ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಸಿಎಂಗೆ ಮನವಿ ನೀಡಲು ಬರುವ ರೈತರಿಗೆ ತಡೆ

0
301

ಕಲಬುರಗಿ: ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಒಡೆತನದ ಸಿದ್ದೇಶಿರಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಆಗಮಿಸಿ ಚಿಂಚೋಳಿ ತಾಲ್ಲೂಕಿನಲ್ಲಿ ರೈತರಿಗೆ ಕಲಬುರಗಿ ನಗರದಲ್ಲಿ ಪ್ರವೇಶದಿಂದ ತಡೆ ಹಿಡಿಯಲಾಗಿದೆ.

ಕಲ್ಯಾಣ ಕರ್ನಾಟಕ ಉತ್ಸವ ಹಾಗೂ 19ನೇ ಸಚಿವ ಸಂಪುಟ ಸಭೆಗೆಂದು ಕಲಬುರಗಿಗೆ ಆಗಮಿಸಿರುವ ಮುಖ್ಯಮಂತ್ರಿಗಳಿಗೆ ಚಿಂಚೋಳಿ ತಾಲ್ಲೂಕಿನ ರಟಕಲ್, ಕಾಳಗಿ, ಕಂಚನಾಳ, ಕೋಡ್ಲಿ, ಸುಣಠಾಣ ಗ್ರಾಮ ಸೇರಿದಂತೆ ಬೇರೆ ಬೇರೆ ಗ್ರಾಮಗಳಿಂದ ಆಗಮಿಸುತ್ತಿರುವ ರೈತರನ್ನು ಕಲಬುರಗಿ ನಗರದಿಂದ 15 ಕಿ.ಮಿ ದೂರದಲ್ಲಿ ತಡೆಹಿಡಿಯಲಾಗಿದೆ ಎಂದು ರೈತ ಸಂಘಟನೆಯ ಮುಖಂಡರು ದುರಿದ್ದಾರೆ.

Contact Your\'s Advertisement; 9902492681

ಕೆಲ ರೈತರು ಪೊಲೀಸರು ತಡೆದಿರುವ ಸ್ಥಳದಲ್ಲೇ ಪೊಲೀಸರು ಮತ್ತು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತಸೇನೆ ತಾಲೂಕ ಅಧ್ಯಕ್ಷ ರೈತ ಮುಖಂಡರಾದ ವೀರಣ್ಣ ಗಂಗಾಣಿ ರಟಕಲ್, ಬಸವರಾಜ ಪಾಟೀಲ್ ಅಂಕಲಗಿ, ಶಾಂತವೀರಪ್ಪ ಕಲಬುರ್ಗಿ, ಹೆಬ್ಬಾಳ್ ಶರಣು ಬೈರಪ ರಟ್ಕಲ್, ರಾಜಶೇಖರ್ ಗುಡುದಾ, ಕರಬಸಪ್ಪ ಉಜ್ಜ ಹರ್ಸೂರ್ ಸಿದ್ದಪ್ಪ ಕಲ್ ಶೆಟ್ಟಿ ಹೊಳಗೇರಾ ಗುಂಡಪ್ಪ ಮಾಳಗಿ ಕೋಲ್ಡ ಶೆಟ್ಟಿ ಪವಾರ್ ಚಿಂಚೋಳಿ H ಕಾಳಗಿ ಮಂಗಲಗಿ ಕೊಡ್ದೂರ್ ರಾಜಾಪುರ್ ಅನೇಕ ರೈತರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here