ಕಾಮ್ರೇಡ್ ಸೀತಾರಾಮ್ ಯೆಚೂರಿಯವರಿಗೆ DYFI, SFI ಸಂಘಟನೆಗಳಿಂದ ಶ್ರದ್ಧಾಂಜಲಿ

0
78

ಕಲಬುರಗಿ: SFI ಸಂಘಟನೆಯ ಮೂಲಕ ಹೋರಾಟ ಮಾಡುತ್ತಾ ರಾಜಕೀಯ ಜೀವನ ಆರಂಭಿಸಿದ,ಸಾಮಾಜಿಕ ಬದ್ಧತೆಯುಳ್ಳ ಕಾಮ್ರೇಡ್ ಸೀತಾರಾಮ್ ಯೆಚೂರಿಯವರಿಗೆ DYFI ಮತ್ತು SFI ಸಂಘಟನೆಗಳು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ.

ಶೃದ್ಧಾಂಜಲಿ ಸಭೆಯಲ್ಲಿ DYFI ರಾಜ್ಯ ಅಧ್ಯಕ್ಷರಾದ ಲವಿತ್ರ ಮಾತನಾಡಿ  ಸಾವಿತ್ರಿ ಬಾಯಿ-ಫಾತಿಮಾ ಶೇಖ್  ಗ್ರಂಥಾಲಯದಲ್ಲಿ DYFI ನ ರಾಜ್ತ ಅಧ್ಯಕ್ಷರಾದ ಲವಿತ್ರ ವಸ್ತ್ರದ ಅವರು ಮಾತಮಾಡುತ್ತ  ದೇಶದ ರಾಜಕಾರಣಕ್ಕೆ , ಶೋಶಿತ ಸಮುದಾಯಕ್ಕೆ ಮುಖ್ಯವಾಗಿ ದುಡಿಯುವ ಜನತೆಗೆ ಕಾಂ ಸೀತಾರಾಮ ಯೆಚೂರಿಯವರ ನಿಧನ ತುಂಬಲಾರದ ನಷ್ಟ. ವಿದ್ಯಾರ್ಥಿ ದೆಸೆಯಿಂದಲೇ ಜನಪರ ಚಳುವಳಿಯಲ್ಲಿ ತಮ್ಮ ಕೊನೆ‌ಘಳಿಗೆಯವರೆಗೂ ದುಡಿದವರು ಇವರು. ತುರ್ತು ಸಂದರ್ಭದಲ್ಲಿ  ಇಂದಿರಾಗಾಂಧಿಯವರನ್ನೇ ಎದುರಿಸಿದ ದಿಟ್ಟತನ ಇವರದ್ದು. ಹೋರಾಟ ಮಾಡಿ ಜೈಲು ಸೇರಿದ್ದರು. ಪ್ರಜಾಸತ್ತಾತ್ಮಕ , ಸೌಹಾರ್ದ ಭಾರತ ಕಟ್ಟಲಿಕ್ಕಾಗಿ ಅವರ ಆದರ್ಶಗಳು ಯುವಸಮೂಹಕ್ಕೆ ಮಾದರಿ ಎಂದು ಹೇಳಿದರು.

Contact Your\'s Advertisement; 9902492681

ತಮ್ಮ ಇಡೀ ಜೀವನವನ್ನು ದುಡಿವ ಜನತೆಯ ಚಳುವಳಿಗೆ ಮುಡಿಪಿಟ್ಟು,  ರಾಜ್ಯ ಸಭಾ ಸದಸ್ಯರಾಗಿ ಎಲ್ಲ ಶೋಷಿತ ವಿಭಾಗಗಳ ಪ್ರತಿನಿಧಿಯಾಗಿದ್ದ ಅವರು ಶೋಷಣೆರಹಿತ ಸಮಾಜವನ್ನು ಕಟ್ಟಲಿಕ್ಕಾಗಿ ನಡೆದ ಅನೇಕ ಹೋರಾಟಗಳ ಭಾಗವಾಗಿದ್ದರು. ಎಂದು ಹೇಳುತ್ತ ಸುಜಾತಾ ಅವರು ಅವರ ಹೋರಾಟದ ಜೀವನವನ್ನು ನೆನೆದರು.

ಇಂದು SFI ಮತ್ತು DYFI ಪ್ರಥಮ ಮುಂಚೂಣಿ ನಾಯಕರಾಗಿ ಬೆಳೆದು ಕಾರ್ಮಿಕರ, ಸೌಹಾರ್ದತೆಯ ಒಡನಾಡಿಗಳಾಗಿ ಚಳುವಳಿಯನ್ನು ಮುನ್ನಡೆಸಿದ ಅವರು  ಶ್ರಮಿಕ ಜನತೆಯ ಧ್ವನಿಯಾದರು.  ಈ ಸಂದರ್ಭದಲ್ಲಿ SFI ಸಂಘಟನೆಯ ರಾಜ್ಯ ಸಮಿತಿಯ ಸದಸ್ಯರಾದ ಸುಜಾತಾ ಹಾಗೂ ಮುಖಂಡರಾದ ಮಂಜು , ಬಿಪಿನ್ ಉಪಸ್ಥಿತರಿದ್ದರು.

ಅವರ ಅಗಲಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಜನಪರ ರಾಷ್ಟ್ರ ರಾಜಕಾರಣಕ್ಕೆ  ಭರಿಸಲಾಗದ ನಷ್ಟ ವಾಗಿದ್ದು ಕಾಂ‌ಸೀತಾರಾಂ ಯೇಚೂರಿಯವರಿಗೆ ಅವರಿಗೆ DYFI ಮತ್ತು SFI ರಾಜ್ಯ ಮತ್ತು ಜಿಲ್ಲಾ  ಸಮಿತಿಯು ಭಾವಪೂರ್ಣ ನಮನ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here