ಸದಾಶಿವ ಆಯೋಗದ ವರದಿ ಅವಾಸ್ತವಿಕ: ನಾಗಮೋಹನದಾಸ ಮುಂದೆ ಕುಡಕಿ ಮನವಿ

0
30
ಇ-ಮೀಡಿಯಾ ಲೈನ್ ನ್ಯೂಸ್
ಸದಾಶಿವ ಆಯೋಗದ ವರದಿಯ ಪ್ರಮುಖ ಅಂಶಗಳನ್ನು ಗಮನಿಸಿದರೆ ಸದರಿ ವರದಿಯು ಅವಾಸ್ತವಿಕ ಸುಳ್ಳು ಅಂಶಗಳಿಂದ ಕೂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ.
ಮತ್ತೊಮ್ಮೆ ಆರ್ಥಿಕˌ ಶೈಕ್ಷಣಿಕ ಆಧಾರದ ಮೇಲೆ ಒಳಮೀಸಲಾತಿಯ ಪ್ರಮಾಣ ಹಂಚಿಕೆಯಾಗಬೇಕು ಎಂದು ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ದತ್ತಾತ್ರೆಯ ಕುಡಕಿ ಆಗ್ರಹಿಸಿದ್ದಾರೆ.
ನ್ಯಾಯಮೂರ್ತಿ ಸದಾಶಿವ ಆಯೋಗದ ಅಧ್ಯಕ್ಷ ನಾಗಮೋಹನ ದಾಸ ಅವರಿಗೆ ಮನವಿ ಸಲ್ಲಿಸಿದ ಅವರು
೧೮೮೧, ೧೮೯೧, ೧೯೦೧, ೧೯೨೧ ಮತ್ತು ೧೯೦೧ ರ ಜನಗಣತಿಯನ್ನು ಅವಲೋಕಿಸಿದರೆ ಹಿಂದೂ ಧರ್ಮದ ೪ ವರ್ಣಗಳಿಂದ ಹೊರಗಿಟ್ಟು  ೫ನೇ ಗುಂಪಿನಡಿ ಸೇರ್ಪಡೆ ಮಾಡಿ ಜನಗಣತಿಯಲ್ಲಿ ಗುರುತಿಸಲಾಗಿದೆ. ಬಲಗೈ, ಛಲವಾದಿ, ಮಹಾರ್, ಮಾಲಾ, ಪರಯ್ಯಾ ಅಸ್ಪೃಶ್ಯಾ ಸಮುದಾಯದ ಜಾತಿಗಳಾದ ಇವು ಕರ್ನಾಟಕದಾದ್ಯಂತಹ ರಾಜ್ಯವ್ಯಾಪ್ತಿ ಜಾತಿಗಳಾಗಿವೆ.
೨೦೦೫ ರಲ್ಲಿ ರಚನೆಯಾದ ಸದಾಶಿವ ಆಯೋಗ ೧೫.೦೬.೨೦೧೨ ರಂದು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿ ಎಡಗೈ ಸಂಬಂಧಿಸಿದ ಜಾತಿಗಳಿಗೆ ಮೀಸಲಾತಿ ಪ್ರಮಾಣ ೬% ನೀಡಿ ಬಲಗೈ ಸಂಬಂಧಿಸಿದ ಜಾತಿಗಳಿಗೆ ಮೀಸಲಾತಿ ಪ್ರಮಾಣ ೫% ನೀಡಿ ಬಲಗೈ ಸಂಬಂಧಿಸಿದ ೨೯ ಜಾತಿಗಳನ್ನು ಸದಾಶಿವ ಆಯೋಗದ ವರದಿಯ ಪ್ರಮುಖ ಅಂಶಗಳನ್ನು ಗಮನಿಸಿದರೆ ಸದರಿ ವರದಿಯು ಅವಾಸ್ತವಿಕ ಸುಳ್ಳು ಅಂಶಗಳಿಂದ ಕೂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಅವಾಸ್ತವಿಕ ಮತ್ತು ಸುಳ್ಳು ಅಂಶಗಳು
ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನಸಂಖ್ಯೆಕಿಂತ ಎಡಗೈ ಸಮುದಾಯದ ಜನಸಂಖ್ಯೆ ಶೇ. ೧.೪೬ ರಷ್ಟು ಹೆಚ್ಚು ಇದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಅ ವಾಸ್ತವಿಕ ಹಾಗೂ ಸುಳ್ಳು ಅಂಕಿ ಅಂಶವೆಂದು ಸ್ಪಷ್ಟವಾಗುತ್ತದೆ.
