ಬೆಳಗಾವಿ: ಕಾಂಗ್ರೆಸ್ನ ರೆಬಲ್ ಶಾಸಕ ರಮೇಶ ಜಾರಕಿಹೊಳಿ ತಮ್ಮ ಬೆಂಬಲಿಗರ ಶಾಸಕರ ಜತೆ ಚರ್ಚೆ ಮಾಡಿ ಸಂಜೆ ವೇಳೆಗೆ ರಾಜೀನಾಮ ನೀಡುವ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಿನ್ನಮತ ಆರಂಭಕ್ಕೆಸತೀಶ ಜಾರಕಿಹೊಳೆಯೇ ಕಾರಣ. ನಾನು ಸಚಿವನಾಗಿ ಆರಾಮಾಗಿ ಇದ್ದೆ, ಆದರೆ, ಸತೀಶ ಅವರು ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪ್ರಚೋದನೆ ನೀಡಿದರು. ಬಂಡಾಯಕ್ಕೆ ಪ್ರಚೋಧನೆ ನೀಡಿದ್ದೇ ಸತೀಶ. ಬೆಳಗಾವಿಯ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ಬಗ್ಗೆ ರಾಜೀನಾಮೆ ನಂತರ ಬಹಿರಂಗವಾಗಿ ಮಾತನಾಡುತ್ತೇನೆ. ಆಕೆ ಎನಿದ್ದಳು, ಆಕೆಯ ಕುಟುಂಬಕ್ಕೆ ನಾನು ಏನೇನು ಸಹಾಯ ಮಾಡಿದೆಂಬುದನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದರು.
ಇದೇ ವೇಳೆಯಲ್ಲಿ ಮಾತಿಗೆ ಸಿಕ್ಕ ಗೋವಿಂದ ಕಾರಜೋಳ ಅವರು, ನಾನು ಬೆಂಗಳೂರಿಗೆ ಹೋಗುವುದಕ್ಕೂ ರಮೇಶ ಬರುವುದಕ್ಕೂ ಸಂಬಂಧವಿಲ್ಲ. ಚುನಾವಣೆ ಫಲಿತಾಂಶಕ್ಕೂ ಮುಂಚೆ ರಾಜ್ಯ ಸರಕಾರ ಪತನವಾಗಲಿದೆ. ಕಾಂಗ್ರೆಸ್, ಜೆಡಿಎಸ್ ನಿಂದ ಅನೇಕ ಶಾಸಕರು ಹೊರಬರುತ್ತಾರೆ ಎಂದು ಭವಿಷ್ಯ ನುಡಿದರು.