ಕಲಬುರಗಿ : ಜಿಲ್ಲೆಯ ಜೇವರ್ಗಿ ತಾಲೂಕಿನ ಗಂವ್ಹಾರ್ ಪಂಚಾಯತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವುದಾಗಿ ಆರೋಪಿಸಿ ಅವ್ಯಹಾರದಲ್ಲಿ ಭಾಗಿಯಾಗಿರುವ ಅಧ್ಯಕ್ಷ ಮತ್ತು ಪಂಚಾಯಿತಿಗೆ ಸಂಬಂಧಪಟ್ಟ ಅಭಿಯಂತರನ್ನು ಸದಸ್ಯತ್ವ ರದ್ದು ಹಾಗೂ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವೀರ ಕನ್ನಡಿಗರ ಸೇನೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ನಾಯ್ಕೋಡಿ ಗಂವ್ಹಾರ ತಿಳಿಸಿದರು.
15ನೇ ಹಣಕಾಸು, ಕರವಸೂಲಿ, ಹಾಗೂ ಅಂಗವಿಕಲರ ಸಹಾಯಧನ ಇವುಗಳಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ ಪಿ.ಡಿ.ಒ. ಅಧ್ಯಕ್ಷರು, ಮತ್ತು ಅಭಿಯಂತರರು ಈ ಮೂವರಲ್ಲಿ ಈಗಾಗಲೆ ಪಿ.ಡಿ.ಒ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಆದರೆ ಲೂಟಿ ಕೊರರಲ್ಲಿ ಇನ್ನು ಇಬ್ಬರಾದ ಅಧ್ಯಕ್ಷರು ಹಾಗೂ ಅಭಿಯಂತರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಮಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಅವ್ಯವಹಾರದ ದಾಖಲೆಗಳ ಸಮೇತ ತಿಂಗಳಗಳ ಕಚೇರಿ ಹಾಗೂ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಿಗೆ ಜೇವರ್ಗಿ ತಾಲೂಕ ಕಿರಿಯ ಅಭಿಯಂತರರಿಗು ಸಲ್ಲಿಸಲಾಗಿದೆ. ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಪಟ್ಟೆದಾರ, ಪರಮಾನಂದ ಯಲಗೊಡ, ತಿಪ್ಪಣ್ಣ ಜೈನಾಪೂರ, ಸೈಬಣ್ಣಾ ಪೂಜಾರಿ ಸೇರಿದಂತೆ ಕಾರ್ಯಕರ್ತಕರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.