ಕಲ್ಯಾಣದ ಬದುಕಿಗೆ ಶರಣ ಮಾರ್ಗವೇ ಪರಿಹಾರ: ಸಿದ್ದಲಿಂಗ ಶ್ರೀ

0
204

ರಾವೂರ: ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿರುವ ಶ್ರಾವಣ ಸತ್ಸಂಗ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿದರು.

ನಮ್ಮೇಲ್ಲರ ಬದುಕಿಗೆ ಶರಣರ ವಚನಗಳು ಮಾರ್ಗದರ್ಶಿಗಳಾಗಿವೆ. ವೈಜ್ಞಾನಿಕವಾದ ಪ್ರಗತಿಪರ ಸಮಾಸಮಾಜದ ನಿರ್ಮಾಣದ ಆಶಯ ಹೊಂದಿರುವ ವಚನ ಸಾಹಿತ್ಯ ಅಂದು ಇಂದು ಮುಂದೆಯೂ ಪ್ರಸ್ತುತವಾಗಿದೆ. ಆದರೆ ದುರಂತವೆಂದರೆ ವಚನಗಳು ಕೇವಲ ಕಂಠಪಾಠಕ್ಕೆ ಮತ್ತು ಭಾಷಣಕ್ಕೆ ಸೀಮಿತವಾಗಿವೆ. ವಾಸ್ತವದ ಜೀವನದಲ್ಲಿ ನಾವು ವಚನಗಳ ವಿಚಾರಗಳು ಮತ್ತು ಅವುಗಳ ಆಶಯದಂತೆ ಬದುಕುವ ಪ್ರಯತ್ನ ಮಾಡುತ್ತಿಲ್ಲ.

Contact Your\'s Advertisement; 9902492681

ಶ್ರಾವಣ ಮಾಸದಲ್ಲಿ ವಚನಗಳನ್ನು ಆಲಿಸಿ ಅವುಗಳನ್ನು ಅರ್ಥೈಸಿಕೊಂಡು ಆ ರೀತಿಯಲ್ಲಿ ಬದುಕು ಸಾಗಿಸುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು. ಆದ್ದರಿಂದ ಸಮಾಜದಲ್ಲಿ ಸಾಮರಸ್ಯ, ಒಗ್ಗಟ್ಟು ಮತ್ತು ಸಂಸ್ಕಾರ ಮೂಡಿಸಲು ಮತ್ತು ವ್ಯಾಸನಮುಕ್ತ ಜೀವನ ನಡೆಸಲು ಬೇಕಾದ ಚಿoತನ, ಮಂತನ ಮಾಡಲು ಇಂತಹ ಸತ್ಸಂಗ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀಗಳು ಹೇಳಿದರು.

ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿದರು. 100 ಕ್ಕೂ ಹೆಚ್ಚು ಯುವಕರು ಪಾಲ್ಗೊಂಡಿದ್ದರು.ಪ್ರಮುಖರಾದ ಗುರುರಾಜ ವೈಷ್ಣವ, ಶಾಂತು ಬಾಳಿ, ಭೀಮರಾವ ಮದಗುಣಕಿ, ಮಲ್ಲಿಕಾರ್ಜುನ ಹೋನಗುಂಟಿ, ದತ್ತಾತ್ರೇಯ ಬೆನಕನಳ್ಳಿ, ಮಹಾದೇವ ಹಡಪದ, ಅನಿಲ್ ಪಂಚಾಳ, ಮಂಜುನಾಥ ಜಡಿ, ಸಂಗಣ್ಣ ಸಂಗಾವಿ, ಜಗದೀಶ್ ಬಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಈರಣ್ಣ ಹಳ್ಳಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here