ಸದಾಶಿವ ಆಯೋಗದ ವರದಿಯಲ್ಲಿ ನಮೂದಿಸಿದಂತೆ ೬,೫೨,೦೦೦ (ಆರು ಲಕ್ಷ ಐವತ್ತೆರಡು ಸಾವಿರ) ಜನರು ತಮ್ಮ ಉಪಜಾತಿಯನ್ನು ನಮೂದಿಸಿರುವುದಿಲ್ಲ. ಮತ್ತು ಜನರು ಉಪಜಾತಿಯು ಗೌಪ್ಯವಾಗಿ ಇಟ್ಟಿರುತ್ತಾರೆಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ನಮೂದಿಸಲಾರದ ಉಪಜಾತಿಯ ೬,೫೨,೦೦೦ (ಆರು ಲಕ್ಷ ಐವತ್ತೆರಡು ಸಾವಿರ) ಜನರನ್ನು ಎಡಗೈ ಸಮುದಾಯದ ಜನಸಂಖ್ಯೆ ಎಂದು ತಿರ್ಮಾನಿಸಿ ಸದಾಶಿವ ಆಯೋಗವು ಉಪಜಾತಿಗಳ ವರ್ಗಿಕರಣ ಹಾಗೂ ಜನಸಂಖ್ಯಾ ಪ್ರಮಾಣವನ್ನು ನಿಗದಿಪಡಿಸುವಲ್ಲಿ ಅನುಸರಿಸಿರುವ ಮಾರ್ಗ ಪಾರದರ್ಶಕವಾಗಿ ಇಲ್ಲದೇ ಇರುವದರಿಂದ ವರದಿಯ ಸ್ಪಷ್ಟತೆ ಮತ್ತು ನಿಖರತೆ ಸುಳ್ಳು ಅಂಕಿ ಅಂಶ ಮತ್ತು ಅವಾಸ್ತವಿಕತೆಯಿಂದ ಒಳಗೊಂಡಿರುತ್ತದೆ.
ಮುಂದುವರೆದು ಬಿಜೆಪಿ ಸರಕಾರದಲ್ಲಿ ಒಳಮೀಸಲಾತಿ ನೀಡಲು ಸಂಪುಟ ಉಪ ಸಮಿತಿಯ ಅಧ್ಯಕ್ಷರಾದ ಜೆ.ಸಿ ಮಾಧುಸ್ವಾಮಿ ಉಪ ಸಮಿತಿಯ ಪರಿಶಿಷ್ಟ ಜಾತಿಗಳ ಬಲಗೈ ಸಮುದಾಯಗಳಲ್ಲಿ ಹೊಲೆಯ, ಹೊಲೆಯರ್, ಹೊಲಿಯ ಈ ಜಾತಿಗಳು ಸರಕಾರದಿಂದ ಎಲ್ಲಾ ಸೌಲಭ್ಯ  ಪಡೆದವರು ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದವರು ಎಂದು ಈ ಮೂರು ಉಪಜಾತಿಗಳನ್ನು ಪೂರ್ವಾಗ್ರಹ ಪೀಡಿತರಾಗಿ ಗ್ರೂಪ್ ೪ ನ್ನು ಮಾಡಿ ಅದನ್ನು ಶೇಕಡಾವಾರು ಕೇವಲ ೧% ಪ್ರತಿಶತ ಒಳಮೀಸಲಾತಿ ನೀಡಿ ಘೋರ ಅನ್ಯಾಯ ಮಾಡಿದ್ದಾರೆ. ಹಿಂದಿನ ಬಿಜೆಪಿ ಸರಕಾರ ಒಳಮೀಸಲಾತಿ ಹಂಚಿಕೆ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವದು ಆಶ್ಚರ್ಯಕರವಾಗಿದೆ.
