ ದರ್ಶನ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಬಸವಣ್ಣನವರ ವಚನಗಳು ನಮ್ಮಲ್ಲರ ಬದುಕಿಗೆ ಮಾಗದರ್ಶಿಯಾಗಬಲ್ಲ ಸೂತ್ರಗಳನ್ನು ಅಡಗಿವೆ.ಅವರ ಒಂದೊಂದು ವಚನಗಳು ಪಚನವಾಗಿಸಿಕೊಂಡರೇ ಜೀವನದಲ್ಲಿ ಅಶಾಂತಿ ಹೋಗಿ ಶಾಂತಿ, ನೆಮ್ಮದಿ ನೆಲೆಸುತ್ತದೆ.ಅಜ್ಞಾನ ಹೋಗಿ ಜ್ಞಾನ ಲಭಿಸುತ್ತದೆ.ವಚನ ನಿಷ್ಠೆಯನ್ನು ಪಾಲಿಸಬೇಕು.ಬಸವಾದಿ ಶರಣರು ನೀಡಿದ ವಚನಗಳೇ ನಮಗೆ ಪ್ರಾಣ ಮತ್ತು ಜೀವಾಳ ಎಂಬುದು ತಿಳಿದುಕೊಳ್ಳಬೇಕು ಎಂದರು.

ಶರಣ ಶ್ರೀಶೈಲಪ್ಪ ಅವಂಟಿ ಮಾತನಾಡಿ, ಜೀವನದ ಸರ್ವ ಸಮಸ್ಯೆಗಳಿಗೆ ಬಸವ ತತ್ವದಲ್ಲಿ ಪರಿಹಾರವಿದೆ.ಆದ್ದರಿಂದ ಈ ತತ್ವದ ಪ್ರಚಾರ, ಪ್ರಸಾರ ಮಾಡುವುದಕ್ಕಿಂತ ಪಾಲನೆ ಮತ್ತು ಅನುಸರಣೆ ಮಾಡುವುದು ಮೂಕ್ಯ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಬಸವ ಕಲ್ಯಾಣ ತಾಲೂಕಿನ ಹತ್ತರಗಾ.ಎಸ್ ಗ್ರಾಮದ ಶ್ರೀ ಗೋಣಿರುದ್ರೇಶ್ವರ ಮಠದ ಪೂಜ್ಯರಾದ ಶ್ರೀ ಗೋಣಿರುದ್ರ ಮಹಾಸ್ವಾಮಿಗಳು ಮಾತನಾಡಿ,ಶ್ರವಣ ಮಾಡುವ ಮಾಸವೇ ಶ್ರಾವಣ.ಅಂದರೆ ಒಳ್ಳೆಯ ವಿಚಾರಗಳನ್ನು ಕೇಳುವುದು. ಕೇಳಿದನ್ನು ವರ್ಷಪೂರ್ತಿ ಮನನ ಮಾಡಿಕೊಂಡು ಅರಿತು ನಡೆಯುವುದೇ ನಿಜವಾದ ಜೀವನ. ಜೀವನದಲ್ಲಿ ಶಾಂತಿ,ಸಮಾಧಾನ ಹಾಗೂ ನೆಮ್ಮದಿಯನ್ನು ಪಡೆಯಲು ಪ್ರವಚನಗಳು ಸಹಕಾರಿಯಾಗುತ್ತವೆ. ಅಲ್ಲದೇ ಮನದ ಕಸವನ್ನು ತೆಗೆಯಲು ಒಳ್ಳೆಯವರ ಸತ್ಸಂಗ ಮಾಡುವುದು.ಎಲ್ಲರೂ ಒಪ್ಪುವಂತ ನಿತ್ಯ ನೂತನ ಸರ್ವಕಾಲಿಕ ಸತ್ಯವಾಗಿರುವ ಬಸವ ತತ್ವವನ್ನು ಪಾಲಿಸುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುಬಸವ ಸಮಿತಿ ಉಪಾಧ್ಯಕ್ಷ ಅಮರಪ್ಪ ಹೀರಾಳ ಅಧ್ಯಕ್ಷತೆ ವಹಿಸಿದ್ದರು.
ರೇವಣಸಿದ್ದಪ್ಪ ಮುಸ್ತಾರಿ ನಿರೂಪಿಸಿದರು, ಅಮೃತ ಮಾನಕರ್ ಸ್ವಾಗತಿಸಿದರು, ವೀರಭದ್ರಪ್ಪ ಕಲಶೆಟ್ಟಿ ವಂದಿಸಿದರು.

ಶಾಂತಪ್ಪ ಬಸಪಟ್ಟಣ, ಬಸವರಾಜ ತರನಳ್ಳಿ, ಗಿರಿಮಲ್ಲಪ್ಪ ವಳಸಂಗ, ಹಣಮಂತರಾವ ದೇಸಾಯಿ, ಮಹಾದೇವ ಮಾನಕರ್,ಚಂದ್ರಕಾಂತ ಅಲಮಾ,ತಿಪ್ಪಣ್ಣರೆಡ್ಡಿ, ಮಲ್ಲಿಕಾರ್ಜುನ ಘಾಲಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here