ಕಲಬುರಗಿ: ನಗರದ ಆಕೃತಿ ನಿಲಯ, ವಿ.ವಿ.ಹೆಚ್ ಎಸ್ ಮೈದಾನ ಹತ್ತಿರ ಬ್ಯಾಂಕ್ ಕಾಲನಿಯಲ್ಲಿ ಡಿ. 29 ಭಾನುವಾರ ಸಂಜೆ 4.30 ಕ್ಕೆ ನೂತನ ಸಂಸ್ಥೆ ಎನ್ ಕೆ. ಆರ್ಟ ಮತ್ತು ಕಲ್ಚರ್ ಸೊಸೈಟಿ ಉದ್ಘಾಟನೆ ಹಾಗೂ ನಾಗರಾಜ ಕುಂಬಾರ ಏಕವ್ಯಕ್ತಿಯ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ.
ಗುಲ್ಬರ್ಗವಿಶ್ವವಿದ್ಯಾಲಯ.ಕಲಬುರಗಿ ದೃಶ್ಯ ಕಲಾ ವಿಭಾಗದ , ಸಂಯೊಜಕ ಪ್ರೊ. ಅಬ್ದುಲ್ ರಬ್ ಉಸ್ತಾದ್ ಉದ್ಘಾಟಿಸಲಿದ್ದಾರೆ. ಕಲಬುರಗಿ ಹಿಂದಿ ಪ್ರಚಾರ ಸಭಾ ಅದ್ಯಕ್ಷ ಅಶೋಕ ಗುರುಜಿ, ಹಾಗೂ ನವ ದೆಹಲಿ ಕೇಂದ್ರ ಲಲಿತ ಕಲಾ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತ ಮಹಮ್ಮದ ಅಯಾಜುದ್ದಿನ ಪಟೇಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಹಿರಿಯ ಚಿತ್ರಕಲಾವಿದ ರಾಜಶೇಖರ ಶಾಮಣ್ಣ ಅದ್ಯéಕ್ಷತೆವಹಿಸಲಿದ್ದಾರೆ. ನಗರದ ಖ್ಯಾತ ಹಿರಿಯ ಗಾಯಕ ರಮೇಶ ಜೋಶಿ ವಿಶೇಷ ಅವ್ಹಾನಿತರಾಗಿ ಆಗಮಿಸಲಿದ್ದಾರೆ. ಎಂದು ಹಿರಿಯ ಚಿತ್ರಕಲಾವಿದ ಮತ್ತು ಪತ್ರಿಕಾ ಛಾಯಾಗ್ರಾಹಕ ನಾರಾಯಣ ಎಂ. ಜೋಶಿ ಅವರು ತಿಳಿಸಿದ್ದಾರೆ.