ಸುರಪುರ: ಪ್ರತಿಯೊಬ್ಬ ಮನುಷ್ಯನಿಗೆ ಹಿರಿಯರ ಮಾರ್ಗದರ್ಶನ ಮುಖ್ಯವಾದುದು,ಅಲ್ಲದೆ ಹಿರಿಯರನ್ನು ಗೌರವಿಸುವುದು ಕಿರಿಯರ ಕರ್ತವ್ಯವೆಂದು ಭಾವಿಸಬೇಕು,ಹಿರಿಯರಿಗೆ ಗೌರವ ನೀಡುವುದು ನಮ್ಮ ಸಂಸ್ಕøತಿಯಾಗಿದೆ ಎಂದು ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಫಕೀರವ್ವ ಕೆಳಗೇರಿ ಮಾತನಾಡಿದರು.
ನಗರದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ,ತಾಲ್ಲೂಕ ನ್ಯಾಯವಾದಿಗಳ ಸಂಘ,ತಾಲ್ಲೂಕ ಆಡಳಿತ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸರ್ಕಾರ ಹಿರಿಯ ನಾಗರಿಕರಿಗಾಗಿ ಅನೇಕ ಸೌಲಭ್ಯಗಳನ್ನು ನೀಡದ್ದು,ಹಿರಿಯರು ಅವುಗಳ ಸದುಪಯೋಗ ಮಾಡಿಕೊಳ್ಳ ಬೇಕು.ಇಂದು ಹೆಚ್ಚಿನ ಮಕ್ಕಳು ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಭಾವನೆ ಹೊಂದಿದ್ದಾರೆ,ಆದರೆ ಅದೇ ಹಿರಿಯರು ನಮ್ಮನ್ನೆ ಹೆತ್ತು ಹೊತ್ತು ಬೆಳೆಸಿದ್ದಾರೆ ಎನ್ನುವುದನ್ನು ಮರೆಯಬಾರದು ಎಂದರು.
ಹಿರಿಯ ವಕೀಲ ಅರವಿಂದ ಕುಮಾರ ಮಾತನಾಡಿ,ಅನೇಕ ಜನ ಹಿರಿಯರು ಮಕ್ಕಳಿಗೆ ಸಂಸ್ಕಾರಕ್ಕಿಂತಲೂ ಹಣವೇ ಮುಖ್ಯ ಎನ್ನುವಂತೆ ಬೆಳೆಸುತ್ತಾರೆ.ಮುಂದೆ ಅದೇ ಮಕ್ಕಳು ಹಿರಿಯರನ್ನು ಬಿಟ್ಟು ವಿದೇಶದಲ್ಲಿದ್ದು ಹಿರಿಯರು ಕಡೆಗಣಿಸುತ್ತಾರೆ.ಇಂತಹ ಅನೇಕ ಘಟನೆಗಳು ನೋಡಿದ್ದೇವೆ,ಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು ಎಂದರು.ಇದೇ ಸಂದರ್ಭದಲ್ಲಿ ವಕೀಲ ವಿ.ಸಿ ಪಾಟೀಲ್ ಮಾತನಾಡಿದರು ಹಾಗೂ ಹಿರಿಯ ವಕೀಲ ನಿಂಗಣ್ಣ ಚಿಂಚೋಡಿ 2007ರ ಹಿರಯ ನಾಗರಿಕ ಮತ್ತು ಪೋಷಕರ ಸಂರಕ್ಷಣಾ ಅಧಿನಿಯಮದ ಕುರಿತು ಉಪನ್ಯಾಸ ನೀಡಿದರು.
ಗ್ರೇಡ-2 ತಹಸಿಲ್ದಾರ್ ಮಲ್ಲಯ್ಯ ದಂಡು ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ,ಸಹಾಯಕ ಸರ್ಕಾರಿ ಅಭಿಯೋಜಕ ಮರೆಪ್ಪ ಹೊಸಮನಿ,ಗುರುಬಸಪ್ಪ,ಹಿರಿಯ ನಾಗರಿಕರು, ಸೇರಿದಂತೆ ಅನೇಕ ಜನ ವಕೀಲರು ಉಪಸ್ಥಿತರಿದ್ದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಂದಕುಮಾರ ಕನ್ನೆಳ್ಳಿ ನಿರೂಪಿಸಿದರು,ಚನ್ನಬಸವ ಸ್ವಾಗತಿಸಿದರು,ಮಂಜುನಾಥ ಹುದ್ದಾರ ವಂದಿಸಿದರು.ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಹಿರಿಯ ನಾಗರಿಕರ ಸಾಮಾನ್ಯ ಕಾನೂನುಗಳು ಪುಸ್ತಕ ನೀಡಿ ಗೌರವಿಸಲಾಯಿತು.