ಮುಂದುವರೆದು ಭಾಗವಾಗಿ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಂಗಳೂರು, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪೂರ ಈ ೧೨ ಜಿಲ್ಲೆಗಳಲ್ಲಿ ಬಲಗೈ ಸಮುದಾಯವನ್ನು ಆದಿಕರ್ನಾಟಕವೆಂದು ಸರಕಾರ ಗುರುತಿಸಿದೆ. ಮತ್ತು ತುಮಕೂರು, ಚಿತ್ರದುರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಹಾವೇರಿ, ೮ ಜಿಲ್ಲೆಗಳಲ್ಲಿ ಎಡಗೈ ಸಮುದಾಯವನ್ನು (ಮಾದಿಗ)  ಆದಿಕರ್ನಾಟಕವೆಂದು  ಸರಕಾರ ಗುರುತಿಸಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಬಲಗೈ (ಹೊಲೆಯ) ಮತ್ತು ಎಡಗೈ (ಮಾದಿಗ) ಸಮೂಹವನ್ನು ಆದಿ ಕರ್ನಾಟಕವೆಂದು ಗುರುತಿಸಿ ಸರಕಾರ ಜಾತಿಗಳ ಗೆಜೆಟ್‌ನಲ್ಲಿ ಸ್ಪಷ್ಟತೆಯನ್ನು ಸರಕಾರದ ಮಟ್ಟದಲ್ಲಿ ವಿಂಗಡಣೆಯಾಗಿರುವುದಿಲ್ಲ. ಇಲ್ಲಿ ಸರಕಾರದಿಂದ ತಪ್ಪುಗಳು ಆಗಿರುವುದು ಸ್ಪಷ್ಟವಾಗಿದೆ.
ಮುಂದುವರೆದು ಸ್ವಾತಂತ್ರ್ಯ ಪೂರ್ವದಿಂದಲೂ ಬಲಗೈ ಮತ್ತು ಎಡಗೈ ಜಾತಿಗಳ ಜನರು ಕ್ರೈಸ್ತ ಮತಕ್ಕೆ ಮತಾಂತರ ಹೊಂದಿರುತ್ತಾರೆ. ಗಮನಿಸಬೇಕಾದ ಅಂಶವೆಂದರೆ ಕ್ರೈಸ್ತ ಮತಕ್ಕೆ ಮತಾಂತರ ಹೊಂದಿದ ಎಡಗೈ ಸಮುದಾಯದ ಜನರು ಜಾತಿ ಗಣತಿ ಸಂದರ್ಭಗಳಲ್ಲಿ ಪರಿಶಿಷ್ಟ ಜಾತಿಯವರೆಂದು ಗುರುತಿಸಿಕೊಳ್ಳುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಜಾತಿಗಳ ಗಣತಿಯಗಳಲ್ಲಿ ಪರಿಗಣಿಸಬಾರದು.
ಈ ಎಲ್ಲಾ ಪ್ರಮುಖ ಅಂಶಗಳನ್ನು ಪರಿಗಣಿಸಿ ಎಲ್ಲಾ ಕುಟುಂಬಗಳ ಪ್ರತಿ ಸದಸ್ಯರ ತಲೆ ಏಣಿಕೆ ಮಾಹಿತಿ ಸಂಗ್ರಹಿಸಬೇಕು ಮತ್ತು ಸುಪ್ರಿಂಕೋರ್ಟ್ ಆದೇಶದಂತೆ ಒಳಮೀಸಲಾತಿಯನ್ನು ಹೊಸದಾಗಿ ಸಮೀಕ್ಷೆ ನಡೆಸಿ ಅಥವಾ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಜಾತಿ ಸಮೀಕ್ಷೆ ನಡೆಸಿ ಅದರ ವರದಿ ಆಧರಿಸಿ ಕೆನೆಪದರ (ಕ್ರಿಮಿಲೆಯರ್) ರಹಿತವಾಗಿ ಒಳಮೀಸಲಾತಿ ಜಾರಿ ಮಾಡಬೇಕು. ಹೊಲೆಯ, ಹೊಲೆರ್, ಹೊಲಿಯ ಈ ಜಾತಿಗಳಿಗೆ ಜನಸಂಖ್ಯಾ ಅನುಗುಣವಾಗಿ ಕನಿಷ್ಠ ೬.೫% ಒಳಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಏಕ ಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಹೆಚ್.ಎನ್ ನಾಗಮೋಹನದಾಸ ಆಯೋಗಕ್ಕೆ ಬೆಂಗಳೂರಿನಲ್ಲಿ ಕರ್ನಾಟಕ ದಲಿತ ಸೇನೆ ರಾಜಾಧ್ಯಕ್ಷರಾದ ದತ್ತಾತ್ರೇಯ ಕುಡಕಿ ಮತ್ತು ನವಕರ್ನಾಟಕ ಸಂಸ್ಥಾಪಕ ಅಧ್ಯಕ್ಷರಾದ ಅಂಬಾಜಿ ಮೇಟಿ ಜಂಟಿಯಾಗಿ ಆಯೋಗದ ಮುಂದೆ ಹಾಜರಾಗಿ ಮನವಿಯನ್ನು ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here